ವಿದ್ಯಾರ್ಥಿಗಳ ಕೈಚಳಕ ಅನಾವರಣ

ಶಿವಮೊಗ್ಗ: ನಗರದ ಜೆಎನ್​ಎನ್​ಇ ಕಾಲೇಜಿನಲ್ಲಿ ಆಯೋಜಿಸಿರುವ ಮೂರು ದಿನಗಳ ‘ಟೆಕ್ ಝೋನ್-2019’ ತಾಂತ್ರಿಕ ಸಮ್ಮೇಳನದಲ್ಲಿ ವಿದ್ಯಾರ್ಥಿಗಳ ಕೈಚಳಕ ಅನಾವರಣಗೊಂಡಿದೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ಸೇರಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಟೆಕ್​ರೆೋನ್​ನಲ್ಲಿ ತಮ್ಮನ ಸಾಧನೆಗಳನ್ನು ಪರಿಚಯಿಸಿದರು. ದಿನನಿತ್ಯದ ಜೀವನದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಕೆ ಮಾಡಿಕೊಳ್ಳಬಹುದು. ಅತ್ಯಂತ ಕಡಿಮೆ ಖರ್ಚಿನಲ್ಲಿ ಹೊಸ ಸಾಧನಗಳನ್ನು ಹೇಗೆ ನಿರ್ವಿುಸಬಹುದು ಎಂಬುದನ್ನು ತಮ್ಮ ಆವಿಷ್ಕಾರದ ಮೂಲಕ ತಿಳಿಸಿಕೊಟ್ಟರು.

ನೀವು ಮನೆಯಲ್ಲಿ ಇಲ್ಲದೇ ಇರುವಾಗ ನಿಮ್ಮ ಮನೆಯ ಅಡುಗೆ ಅನಿಲ ಸೋರಿಕೆಯಾಗುತ್ತಿದ್ದರೆ ನಿಮ್ಮ ಮೊಬೈಲ್​ಗೆ ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ. ಅದೂ ಒಂದೆರಡು ಬಾರಿಯಲ್ಲ. ಸತತವಾಗಿ ಸಂದೇಶ ಬರುತ್ತಲೇ ಇರುತ್ತದೆ. ನೀವು ಬೇರೆ ಸ್ಥಳದಲ್ಲಿದ್ದರೂ ನೆರೆ ಮನೆಯವರಿಗೆ ಇದನ್ನು ತಿಳಿಸಿ ಅನಾಹುತ ಉಂಟಾಗುವುದನ್ನು ತಪ್ಪಿಸಬಹುದು. ಇಂಥದ್ದೊಂದು ತಂತ್ರಜ್ಞಾನವನ್ನು ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿ ಕೆ.ಎಸ್.ಅನೂಪ್ ಅಭಿವೃದ್ಧಿಪಡಿಸಿದ್ದಾರೆ. ಇದು ಕೇವಲ ಮನೆಗಳಿಗೆ ಮಾತ್ರವಲ್ಲದೆ ಕೈಗಾರಿಕೆಗಳಿಗೂ ಅನುಕೂಲವಾಗುತ್ತದೆ. ಯಾವುದೇ ರೀತಿಯ ಅನಿಲ ಸೋರಿಕೆಯನ್ನು ಈ ತಂತ್ರಜ್ಞಾನದಿಂದ ಗುರುತಿಸಬಹುದಾಗಿದೆ. ಇಂತಹ ಹತ್ತು ಹಲವು ಆವಿಷ್ಕಾರಗಳನ್ನು ಇಲ್ಲಿ ಕಾಣಬಹುದಾಗಿದೆ.

ಪಿಕ್ ಆಂಡ್ ಪ್ಲೇಸ್ ರೋಬೋಟ್: ಇದು ರೋಬೋಟ್ ಕಾಲ. ಯಂತ್ರ ಮಾನವನಿಂದ ಏನೇನು ಕೆಲಸ ಮಾಡಿಸಿಕೊಳ್ಳಬಹುದು ಎಂದು ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿವೆ. ಜೆಎನ್​ಎನ್ ಕಾಲೇಜಿನ ವಿದ್ಯಾರ್ಥಿಗಳು ಕೈಗಾರಿಕೆಗಳ ಉತ್ಪಾದನಾ ಕ್ಷೇತ್ರದಲ್ಲಿ ರೋಬೋಟ್ ಮಹತ್ವವನ್ನು ತಮ್ಮ ಸಂಶೋಧನೆ ಮೂಲಕ ತಿಳಿಸಿಕೊಟ್ಟಿದ್ದಾರೆ. ಕೈಗಾರಿಕೆಗಳಲ್ಲಿ ದೊಡ್ಡ ಗಾತ್ರದ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂಡೆಗೆ ಕೊಂಡೊಯ್ಯುವುದಕ್ಕಾಗಿ ‘ಪಿಕ್ ಆಂಡ್ ಪ್ಲೇಸ್’ ರೋಬೋಟ್ ಅಭಿವೃದ್ಧಿ ಮಾಡಿದ್ದಾರೆ.

ಗಮನಸೆಳೆದ ಕುಂಚದ ಕಲೆ: ಜೆಎನ್​ಎನ್ ಕಾಲೇಜಿನ ಲೈಬ್ರರಿ ಬ್ಲಾಕ್​ನಲ್ಲಿ ಟೆಕ್​ರೆೋನ್ ಪ್ರಯುಕ್ತ ಏರ್ಪಡಿಸಿದ್ದ ಚಿತ್ರಕಲೆ ಪ್ರದರ್ಶನ ಗಮನೆಳೆಯಿತು. ಭವಿಷ್ಯದ ಇಂಜಿನಿಯರ್​ಗಳ ಕೈಯಲ್ಲಿ ಕುಂಚ ಕಲೆ ಅರಳಿತ್ತು. ವಿವಿಧ ಸಾಮಾಜಿಕ ಸನ್ನಿವೇಶಗಳನ್ನು, ಪ್ರಸ್ತುತ ವಿದ್ಯಮಾನಗಳನ್ನು ಅಭಿವ್ಯಕ್ತಗೊಳಿಸುವ ಚಿತ್ರಗಳು ಮನಸೂರೆಗೊಂಡವು. ಕಲೆ, ಸಾಹಿತ್ಯ, ವಿಜ್ಞಾನ, ರಾಜಕೀಯ ಸೇರಿ ವಿವಿಧ ಕ್ಷೇತ್ರಗಳ ಸಾಧಕರ ಚಿತ್ರಗಳು, ಪರಿಸರ, ವಿಜ್ಞಾನ, ತಂತ್ರಜ್ಞಾನದ ಪ್ರತೀಕವಾದ ಚಿತ್ರಗಳು ಪ್ರದರ್ಶನದಲ್ಲಿದ್ದವು.

ನಾಲ್ಕು ಸಾವಿರ ರೂಪಾಯಿ ಗೆ ಡ್ರೋಣ್: 100 ಮೀ. ಎತ್ತರದಲ್ಲಿ ಹಾರಬಲ್ಲ, ಅತೀ ಕಡಿಮೆ ಖರ್ಚಿನಲ್ಲಿ ಡ್ರೋಣ್​ವೊಂದನ್ನು ಸಿದ್ಧಪಡಿಸಿರುವ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ವಿಭಾಗದ ವಿದ್ಯಾರ್ಥಿ ಕೌಶಿಕ್, ಇದನ್ನು ಮೊಬೈಲ್ ಮೂಲಕವೇ ನಿರ್ವಹಿಸಿ ಗಮನಸೆಳೆದಿದ್ದಾರೆ. ವೈಫೈ ಕಲೆಕ್ಷನ್ ಮೂಲಕ ಈ ಡ್ರೋಣ್​ನ್ನು ನಿಯಂತ್ರಿಸಬಹುದು. ಅತ್ಯಂತ ಹಗುರವಾಗಿರುವುದು ಇದರ ವಿಶಿಷ್ಟತೆ.

Leave a Reply

Your email address will not be published. Required fields are marked *