ಸಿನಿಮಾ

ವಿಧಾನಸೌಧದಲ್ಲಿ ರೈತರ ದನಿಯಾಗುವ ಶಕ್ತಿ ನೀಡಿ

ಮೇಲುಕೋಟೆ: ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸುವ ಮೂಲಕ ವಿಧಾನಸೌಧದಲ್ಲಿ ರೈತರ ದನಿಯಾಗುವ ಶಕ್ತಿಯನ್ನು ಮೇಲುಕೋಟೆ ಕ್ಷೇತ್ರದ ಮತದಾರರು ರೈತ ಸಂಘಕ್ಕೆ ನೀಡಬೇಕು ಎಂದು ಹಾವೇರಿ ರೈತ ಸಂಘದ ಮುಖಂಡರು ಮನವಿ ಮಾಡಿದರು.
ಮೇಲುಕೋಟೆ ಮತ್ತು ದುದ್ದ ಹೋಬಳಿಗಳ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬು ಬೆಳೆಗೆ ಬೆಲೆ ನಿಗದಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಂತೆ ಕಾಲಕಾಲಕ್ಕೆ ಸರ್ಕಾರದ ಗಮನ ಸೆಳೆಯಬೇಕಾದ ಅಗತ್ಯವಿದೆ. ಇದರಿಂದ ಇಡೀ ರಾಜ್ಯದ ರೈತರ ಸಮಸ್ಯೆಗಳು ಪರಿಹಾರ ಕಾಣುತ್ತವೆ. ಹೀಗಾಗಿ ದರ್ಶನ್ ಪುಟ್ಟಣ್ಣಯ್ಯ ಗೆಲವು ಅನಿವಾರ್ಯವಾಗಿದೆ. ಅವರ ಗೆಲುವಿನಿಂದ ಮೇಲುಕೋಟೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ರೈತ ಸಂಘದ ಶಕ್ತಿ ಬಲವರ್ಧನೆಯಾಗುತ್ತದೆ ಎಂದರು.
ಈ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅತಿ ಹೆಚ್ಚಿನ ಅಂತದಿಂದ ಗೆಲವು ಸಾಧಿಸಲಿದ್ದಾರೆ. ಕ್ಷೇತ್ರದಲ್ಲಿ ದಬ್ಬಾಳಿಕೆಯ ರಾಜಕಾರಣ ಕೊನೆಗೊಳ್ಳಲಿದೆ. ಮತದಾರರು ಶೇ.90ರಷ್ಟು ರೈತರೇ ಆಗಿರುವ ಕಾರಣ ದರ್ಶನ್ ಗೆಲುವಿಗೆ ಕಂಕಣಬದ್ಧರಾಗಬೇಕು ಎಂದರು.
ಹಾವೇರಿ ಜಿಲ್ಲೆಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೆಳ್ಳಾರಿ, ಹಾನಗಲ್ ಅಧ್ಯಕ್ಷ ಮರೀಗೌಡಪಾಟೀಲ್, ರಾಣೆಬೆನ್ನೂರು ತಾಲೂಕು ಅಧ್ಯಕ್ಷ ಕರಿಬಸಪ್ಪಕ್ಕಿ, ಬೆಟ್ಟಹಳ್ಳಿ ತಾಲೂಕು ಅಧ್ಯಕ್ಷ ಶಮಕರಪ್ಪಹಿರಿಗಂದಿ, ಹಿರೇಕೆರೂರು ಪ್ರಭುಗೌಡ ಪಾಟೀಲ್ ಸೇರಿದಂತೆ ಹಲವು ಮುಖಂಡರು ನ್ಯಾಮನಹಳ್ಳಿ ಶಿವರಾಮೇಗೌಡರ ಮಾರ್ಗದರ್ಶನಲ್ಲಿ ಹಲವು ಹಳ್ಳಿಗಳಿಗೆ ಭೇಟಿ ನೀಡಿ ಮತಯಾಚಿಸಿದರು.
ಚುನಾವಣೆಗೆ ದೇಣಿಗೆ: ಹಾವೇರಿ ಜಿಲ್ಲೆಯ ರೈತರು ಮೇಲುಕೋಟೆ ಕ್ಷೇತ್ರದ ರೈತ ಸಂಘದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಚುನಾವಣಾ ವೆಚ್ಚಕ್ಕಾಗಿ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಕಿರುಕಾಣಿಕೆಯನ್ನು ದರ್ಶನ್‌ಗೆ ತಲುಪಿಸಲಾಗುತ್ತಿದೆ ಎಂದು ಹಾವೇರಿಯ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

Latest Posts

ಲೈಫ್‌ಸ್ಟೈಲ್