ಸಿನಿಮಾ

ವಿವಿಧೆಡೆ ಅಂಚೆ ಮತದಾನ

ಶನಿವಾರಸಂತೆ: ವಿಧಾನಸಭಾ ಚುನಾವಣೆಯ ಹಿನ್ನೆಲೆ ವಿವಿಧೆಡೆ ಅಂಚೆ ಮತದಾನ ಬಿರುಸಿನಿಂದ ನಡೆಯುತ್ತಿದೆ.

ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ರಾಜ್ಯ ಚುನಾವಣೆ ಆಯೋಗ ಈ ಬಾರಿ ಅಂಗವಿಕಲರು ಹಾಗೂ ಚುನಾವಣೆ ದಿನ ಮತಗಟ್ಟೆಗೆ ಹೋಗಿ ಮತಚಲಾಯಿಸಲು ಸಾಧ್ಯವಾಗದಿರುವ 80 ವರ್ಷ ಮೇಲ್ಪಟ್ಟ ಮತದಾರರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಮನೆಗೆ ತೆರಳಿ ಅಂಚೆ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದೆ.


ಏ.29ರಂದು ಅಂಚೆ ಮತದಾನ ಕಾರ್ಯ ಪ್ರಾರಂಭಗೊಂಡಿದ್ದು, ಮೇ 6ಕ್ಕೆ ಅಂಚೆ ಮತದಾನ ಕಾರ್ಯ ಕೊನೆಗೊಳ್ಳಲಿದ್ದು, ಈಗಾಗಲೆ ಚುನಾವಣಾ ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಸಂಬಂಧಪಟ್ಟ ಗ್ರಾಪಂಗಳ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಬಿರುಸಿನ ಅಂಚೆ ಮತದಾನ ಕಾರ್ಯ ನಡೆಯುತ್ತಿದೆ. ಶನಿವಾರಸಂತೆ, ಆಲೂರುಸಿದ್ದಾಪುರ, ನಿಡ್ತ, ಗೌಡಳ್ಳಿ, ಮಳ್ತೆ ಗ್ರಾಪಂ ವ್ಯಾಪ್ತಿಯ ವಿವಿಧ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಮಂಗಳವಾರ ಬಿರುಸಿನ ಅಂಚೆ ಮತದಾನ ಕಾರ್ಯ ನಡೆಯಿತು.
ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಮನೆಗಳಿಗೆ ಹೋಗಿ ಅಂಗವಿಕಲರು ಸೇರಿದಂತೆ 80 ವರ್ಷ ಮೇಲ್ಪಟ್ಟವರಿಂದ ಅಂಚೆ ಮತದಾನ ಮಾಡಿಸಿದರು. ಫಲಾನುಭವಿ ಮತದಾರರು ಅಷ್ಟೇ ಹುರುಪಿನಿಂದ ಮತ ಚಲಾಯಿಸಿದ್ದಾರೆ.


ಶನಿವಾರಸಂತೆ, ಆಲೂರುಸಿದ್ದಾಪುರ, ನಿಡ್ತ ಗ್ರಾಪಂಗಳ ವಿವಿಧ 75 ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು 126 ಅಂಚೆ ಮತದಾರರಿದ್ದು, ಈ ಪೈಕಿ ಮಂಗಳವಾರ 76 ಮತದಾರರು ಅಂಚೆ ಮೂಲಕ ಮತದಾನ ಮಾಡಿದ್ದಾರೆ.

ಗೌಡಳ್ಳಿ, ಮಳ್ತೆ ಗ್ರಾಪಂ ವ್ಯಾಪ್ತಿಯ ವಿವಿಧ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಒಟ್ಟು 87 ಅಂಚೆ ಮತದಾರರಿದ್ದು ಮಂಗಳವಾರ 30 ಮತದಾರರು ಅಂಚೆ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಡಿಮೆ ಅಂಚೆ ಮತದಾರರು ಇರುವ ಬೂತ್ ಮತಗಟ್ಟೆ ವ್ಯಾಪ್ತಿಯಲ್ಲಿ ಈಗಾಗಲೆ ಅಂಚೆ ಮತದಾನ ಕಾರ್ಯವನ್ನು ಮುಗಿಸಿದ್ದಾರೆ.

Latest Posts

ಲೈಫ್‌ಸ್ಟೈಲ್