25.7 C
Bangalore
Sunday, December 15, 2019

ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು

Latest News

ಗಾಂಧೀಜಿಯವರ ವಿಚಾರಧಾರೆ ದಾರಿದೀಪವಾಗಲಿ

ವಿಜಯಪುರ: ಗಾಂಧೀಜಿ ಅವರ ವಿಚಾರಧಾರೆಗಳು ನಮ್ಮ ಬದುಕಿಗೆ ದಾರಿ ದೀಪವಾಗಲಿ ಎಂದು ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವ ಕುಲಕರ್ಣಿ ಹೇಳಿದರು.ನಗರದ...

ಬಿಎಸ್‌ವೈ ವೈಟ್‌ಡ್ರೆಸ್ ರಮೇಶ ಬ್ಲ್ಯಾಕ್ ಮಾಡ್ತಾನೆ

ಗೋಕಾಕ: ಶಾಸಕ ರಮೇಶ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧರಿಸುವ ವೈಟ್ ಡ್ರೆಸ್‌ಅನ್ನು ಬ್ಲಾೃಕ್ ಮಾಡುತ್ತಾನೆ ಎಂದು ಶಾಸಕ ಸತೀಶ ಜಾರಕಿಹೊಳಿ...

ನಗ ನಗದುಗಳೊಂದಿಗೆ ಮಾವನ ಮನೆಯಿಂದ ರಾತ್ರೋರಾತ್ರಿ ಪರಾರಿಯಾದ ಮದುಮಗಳು; ಮದುಮಗ ಕಂಗಾಲು!

ಬದೌನ್​ (ಉತ್ತರಪ್ರದೇಶ): ಹೊಸದಾಗಿ ಮದುವೆಯಾಗಿದ್ದ ಮದುಮಗಳು ಗಂಡನ ಮನೆಯವರಿಗೆ ಆಹಾರದಲ್ಲಿ ಮತ್ತು ಬರುವ ಔಷಧ ಬೆರಸಿ ಮನೆಯಲ್ಲಿದ್ದ ನಗ ನಾಣ್ಯ ದೋಚಿ ಪರಾರಿಯಾಗಿದ್ದಾಳೆ. ಬದೌನ್​ ಜಿಲ್ಲೆಯ ಚೋಟಾ...

ಪೌರತ್ವ ತಿದ್ದುಪಡಿ ಕಾಯ್ದೆ ಶೇ.1000 ಪಟ್ಟು ಸರಿ: ಪ್ರತಿಭಟನೆಗಳಿಗೆ ಕಾಂಗ್ರೆಸ್​​ ಮಿತ್ರಪಕ್ಷಗಳು ಕಾರಣ

ನವದೆಹಲಿ: ಪೌರತ್ವ ತಿದ್ದುಪಡಿ ಕಾನೂನಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕಾಂಗ್ರೆಸ್​ ಮತ್ತು ಅದರ ಮಿತ್ರ ಪಕ್ಷಗಳೇ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ...

ಕಳ್ಳಬಟ್ಟಿ ಸಾರಾಯಿ ಮಾರಾಟಗಾರನ ಬಂಧನ

ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ, ಆತನಿಂದ...

ಕಲಬುರಗಿ: ಬಹನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ ಶುಕ್ರವಾರ ನಡೆಯಲಿದ್ದು, ಐತಿಹಾಸಿಕ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಗತ್ಯ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಸಣ್ಣ ಪುಟ್ಟ ಕೆಲಸಗಳಿಗೆ ಫೈನಲ್ ಟಚ್ ನೀಡಲಾಗುತ್ತಿದೆ. ಏರ್​ಪೋರ್ಟ್​  ಆವರಣದಲ್ಲೇ ಸಮಾರಂಭಕ್ಕೆ ಬೃಹತ್ ವೇದಿಕೆ ನಿಮರ್ಿಸಲಾಗಿದೆ.
ಸಮಾರಂಭವನ್ನು ಐತಿಹಾಸಿಕವಾಗಿ ನಡೆಸುವ ನಿಟ್ಟಿನಲ್ಲಿ ಸಂಸದ ಡಾ.ಉಮೇಶ ಜಾಧವ್ ಅವರು ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ್, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಶಾಸಕರಾದ ಅಮರನಾಥ ಪಾಟೀಲ್, ಶಶೀಲ್ ನಮೋಶಿ, ಯುವ ನಾಯಕ ಚಂದ್ರಕಾಂತ ಬಿ.ಪಾಟೀಲ್ (ಚಂದು ಪಾಟೀಲ್), ಏರ್​ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳ ಜತೆ ಸಿದ್ಧತಾ ಕಾರ್ಯವನ್ನು ಪರಿಶೀಲಿಸಿದರು. ಅಧಿಕಾರಿಗಳ ಸಭೆ ನಡೆಸಿ ಸಮಾರಂಭ ಯಶಸ್ವಿ ಕುರಿತು ಚರ್ಚೆ  ನಡೆಸಿದರು.
ಬಳಿಕ ಪತ್ರಕರ್ತರ ಜತೆ ಮಾತನಾಡಿದ ಸಂಸದ ಡಾ.ಜಾಧವ್, ಲೋಹದ ಹಕ್ಕಿಗಳ ಹಾರಾಟದ ಅಪರೂಪದ ಕ್ಷಣ ಕಣ್ತುಂಬಿಕೊಳ್ಳಲು ಕಾಯುತ್ತಿದ್ದೇನೆ. ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದವು. ಅನಿವಾರ್ಯ ಕಾರಣಗಳಿಂದಾಗಿ ಬರಲು ಸಾಧ್ಯವಾಗಲ್ಲ. ಆದರೂ ಪ್ರಧಾನಿ ಕಚೇರಿ ಜತೆ ನಿರಂತರ ಸಂಪರ್ಕದಲ್ಲಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದೇಶ ನೀಡಲು ಸಹ ಕೋರಿದ್ದೇವೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕಲಬುರಗಿ ವಿಮಾನ ನಿಲ್ದಾಣ ಜನಸೇವೆಗೆ ಸಮರ್ಪಣೆ ಮಾಡುವರು. ಈ ಹಿಂದೆ ಅವರೇ ಅಡಿಗಲ್ಲು ಹಾಕಿದ್ದರು. ಈಗ ಅವರೇ ಉದ್ಘಾಟಿಸುತ್ತಿರುವುದು ಖುಷಿ ಸಂಗತಿ. ಶಾಸಕ ಬಸವರಾಜ ಮತ್ತಿಮೂಡ ಅಧ್ಯಕ್ಷತೆ ವಹಿಸುವರು. ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವಥ್ ನಾರಾಯಣ ಸಿ.ಎನ್., ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಕರ್ಾರದ ಮುಖ್ಯ ಕಾರ್ಯದರ್ಶಿ  ಟಿ.ಎಂ. ವಿಜಯಭಾಸ್ಕರ್, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ  ಪ್ರದೀಪ್ಸಿಂಗ್ ಕರೋಲಾ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಅರವಿಂದಸಿಂಗ್, ಶಾಸಕರು ಮುಖ್ಯ ಅತಿಥಿಗಳಾಗಿರುವರು. ಗ್ರಾಪಂ ಅಧ್ಯಕ್ಷರು, ಸದಸ್ಯರು, ತಾಪಂ, ಜಿಪಂ ಸದಸ್ಯರು ಸಹ ಭಾಗವಹಿಸುವರು. ಮಾಜಿ ಸಂಸದ ಮಲ್ಲಿಕಾಜರ್ುನ ಖಗರ್ೆ ಅವರಷ್ಟೆ ಅಲ್ಲ, ಮಾಜಿ ಸಿಎಂ ಧರ್ಮಸಿಂಗ್ ಪತ್ನಿ ಪ್ರಭಾವತಿ ಧರ್ಮಸಿಂಗ್ ಅವರನ್ನು ಆಹ್ವಾನಿಸುವ ವಿಚಾರದಿಂದ ಎಲ್ಲ ಮಾಜಿ ಶಾಸಕರು, ಸಂಸದರು, ಎಲ್ಲ ಪಕ್ಷಗಳ ಅಧ್ಯಕ್ಷರು, ಎಲ್ಲ ಗ್ರಾಪಂ ಅಧ್ಯಕ್ಷರಿಗೂ ಆಹ್ವಾನ ನೀಡಲಾಗಿದೆ ಎಂದು ವಿವರಿಸಿದರು.
ಭಾರತೀಯ ವಿಮಾನಯಾನ ಪ್ರಾಧಿಕಾರ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎಸ್. ಸುರೇಶ್, ಚೆನ್ನೈ ಸಿಎನ್ಸಿ ವಿಭಾಗದ ಜನರಲ್ ಮ್ಯಾನೇಜರ್ ವೆಂಕಟೇಶ್ವರಲು, ನಿಲ್ದಾಣ ನಿರ್ದೇ ಶಕ ಜ್ಞಾನೇಶ್ವರರಾವ್, ಅಧಿಕಾರಿಗಳಾದ ಆರ್.ಮಾಧವನ್, ಪಟ್ಟಾಭಿರಾಮನ್ ಇತರರಿದ್ದರು.

ಸ್ಟಾರ್ ಏರ್ ಬೆನ್ನಲ್ಲೇ ಅಲಯನ್ಸ್
ಕಲಬುರಗಿ ವಿಮಾನ ನಿಲ್ದಾಣ ಜನಸೇವೆಗೆ ಅರ್ಪಣೆ ಮಾಡಿದ ಬಳಿಕ ಸ್ಟಾರ್ ಏರ್ ಸಂಸ್ಥೆ ವಿಮಾನ ಪ್ರಯಾಣಿಕರನ್ನು ಬೆಂಗಳೂರಿಗೆ ಕರೆದೊಯ್ಯಲಿದೆ. ನಂತರ ಇದೇ ಕಂಪನಿ ಹಿಂಡಾನ್ (ದೆಹಲಿ), ಗಾಜಿಯಾಬಾದ್ಗಳಿಗೆ ವಿಮಾನ ಹಾರಾಟ ಶುರು ಮಾಡಲಿದೆ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದರು. ಅಲಯನ್ಸ್ ಏರ್ ಸಂಸ್ಥೆಯವರು 25ರಿಂದಲೇ ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸಂಚಾರಕ್ಕೆ ಒಪ್ಪಿದ್ದಾರೆ. ಬಳಿಕ ಜನರ ಬೇಡಿಕೆಯಂತೆ ವಿಮಾನಗಳ ಹಾರಾಟ ಶುರುವಾಗಲಿದೆ. ಹಜ್ಗೆ ಹೋಗಲು ಸಹ ವಿಮಾನ ಸೌಕರ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು. ಉದ್ಘಾಟನೆಗೊಂಡ ಒಂದು ವರ್ಷದಲ್ಲಿ ಸೂರತ್ ಮಾದರಿಯಲ್ಲಿ ಕಲಬುರಗಿ ನಿಲ್ದಾಣ ಬೆಳವಣಿಗೆ ಕಾಣಲಿದೆ. ಅತಿ ಉದ್ದದ ರನ್ವೇ ಇರುವುದರಿಂದ ದುಬೈ ಇತರ ಕಡೆಗೂ ವಿಮಾನಯಾನ ಆರಂಭಿಸಲು ಶ್ರಮಿಸುವುದಾಗಿ ಹೇಳಿದರು.

Stay connected

278,751FansLike
588FollowersFollow
628,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...