Friday, 16th November 2018  

Vijayavani

Breaking News

ವಿನಯದ ಮೌಲ್ಯ ದೊಡ್ಡದು

Tuesday, 03.07.2018, 3:02 AM       No Comments

ಹಿರಣ್ಯ ಕಶಿಪು ತನ್ನ ಮಗ ಪ್ರಹ್ಲಾದನಿಗೆ ವಿವಿಧ ಬಗೆಯ ಹಿಂಸೆ ಕೊಟ್ಟು ಸಾಯಿಸಲು ಯತ್ನಿಸಿದ. ಕಾರಣ ಆತ ಹರಿನಾಮ ಸ್ಮರಣೆ ಮಾಡುತ್ತಾನೆ ಎಂದು. ಪರಮಾತ್ಮನೇ ಕಂಬದಿಂದ ನರಸಿಂಹನಾಗಿ ಬಂದು ಹಿರಣ್ಯ ಕಶಿಪುವನ್ನು ಸಂಹರಿಸುತ್ತಾನೆ. ನಂತರ ಪ್ರಹ್ಲಾದನಿಗೆ ನಿನ್ನ ಅಪೇಕ್ಷೆ ಏನೆಂದು ಕೇಳುತ್ತಾನೆ. ಹೇ ನರಸಿಂಹನೇ! ನಾನು ಒಂದೇ ಒಂದು ಪ್ರಾರ್ಥನೆ ಮಾಡುತ್ತೇನೆ. ನಿನ್ನ ಮಹಿಮೆ ತಿಳಿಯದ ಅಜ್ಞಾನಿಯಾದ ನನ್ನ ತಂದೆಗೆ ಸದ್ಗತಿ ಕೊಟ್ಟು ಕ್ಷಮಿಸು’ ಎಂದು. ಸೂರ್ಯ ಇದ್ದಲ್ಲೇ ಇರುತ್ತಾನೆ. ಭೂಮಿಯೇ ಸೂರ್ಯನ ಸುತ್ತ ಸುತ್ತುತ್ತದೆ ಎಂದು ವಿಜ್ಞಾನಿ ಗೆಲಿಲಿಯೋ ಆಗ ಮಂಡಿಸಿದ ಸಿದ್ಧಾಂತಕ್ಕೆ ಆ ಕಾಲದ ಅರಸರು ಮತ್ತು ಪಾದ್ರಿಗಳು, ನೀನು ಹೇಳಿದುದು ಸಂಪ್ರದಾಯಕ್ಕೆ ವಿರುದ್ಧ. ಇದನ್ನು ತಪ್ಪು ಎಂದು ಬರೆದುಕೊಡು. ಇಲ್ಲವಾದರೆ ನಿನಗೆ ಗಲ್ಲು ಶಿಕ್ಷೆ ವಿಧಿಸುತ್ತೇವೆ ಎಂದು ಎಚ್ಚರಿಸಿದರು. ಜೀವ ಉಳಿಸಿಕೊಳ್ಳಲು ರಾಜಾಜ್ಞೆ ಪಾಲಿಸಿದ. ಮಿತ್ರರು ಈ ಬಗ್ಗೆ ಕೇಳಿದಾಗ ಅವನು ಕೊಟ್ಟ ಉತ್ತರ ನೋಡಿ, ‘ನಾನು ಮೂರ್ಖರಿಂದ ತಪ್ಪಿಸಿಕೊಳ್ಳಲು ಮಾತ್ರ ಹಾಗೆ ಬರೆದುಕೊಟ್ಟೆ. ನಾನು ಬರೆದೆ ಎಂಬ ಮಾತ್ರಕ್ಕೆ ಭೂಮಿಯು ಸೂರ್ಯನ ಸುತ್ತ ಸುತ್ತುವುದನ್ನು ನಿಲ್ಲಿಸದು. ಅಜ್ಞಾನಿಗಳನ್ನು ಕ್ಷಮಿಸಬೇಕು. ಲೋಕ ಸಿದ್ಧಾಂತವನ್ನು ನಾವು ಪಾಲಿಸಬೇಕು ಎಂದನಂತೆ. ವಿನಯವೇ ವಿದ್ಯೆಗೆ ಭೂಷಣ ಎಂಬುದನ್ನು ಮಹಾನ್ ಸಾಧಕರು ತೋರಿಸಿದ್ದಾರೆ.

Leave a Reply

Your email address will not be published. Required fields are marked *

Back To Top