ವಿದ್ಯುತ್ ಕೈ ಕೊಟ್ಟು ಜಿಲ್ಲಾಸ್ಪತ್ರೆಯಲ್ಲಿ ಪರದಾಟ

ಬೆಳಗಾವಿ: ಹಲವು ಕೊರತೆಗಳ ನಡುವೆಯೇ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಗುರುವಾರ ಒಂದು ಗಂಟೆಗೂ ಅಧಿಕ ಕಾಲ ಕತ್ತಲೆ ಆವರಿಸಿ, ರೋಗಿಗಳು, ಸಂಬಂಧಿಕರು ಅಷ್ಟೇ ಅಲ್ಲ, ವೈದ್ಯರು ತೀವ್ರ ಪರದಾಡಿದರು.

ಸಂಜೆ 6 ಗಂಟೆ ನಂತರ ವಿದ್ಯುತ್ ನಿಲುಗಡೆಯಾಗಿದ್ದು, ಆಸ್ಪತ್ರೆಯಲ್ಲಿ ಕತ್ತಲೆ ಆವರಿಸಿದೆ. ವಿದ್ಯುತ್ ಇಲ್ಲದಾಗ ಉಪಯೋಗಿಸಲು ಇಲ್ಲಿ ಜನರೇಟರ್ ವ್ಯವಸ್ಥೆ ಇದೆಯಾದರೂ. ದುರಸ್ತಿಗೆ ಬಂದು ಜನರೇಟರ್ ಆರಂಭವಾಗಿಲ್ಲ. ಹೀಗಾಗಿ ಮತ್ತೆ ವಿದ್ಯುತ್ ಬರುವವರೆಗೂ ಆಸ್ಪತ್ರೆಯಲ್ಲಿನ ಸಿಬ್ಬಂದಿಯೂ ಸೇರಿ ರೋಗಿಗಳು ಹಾಗೂ ಅವರ ಸಂಬಂಧಿಕರು ಮೊಬೈಲ್ ಆಶ್ರಯಿಸಿ ಪರದಾಡಿದ್ದಾರೆ.