Thursday, 13th December 2018  

Vijayavani

Breaking News

ವಿರುಷ್ಕಾ ಮರುಮದುವೆ?

Thursday, 11.01.2018, 3:02 AM       No Comments

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮ ದೂರದ ಇಟಲಿಯಲ್ಲಿ ರಹಸ್ಯವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರೂ, ಅವರ ಅಭಿಮಾನಿಗಳು ಸಾಕಷ್ಟು ಸಂಭ್ರಮಪಟ್ಟಿದ್ದರು. ನಂತರ ದಂಪತಿ ಭಾರತದಲ್ಲಿ ಏರ್ಪಡಿಸಿದ್ದ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರು ಭಾಗವಹಿಸಿ ಶುಭಹಾರೈಸಿದ್ದರು. ಆದರೆ ಈಗ ಈ ವಿವಾಹವೇ ಅಮಾನ್ಯಗೊಳ್ಳುವ ಭೀತಿ ಎದುರಾಗಿದೆ. ವಿದೇಶಿ ನೆಲದಲ್ಲಿ ವಿವಾಹವಾಗುವಾಗ ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸದಿರುವುದು ಇದಕ್ಕೆ ಕಾರಣ.

ವಿವಾಹವನ್ನು ರಹಸ್ಯವಾಗಿ ನಡೆಸುವ ಅವಸರದಲ್ಲಿ ಕೊಹ್ಲಿ-ಅನುಷ್ಕಾ, ರೋಮ್ ಭಾರತೀಯ ರಾಯಭಾರಿ ಕಚೇರಿಗೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಭಾರತೀಯ ಸಂವಿಧಾನದ ಅನ್ವಯ ಭಾರತೀಯರು ವಿದೇಶಿ ನೆಲದಲ್ಲಿ ವಿವಾಹವಾಗುವಾಗ 1969ರ ವಿದೇಶಿ ವಿವಾಹ ಕಾಯ್ದೆ ಅನ್ವಯ ನೋಂದಣಿ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ವಿವಾಹ ರದ್ದಾಗಲಿದೆ ಅಥವಾ ಕೋರ್ಟ್​ನಲ್ಲಿ ಮರುಮದುವೆಯಾಗಬಹುದು. ಭಾರತದಲ್ಲಿ ತಾವು ನೆಲೆಸುವ ರಾಜ್ಯದ ಪ್ರಕ್ರಿಯೆಯನ್ನು ಅವರು ಈ ವೇಳೆ ಅನುಸರಿಸಬೇಕು.

ಪಂಜಾಬ್-ಹರಿಯಾಣ ಹೈಕೋರ್ಟ್ ವಕೀಲ ಹೇಮಂತ್ ಕುಮಾರ್ ಇತ್ತೀಚೆಗೆ ಸಲ್ಲಿಸಿದ್ದ ಆರ್​ಟಿಐ ಅರ್ಜಿಯಿಂದ ಕೊಹ್ಲಿ-ಅನುಷ್ಕಾ ಇಟಲಿಯ ಟುಸ್ಕಾನಿಯಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳದಿರುವುದು ಖಚಿತಗೊಂಡಿದೆ. ರೋಮ್ಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈ ವಿಷಯವನ್ನು ದೃಢಪಡಿಸಿದೆ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top