ವಿದ್ಯಾರ್ಥಿಗಳಿಗೆ ಸರ್ಕಾರದ ಸವಲತ್ತು ಒದಗಿಸಿ

18MDG3 mottama

ಮೂಡಿಗೆರೆ: ಸರ್ಕಾರಿ ಕಾಲೇಜಿನಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗದಂತೆ ಎಚ್ಚರವಹಿಸಿ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಟ್ಟಣದ ಡಿಎಸ್‌ಬಿಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಒಳಾಂಗಣ ಕ್ರೀಡಾಂಗಣ ಮತ್ತು ಮೂರು ಕೊಠಡಿಗಳ ಹೆಚ್ಚುವರಿ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನಲ್ಲಿ ಎಲ್ಲ ವ್ಯವಸ್ಥೆ ಮತ್ತು ನುರಿತ ಅಧ್ಯಾಪಕರಿದ್ದರೂ ವಿದ್ಯಾರ್ಥಿಗಳು ಹೊರಜಿಲ್ಲೆಯ ಕಾಲೇಜುಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಇಲ್ಲಿನ ಕಾಲೇಜಿನಲ್ಲಿ ಸೇರಿಕೊಳ್ಳಲು ಮನವೊಲಿಸಬೇಕು ಎಂದರು.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಕಾಲೇಜಿನ ಗೌರವ ಹೆಚ್ಚಾಗುತ್ತದೆ. ಪಾಲಕರ ಆರ್ಥಿಕ ಪರಿಸ್ಥಿತಿ ಗಮನಿಸಿ ಅಂತಹ ಕುಟುಂಬದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಮತ್ತು ಸರ್ಕಾರದ ಇತರ ಸವಲತ್ತುಗಳನ್ನು ಅಧಿಕಾರಿಗಳು ಒದಗಿಸಬೇಕು ಎಂದು ತಿಳಿಸಿದರು.
ಗೃಹ ಮಂಡಳಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಡಿಎಸ್‌ಬಿಜಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ನೂತನ ಕಟ್ಟಡದ ಕಾಮಗಾರಿ ಪರಿಶೀಲಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಶೋಕ್, ಕಲೀಮುಲ್ಲಾ, ಆಲ್ವಿನ್ ರೋಡ್ರಿಗಸ್, ಪ್ರಾಚಾರ್ಯ ಕೆ.ಟಿ.ದಶರಥ, ಸಹ ಪ್ರಾಧ್ಯಾಪಕರಾದ ಎಚ್.ನೌಶಾದ್, ಉದಯಕುಮಾರ್, ದಯಾನಂದ, ಆರ್.ರಂಗಸ್ವಾಮಿ, ಶಿವರಾಜ್ ಕುಮಾರ್, ನಿವೇದಿತಾ, ವಸಂತ ಲಕ್ಕಿ, ಪುನೀತ್ ಇತರರಿದ್ದರು.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…