28.5 C
Bengaluru
Monday, January 20, 2020

ವಿರಾಟ್ ಶತಕಕ್ಕೆ ಒಲಿಯದ ಜಯ

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ರಾಂಚಿ: ವಿಶ್ವದ ಯಾವುದೇ ದಾಳಿಯನ್ನು ಎಗ್ಗಿಲ್ಲದಂತೆ ಎದುರಿಸಿ ಲೀಲಾಜಾಲವಾಗಿ ಶತಕ ಬಾರಿಸುವ ವಿರಾಟ್ ಕೊಹ್ಲಿಯ ಮತ್ತೊಂದು ಮನಮೋಹಕ ಶತಕಕ್ಕೆ ಈ ಬಾರಿ ಗೆಲುವಿನ ಕಿರೀಟ ಲಭಿಸಲಿಲ್ಲ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ಯಾಪ್ಟನ್, ಏಕದಿನ ಮಾದರಿಯಲ್ಲಿ ಬಾರಿಸಿದ 41ನೇ ಶತಕದ ಸಹಾಯದಿಂದ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತ ತಂಡ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ 32 ರನ್​ಗಳ ಸೋಲು ಎದುರಿಸಿದೆ. ಅದರೊಂದಿಗೆ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತದ ಮುನ್ನಡೆ 2-1ಕ್ಕಿಳಿದಿದೆ.

ಜೆಎಸ್​ಸಿಎ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ, ಇಬ್ಬನಿಯ ಸಮಸ್ಯೆಯ ಕಾರಣ ನೀಡಿ ಮೊದಲು ಬೌಲಿಂಗ್ ಆಯ್ದುಕೊಂಡಿತು. ಉಸ್ಮಾನ್ ಖವಾಜ (104 ರನ್, 113 ಎಸೆತ, 11 ಬೌಂಡರಿ, 1 ಸಿಕ್ಸರ್) ಬಾರಿಸಿದ ಚೊಚ್ಚಲ ಶತಕ ಹಾಗೂ ನಾಯಕ ಆರನ್ ಫಿಂಚ್ (93 ರನ್, 99 ಎಸೆತ, 10 ಬೌಂಡರಿ, 3 ಸಿಕ್ಸರ್) ನೆರವಿನಿಂದ ಆಸೀಸ್ 5 ವಿಕೆಟ್​ಗೆ 313 ರನ್ ಪೇರಿಸಿತು. ಪ್ರತಿಯಾಗಿ ವಿರಾಟ್ ಕೊಹ್ಲಿ (123ರನ್, 95 ಎಸೆತ, 16 ಬೌಂಡರಿ, 1 ಸಿಕ್ಸರ್) ಸರಣಿಯಲ್ಲಿ ಬಾರಿಸಿದ ಸತತ 2ನೇ ಶತಕದೊಂದಿಗೆ ಭಾರತ ಪ್ರತಿರೋಧ ಒಡ್ಡಿದರೂ, ಆಡಂ ಜಂಪಾ (70ಕ್ಕೆ 3) ದಾಳಿಗೆ ನಲುಗಿ 48.2 ಓವರ್​ಗಳಲ್ಲಿ 281 ರನ್​ಗೆ ಆಲೌಟ್ ಆಯಿತು.

ದೊಡ್ಡ ಮೊತ್ತದ ಸವಾಲು ಬೆನ್ನಟ್ಟುವಾಗ ಸಿಗಬೇಕಿದ್ದ ಉತ್ತಮ ಆರಂಭ ಭಾರತಕ್ಕೆ ಸಿಗಲಿಲ್ಲ. ಕಳಪೆ ಫಾಮರ್್​ನಲ್ಲಿರುವ ಸ್ಪೋಟಕ ಆರಂಭಿಕರಾದ ರೋಹಿತ್ ಶರ್ಮ (14) ಹಾಗೂ ಶಿಖರ್ ಧವನ್ (1) ತಂಡದ ಮೊತ್ತ 15 ರನ್ ಆಗುವ ಮುನ್ನವೇ ಪೆವಿಲಿಯನ್ ಸೇರಿದ್ದರು. ಜೇ ರಿಚರ್ಡ್​ಸನ್ ಹಾಗೂ ಪ್ಯಾಟ್ ಕಮ್ಮಿನ್ಸ್ ನೀಡಿದ ಈ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಅಂಬಟಿ ರಾಯುಡು ಕೇವಲ 2 ರನ್ ಬಾರಿಸಿ ಔಟಾದರು. 3 ವಿಕೆಟ್​ಗಳನ್ನು ಕೇವಲ 27 ರನ್​ಗೆ ಕಳೆದುಕೊಂಡಿದ್ದ ಭಾರತಕ್ಕೆ ಈ ಹಂತದಲ್ಲಿ ಕೊಹ್ಲಿ ಹಾಗೂ ಧೋನಿ ಆಸರೆಯಾದರು. 4ನೇ ವಿಕೆಟ್​ಗೆ ಈ ಜೋಡಿ 59 ರನ್ ಜತೆಯಾಟವಾಡಿದ ವೇಳೆ ಭಾರತ ಜಯದ ನಿರೀಕ್ಷೆ ಇಟ್ಟಿತ್ತು. ಧೋನಿ, 42 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಇದ್ದ 26 ರನ್ ಬಾರಿಸಿ ಆಡಂ ಜಂಪಾಗೆ ಔಟಾದರು.

ಗೆಲುವಿನ ಆಸೆ ಮೂಡಿಸಿದ್ದ ಕೊಹ್ಲಿ

ಗೆಲುವಿನ ಹೋರಾಟಕ್ಕೆ ಇಳಿದಿದ್ದ ವಿರಾಟ್ ಕೊಹ್ಲಿ, ಕೇದಾರ್ ಜಾಧವ್ (26) ಹಾಗೂ ವಿಜಯ್ ಶಂಕರ್ (32) ಜತೆಗೂಡಿ ಪ್ರಮುಖ ಜತೆಯಾಟಗಳಲ್ಲಿ ಭಾಗಿಯಾಗಿದ್ದರು. 5ನೇ ವಿಕೆಟ್​ಗೆ ಜಾಧವ್ ಜತೆ ಕೊಹ್ಲಿ 88 ರನ್ ಸೇರಿಸಿದರೆ, ವಿಜಯ್ ಶಂಕರ್ ಜತೆ 6ನೇ ವಿಕೆಟ್​ಗೆ 45 ರನ್ ಕೂಡಿಸಿದರು. ಮ್ಯಾಕ್ಸ್​ವೆಲ್ ಎಸೆದ 35ನೇ ಓವರ್​ನ 4ನೇ ಎಸೆತದಲ್ಲಿ 2 ರನ್ ಕದಿಯುವ ಮೂಲಕ ಶತಕದ ಗಡಿ ದಾಟಿದ ಕೊಹ್ಲಿ ಆ ಬಳಿಕ ಬಿರುಸಿನ ಆಟವಾಡಲು ಆರಂಭಿಸಿದರು. ಜಂಪಾರನ್ನು ಗುರಿಯಾಗಿಸಿಕೊಂಡು ಬೆಂಡೆತ್ತಿದ್ದ ಕೊಹ್ಲಿ, ಬಳಿಕ ಅವರಿಗೇ ವಿಕೆಟ್ ಒಪ್ಪಿಸಿದಾಗ ಸೋಲಿನ ಕಾಮೋಡ ಆವರಿಸಿತು. ನಂತರ ರವೀಂದ್ರ ಜಡೇಜಾ (24), ಕುಲದೀಪ್ (10) ಸೋಲಿನ ಅಂತರ ತಗ್ಗಿಸುವಲ್ಲಿ ಮಾತ್ರ ಯಶ ಕಂಡರು.

ಸ್ಲಾಗ್ ಓವರ್​ನಲ್ಲಿ ಭಾರತ ಕಡಿವಾಣ

32ನೇ ಓವರ್​ನಲ್ಲಿ ಆರನ್ ಫಿಂಚ್, ಕುಲದೀಪ್​ಗೆ ಎಲ್​ಬಿ ಆದ ಬಳಿಕ ಭಾರತ ಆಸೀಸ್​ಅನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಯಶ ಕಂಡಿತು. 31 ಎಸೆತಗಳಲ್ಲಿ 47 ರನ್ ಬಾರಿಸಿದ ಮ್ಯಾಕ್ಸ್​ವೆಲ್, ಜಡೇಜಾ ಹಾಗೂ ಎಂಎಸ್ ಧೋನಿಯ ಜಾಣ್ಮೆಯ ರನೌಟ್​ಗೆ ಪೆವಿಲಿಯನ್ ಸೇರಿದರು. ಮ್ಯಾಕ್ಸ್​ವೆಲ್ ಇನಿಂಗ್ಸ್ ಹೊರತಾಗಿ ಆಸೀಸ್​ನ ಕೊನೆಯ 20 ಓವರ್​ಗಳ ಆಟ ನೀರಸವಾಗಿತ್ತು. ಶತಕ ಬಾರಿಸಿದ ಬೆನ್ನಲ್ಲಿಯೇ ಖವಾಜ ಔಟಾದರೆ, ಮೊತ್ತವನ್ನು ಏರಿಸುವ ಜವಾಬ್ದಾರಿ ಹೊತ್ತಿದ್ದ ಶಾನ್ ಮಾರ್ಷ್ ಹಾಗೂ ಹ್ಯಾಂಡ್ಸ್​ಕೊಂಬ್ 44ನೇ ಓವರ್​ನಲ್ಲಿ 3 ಎಸೆತಗಳ ಅಂತರದಲ್ಲಿ ಔಟಾದರು. 2 ವಿಕೆಟ್​ಗೆ 258 ರನ್ ಬಾರಿಸಿ ಸುಸ್ಥಿತಿಯಲ್ಲಿದ್ದ ಆಸೀಸ್, 263 ರನ್​ಗೆ 5 ವಿಕೆಟ್ ಕಳೆದುಕೊಂಡಿತು. ಜಸ್​ಪ್ರೀತ್ ಬುಮ್ರಾ ಹಾಗೂ ಶಮಿ, ಎದುರಾಳಿ ತಂಡದ ಕುಸಿತವನ್ನು ಲಾಭವನ್ನಾಗಿ ಮಾಡಿಕೊಂಡಿದ್ದರಿಂದ ಕೊನೇ 10 ಓವರ್​ಗಳಲ್ಲಿ ಆಸೀಸ್ 71 ರನ್ ಬಾರಿಸುವಲ್ಲಿ ಮಾತ್ರವೇ ಯಶ ಕಂಡಿತು.

ಟೀಮ್ ಇಂಡಿಯಾಗೆ ಆರ್ವಿು ಕ್ಯಾಪ್!

ಕಳೆದ ತಿಂಗಳು ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಭಾರತ ಕ್ರಿಕೆಟ್ ತಂಡ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದೆ. ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಎಂದಿನ ನೀಲಿ ಬಣ್ಣದ ಕ್ಯಾಪ್ ಬದಲು, ಬಿಸಿಸಿಐ ಲಾಂಛನ ಇದ್ದ ಸೇನೆಯ ಬಣ್ಣದ ಕ್ಯಾಪ್ ಧರಿಸಿ ಕಣಕ್ಕಿಳಿಯಿತು. ಆ ಮೂಲಕ ಹುತಾತ್ಮ ಸೈನಿಕರಿಗೆ ಗೌರವ ಸಮರ್ಪಿಸುತ್ತಿರುವುದಾಗಿ ವಿರಾಟ್ ಕೊಹ್ಲಿ ಟಾಸ್ ವೇಳೆ ಹೇಳಿದರು. ಅದರೊಂದಿಗೆ ರಾಂಚಿ ಏಕದಿನ ಪಂದ್ಯದ ಸಂಭಾವನೆಯನ್ನು ಆಟಗಾರರು ರಾಷ್ಟ್ರೀಯ ರಕ್ಷಣಾ ನಿಧಿಗೆ (ಎನ್​ಡಿಎಫ್) ನೀಡುತ್ತಿರುವುದಾಗಿ ಪ್ರಕಟಿಸಿದರು. ಈ ಹಣವನ್ನು ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳ ನೆರವಿಗೆ ನೀಡುತ್ತಿರುವುದಾಗಿ ಹೇಳಿದರು. ಆಡುವ ಬಳಗದಲ್ಲಿರುವ ಆಟಗಾರರು 8 ಲಕ್ಷ ರೂ. ಹಾಗೂ ಮೀಸಲು ಆಟಗಾರರು 4 ಲಕ್ಷ ರೂ. ಹಣವನ್ನು ಈ ನಿಧಿಗೆ ನೀಡಲಿದ್ದಾರೆ. ‘ಇದು ವಿಶೇಷ ಕ್ಯಾಪ್. ನಮ್ಮ ಸೇನೆಗೆ ನೀಡುತ್ತಿರುವ ಗೌರವ ಎಂದು ಕೊಹ್ಲಿ ತಿಳಿಸಿದರು. ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಎಂಎಸ್ ಧೋನಿ ಪಂದ್ಯಕ್ಕೂ ಮುನ್ನ ಆಟಗಾರರು ಹಾಗೂ ಸಿಬ್ಬಂದಿಗೆ ವಿಶೇಷ ಕ್ಯಾಪ್​ಅನ್ನು ಹಸ್ತಾಂತರಿಸಿದರೆ, ಧೋನಿಗೆ ಕೊಹ್ಲಿ ಈ ಕ್ಯಾಪ್ ನೀಡಿದರು.

ಖವಾಜ ಚೊಚ್ಚಲ ಶತಕದ ಸಾಧನೆ

ಕಳೆದೆರಡು ಪಂದ್ಯಗಳಲ್ಲಿ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದ ಉಸ್ಮಾನ್ ಖವಾಜ ಹಾಗೂ ಆರನ್ ಫಿಂಚ್ ಇಂದು ಒಟ್ಟಿಗೆ ಸಿಡಿದಿದ್ದರಿಂದ ಟೀಮ್ ಇಂಡಿಯಾ ಆರಂಭದಲ್ಲಿಯೇ ಲಯ ತಪ್ಪಿತು. ಮೊದಲ ವಿಕೆಟ್​ಗೆ ಈ ಜೋಡಿ ಆಡಿದ 193 ರನ್​ಗಳ ದೊಡ್ಡ ಜತೆಯಾಟದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಪ್ರವಾಸಿ ತಂಡ ಕುಸಿತ ಕಂಡರೂ, ಗ್ಲೆನ್ ಮ್ಯಾಕ್ಸ್​ವೆಲ್ (47) ಹಾಗೂ ಮಾರ್ಕಸ್ ಸ್ಟೋಯಿನಸ್ (31) ಆಸರೆಯಿಂದ 310ರ ಗಡಿ ದಾಟುವಲ್ಲಿ ಯಶ ಕಂಡಿತು. 32 ಓವರ್​ಗಳ ಕಾಲ ಸತಾಯಿಸಿದ ಖವಾಜ, 107 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. ಸ್ಲಾಗ್ ಓವರ್​ಗಳಲ್ಲಿ ಅಬ್ಬರಕ್ಕೆ ವೇದಿಕೆ ನಿರ್ವಿುಸಿ 2ನೇ ಬ್ಯಾಟ್ಸ್​ಮನ್ ಆಗಿ 39ನೇ ಓವರ್​ನಲ್ಲಿ ಔಟಾದರು. ಸ್ಪಿನ್ನರ್​ಗಳನ್ನು ಎದುರಿಸುವಲ್ಲಿ ವಿಶೇಷ ಕೌಶಲ ಮೆರೆದ ಖವಾಜ-ಫಿಂಚ್ ಜೋಡಿ, ಕುಲದೀಪ್ ಹಾಗೂ ಜಡೇಜಾರ 10 ಓವರ್​ಗಳ ಕೋಟಾದಿಂದ 128 ರನ್ ದೋಚಿತು. ಇನ್ನು ಫೀಲ್ಡಿಂಗ್ ವಿಭಾಗದಲ್ಲಿ ಜಡೇಜಾ ಹಾಗೂ ವಿಜಯ್ ಶಂಕರ್​ರಿಂದಲೂ ಸಾಕಷ್ಟು ಪ್ರಮಾದಗಳಾದವು. 30 ಓವರ್​ಗಳ ವೇಳೆಗೆ 185 ರನ್​ಗಳ ಗಡಿ ದಾಟಿದ್ದ ಆಸೀಸ್ ತಂಡ 350ಕ್ಕೂ ಅಧಿಕ ಮೊತ್ತವನ್ನು ಸುಲಭವಾಗಿ ಪೇರಿಸುವ ಎಲ್ಲ ಸಾಧ್ಯತೆಗಳೂ ಕಾಣಿಸಿದ್ದವು.

ಕೊನೇ 2 ಏಕದಿನದಿಂದ ಧೋನಿಗೆ ವಿಶ್ರಾಂತಿ

ವಿಶ್ವಕಪ್​ಗೆ ವಿಶ್ರಾಂತಿಯ ದೃಷ್ಟಿಯಿಂದ ಎಂಎಸ್ ಧೋನಿ, ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳನ್ನು ಆಡುತ್ತಿಲ್ಲ ಎಂದು ಟೀಮ್ ಇಂಡಿಯಾ ಸಹಾಯಕ ಕೋಚ್ ಸಂಜಯ್ ಬಂಗಾರ್ ಖಚಿತಪಡಿಸಿದ್ದಾರೆ. ಅದರೊಂದಿಗೆ ತವರು ನೆಲದಲ್ಲಿ ನಡೆದ ಏಕದಿನ ಪಂದ್ಯದೊಂದಿಗೆ 37 ವರ್ಷದ ಎಂಎಸ್ ಧೋನಿ ಭಾರತದಲ್ಲಿ ಬಹುತೇಕ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದಂತಾಗಿದೆ. ಧೋನಿ ಬದಲು ರಿಷಭ್ ಪಂತ್ ವಿಕೆಟ್ ಕೀಪರ್ ಆಗಿರಲಿದ್ದಾರೆ.

ದಾಖಲೆ ಬರೆದ ಧೋನಿ

ಲ್ಯಾನ್ ಎಸೆದ 19ನೇ ಓವರ್​ನಲ್ಲಿ ಎಂಎಸ್ ಧೋನಿ ಮಿಡ್​ವಿಕೆಟ್​ನಲ್ಲಿ ಸಿಕ್ಸರ್ ಬಾರಿಸಿದ ಬೆನ್ನಲ್ಲಿಯೇ ಅರ್ಹವಾಗಿದ್ದ ದಾಖಲೆ ಒಲಿಸಿ ಕೊಂಡರು. ಇದು ಭಾರತ ತಂಡದ ಪರ ಧೋನಿ ಬಾರಿಸಿದ 217ನೇ ಸಿಕ್ಸರ್. ಆ ಮೂಲಕ ಈವರೆಗೂ ರೋಹಿತ್ ಶರ್ಮ (216 ಸಿಕ್ಸರ್) ಹೆಸರಲ್ಲಿದ್ದ ಗರಿಷ್ಠ ಸಿಕ್ಸರ್ ದಾಖಲೆಯನ್ನು ಧೋನಿ ಒಲಿಸಿಕೊಂಡರು. ತೆಂಡುಲ್ಕರ್ (195), ಸೌರವ್ ಗಂಗೂಲಿ (189), ಯುವರಾಜ್ ಸಿಂಗ್ (153) ಹಾಗೂ ವೀರೇಂದ್ರ ಸೆಹ್ವಾಗ್ (131) ನಂತರದ ಸ್ಥಾನದಲ್ಲಿದ್ದಾರೆ.

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...