More

    ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರಿಂದ ಹೆಸ್ಕಾಂಗೆ ಬೀಗ

    ಸಿಂದಗಿ: ತಾಲೂಕಿನ ಗುಬ್ಬೇವಾಡ ಹಾಗೂ ಬನ್ನೆಟ್ಟಿ ಗ್ರಾಮದ ರೈತರು ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಅಕ್ರಮವಾಗಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ಲೈನ್‌ಮನ್ ಸುಭಾಷ್ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಶುಕ್ರವಾರ ಪಟ್ಟಣದ ಹೆಸ್ಕಾಂ ಕಚೇರಿಗೆ ಬೀಗ ಜಡಿದು, ಪ್ರತಿಭಟನೆ ನಡೆಸಿದರು.

    ಪ್ರತಿಭಟನಾ ನಿರತ ರೈತರು ಮಾತನಾಡಿ, ಮೊದಲೇ ಭೀಕರ ಬರಗಾಲವಿದೆ. ತೋಟಗಳಲ್ಲಿರುವ ಅಲ್ಪಸ್ವಲ್ಪ ಬೆಳೆಗಳಿಗೆ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿದೆ. ಅಸಮರ್ಪಕವಾಗಿ, ಸಮಯದ ನಿಗದಿಯಿಲ್ಲದೆ, ಅಲ್ಪ ಸಾಮರ್ಥ್ಯದ ವಿದ್ಯುತ್ ಪೂರೈಕೆ ಮಾಡುತ್ತಿರುವ ಅಧಿಕಾರಿಗಳ ಧೋರಣೆ ಖಂಡನೀಯ. 350 ವೋಲ್ಟೇಜ್ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

    ರೈತರು ಯಾವುದಾದರೂ ವಿದ್ಯುತ್ ಸಮಸ್ಯೆ ಲೈನಮನ್ ಬಳಿ ಹೇಳಿಕೊಂಡರೆ ಸಾಕು, ನಮ್ಮಿಂದ ಹಣದ ಬೇಡಿಕೆಯನ್ನಿಟ್ಟು, ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಲೈನಮನ್ ಸುಭಾಷ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

    ವಿಷಯ ತಿಳಿದು ಕಚೇರಿಗೆ ಆಗಮಿಸಿದ ಎಇಇ ಚಂದ್ರಕಾಂತ ನಾಯಕ ಅವರು ರೈತರ ಸಮಸ್ಯೆ ಆಲಿಸಿ, ತಕ್ಷಣವೇ ಈ ಭಾಗದ ರೈತರಿಗೆ ಸಮಸ್ಯೆಯಾಗದಂತೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

    ರೈತರಾದ ಶಿವಾನಂದ ಕೊಂಡಗೂಳಿ, ಸಿದ್ದು ಗಬಸಾವಳಗಿ, ಗೌರಿಶಂಕರ ಹುಬ್ಬಳ್ಳಿ, ಸಿದ್ಧಲಿಂಗಪ್ಪ ಗಬಸಾವಳಗಿ, ಧರ್ಮಣ್ಣ ಗಬಸಾವಳಗಿ, ಪಟೇಲ ಚಟ್ಟರಕಿ, ಗಂಗಾಧರ ಗಬಸಾವಳಗಿ, ಭೀಮಣ್ಣ ಜಾಯವಾಡಗಿ, ಮುತ್ತನಗೌಡ ಪಾಟೀಲ, ಸಂತೋಷ ಗಬಸಾವಳಗಿ, ಶ್ರೀಶೈಲ ಕರಭಂಟನಾಳ, ಶಿವಾನಂದ ಲಾಳಸಂಗಿ, ಶರಣಪ್ಪ ನಾಯ್ಕೋಡಿ, ಹಣಮಂತ್ರಾಯ ಗಬಸಾವಳಗಿ, ಶರಣಬಸು ಜಾಯವಾಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts