ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಯ ಮಾಹಿತಿ


ಮುಂಡರಗಿ:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಚನ್ನಮ್ಮ ಮಹಿಳಾ ಪೊಲೀಸ್ ಪಡೆ ಸಿಬ್ಬಂದಿ ಮಂಗಳವಾರ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಿದರು.

ಬಾಲ್ಯ ವಿವಾಹ, ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ತಡೆ ಇತರೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.

ಬಾಲ ಕಾರ್ವಿುಕರನ್ನು ಬಳಸಿಕೊಂಡರೆ 1 ವರ್ಷ ಜೈಲು ಶಿಕ್ಷೆ, 20ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಬಾಲ್ಯ ವಿವಾಹ ಮಾಡಿಕೊಂಡವರಿಗೆ ಮತ್ತು ಸಹಕಾರ ನೀಡಿದವರಿಗೆ 2ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಮಹಿಳೆಗೆ ಚುಡಾಯಿಸುವುದು, ಅಶ್ಲೀಲ ಚಿತ್ರ ಫೋಸ್ಟ್ ಮಾಡುವುದು ಅಥವಾ ಅಶ್ಲೀಲ ಚಿತ್ರ ತೋರಿಸುವುದು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಗೆ ಒಳಗಾಗುತ್ತಾರೆ ಎಂದು ವಿವರಿಸಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಪಿಐ ಶ್ರೀನಿವಾಸ ಮೇಟಿ ಮಾತನಾಡಿ, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಚನ್ನಮ್ಮ ಮಹಿಳಾ ಪೊಲೀಸ್ ಪಡೆ ರಚನೆಗೊಂಡಿದೆ. ಕರಾಟೆ, ಕಾನೂನು ಮಾಹಿತಿ, ಸಂವಹನ ಕಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು 40 ದಿನಗಳ ಕಾಲ ತರಬೇತಿ ನೀಡಲಾಗಿದ್ದು, ಗದಗ ಹಾಗೂ ನರಗುಂದ ವಿಭಾಗಗಳ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ತಂಡಗಳು ಕಾರ್ಯನಿರ್ವಹಿಸಲಿವೆ ಎಂದರು. ಚನ್ನಮ್ಮ ಮಹಿಳಾ ಪೊಲೀಸ್ ಪಡೆಯ ಕೀರ್ತಿ ಲಕ್ಕುಂಡಿ, ಎಚ್.ಬಿ. ತಳವಾರ, ಬಿ.ವಿ. ಪಾಟೀಲ, ಎಂ.ಎ. ಕೊಟಗಿ, ಶೈಲಜಾ ಶಾಂತಪ್ಪನವರ, ನೀಲಮ್ಮ ಬಂಡಿಯವರ, ಗೀತಾ ಉಪ್ಪಾರ ಇದ್ದರು. ಪಿಎಸ್​ಐ ಚಂದ್ರಪ್ಪ ಈಟಿ, ಕಾಲೇಜ್ ಪ್ರಾಚಾರ್ಯ ಎಂ.ಎಂ. ಹೆಬ್ಬಾಳ, ಎಸ್.ಬಿ. ನವಲಗುಂದ, ಅರುಣಾ ಗುಗ್ಗರಿ, ಎಂ.ಟಿ. ಬಿಸನಳ್ಳಿ, ಡಿ.ಜಿ. ನಾಡಗೌಡ್ರ, ಉಮೇಶ ಮುಳಗುಂದ, ಉಮೇಶ ಲಮಾಣಿ ಇತರರಿದ್ದರು. ಉಪನ್ಯಾಸಕ ಟಿ.ಬಿ. ಕಳಕರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.

ಠಾಣೆಗೆ ಕರೆ ಮಾಡಬಹುದು

ಮುಂಡರಗಿ ತಾಲೂಕಿನಲ್ಲಿ ಮಹಿಳೆ ದೌರ್ಜನ್ಯ, ಲೈಂಗಿಕ ಕಿರುಕುಳ, ಬಾಲ್ಯವಿವಾಹ, ಮತ್ತಿತರರ ಘಟನೆ ನಡೆದರೆ ಪೊಲೀಸ್ ಠಾಣೆಗೆ ಕರೆ ಮಾಡಬಹುದು. ಹಾಗೆಯೇ ಚನ್ನಮ್ಮ ಮಹಿಳಾ ಪೊಲೀಸ್ ಪಡೆ ಸಿಬ್ಬಂದಿ ಕೀರ್ತಿ ಲಕ್ಕುಂಡಿ (ಮೊ.8746834105), ಮತ್ತು ಎಚ್.ಬಿ. ತಳವಾರ (ಮೊ.8147881363) ಅವರಿಗೂ ಕರೆ ಮಾಡಬಹುದು.

Leave a Reply

Your email address will not be published. Required fields are marked *