ಸಿನಿಮಾ

ವಿವಿಧೆಡೆ ಎಂ.ಟಿ.ಕೃಷ್ಣೇಗೌಡ ಬಿರುಸಿನ ಪ್ರಚಾರ

ಅರಕಲಗೂಡು: ತಾಲೂಕಿನ ವಿವಿಧೆಡೆ ಪಕ್ಷೇತರ ಅಭ್ಯರ್ಥಿ ಎಂ.ಟಿ.ಕೃಷ್ಣೇಗೌಡ ಭಾನುವಾರ ಬಿರುಸಿನ ಮತ ಪ್ರಚಾರ ನಡೆಸಿದರು.

ಈ ವೇಳೆ ಹಲವರು ಸ್ವಾಭಿಮಾನಿ ಪಕ್ಷ ಸೇರ್ಪಡೆಯಾಗುವ ಮೂಲಕ ಕೃಷ್ಣೇಗೌಡರಿಗೆ ಬೆಂಬಲ ಸೂಚಿಸಿದರು. ಕೇರಳಾಪುರ, ಕೊಣನೂರು, ರಾಮನಾಥಪುರ ಮತ್ತು ಅಗ್ರಹಾರ ಗ್ರಾಮಕ್ಕೆ ಕೃಷ್ಣೇಗೌಡರು ಬೆಂಬಲಿಗರೊಂದಿಗೆ ಭೇಟಿ ನೀಡಿ ಮತಯಾಚಿಸಿದರು. ಕೇರಳಾಪುರ ಗ್ರಾಮದಲ್ಲಿ ತೆರೆದ ವಾಹನದಲ್ಲಿ ವಿವಿಧ ಬೀದಿಗಳಲ್ಲಿ ಸಾಗಿ ಮತ ಪ್ರಚಾರ ನಡೆಸಿದರು.

ಕೇರಳಾಪುರ, ರಾಮನಾಥಪುರ, ಕೊಣನೂರು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದು, ಗ್ರಾಮಗಳ ಅಭಿವೃದ್ಧಿ ವೇಗಕ್ಕೆ ತಕ್ಕಂತೆ ಸೌಲಭ್ಯಗಳು ಧಕ್ಕಿಲ್ಲ. ಕ್ಷೇತ್ರದಲ್ಲಿ ಕೆಲವರಿಗೆ ರಾಜಕೀಯ ಅಧಿಕಾರ ಕೊಟ್ಟು ನೋಡಿದ್ದೀರಿ. ನನಗೂ ಒಂದು ಅವಕಾಶ ನೀಡಿ ಮತದಾರರ ಸೇವೆ ಮಾಡಲು ಚುನಾವಣೆಯಲ್ಲಿ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ರವಿಕುಮಾರ್, ಬಸವಾಪಟ್ಟಣ ಗ್ರಾಪಂ ಅಧ್ಯಕ್ಷ ಪ್ರಶಾಂತ್, ಮುಖಂಡರಾದ ಪರಮೇಶ್, ನಾಗರಾಜ್, ರಾಮೇಗೌಡ, ದೊಡ್ಡೇಗೌಡ, ವೆಂಕಟೇಶ್ ಇತರರಿದ್ದರು.

Latest Posts

ಲೈಫ್‌ಸ್ಟೈಲ್