ವಿದ್ಯುತ್ ಅವಘಡ, 2 ಎಕರೆ ಕಬ್ಬು ಭಸ್ಮ

ಬಾದಾಮಿ: ಸಮೀಪದ ನಾಗರಾಳ ಎಸ್​ಪಿ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಎರಡು ಎಕರೆ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದೆ.

ತಾಲೂಕಿನ ನಾಗರಾಳ ಎಸ್​ಪಿ ಗ್ರಾಮದ ವೀರಭದ್ರಪ್ಪ ಯಮನಪ್ಪ ಬಡಿಗೇರ ಕಬ್ಬಿನ ಗದ್ದೆ ಮೇಲೆ ಹಾಯ್ದು ಹೋದ ವಿದ್ಯುತ್ ತಂತಿಗಳಲ್ಲಿ ಬುಧವಾರ ಸಂಜೆ ಕಿಡಿ ಹೊತ್ತಿಕೊಂಡು ಇಡಿ ಗದ್ದೆಗೆ ವ್ಯಾಪಿಸಿದೆ. ವಿಷಯ ತಿಳಿದ ಬಾಗಲಕೋಟೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಸತತ ಪ್ರಯತ್ನಪಟ್ಟರೂ ಎರಡು ಎಕರೆಯಷ್ಟು ಕಬ್ಬು ಸಂಪೂರ್ಣ ನಾಶವಾಗಿದೆ. ಬರದಲ್ಲೂ ಕಬ್ಬಿನ ಗದ್ದೆಗೆ ನೀರು ಹಾಯಿಸಿದ್ದರು. ಉತ್ತಮವಾಗಿ ಬೆಳೆ ಬಂದು ಕಟಾವಿಗೆ ಬಂದಿತ್ತು. ಆದರೆ, ಕಬ್ಬು ಸುಟ್ಟು ಭಸ್ಮವಾಗಿದ್ದರಿಂದ ರೈತ ತೀವ್ರ ಸಂಕಷ್ಟಕ್ಕೊಗಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸಾಲ ಸೋಲ ಮಾಡಿ ಹೊಲದಲ್ಲಿ 12 ಎಕರೆ ಕಬ್ಬು ಬೆಳೆದಿದ್ದು, ಈಗ ಕಬ್ಬು ಬೆಂಕಿಗೆ ಆಹುತಿಯಾಗಿ ನನ್ನ ಜೀವನಕ್ಕೆ ಕೊಳ್ಳಿ ಇಟ್ಟಿದೆ. ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

| ವೀರಭದ್ರಪ್ಪ ಯಮನಪ್ಪ ಬಡಿಗೇರ

ಹಾನಿಗೊಳಗಾದ ರೈತ ನಾಗರಾಳ ಎಸ್​ಪಿ