ಬಾಳೆಹೊನ್ನೂರು: ಸಂಗಮೇಶ್ವರಪೇಟೆ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಮತ್ತು ವ್ಯಾಪಾರ ಕಾರ್ಯಾಗಾರ ಬುಧವಾರ ಏರ್ಪಡಿಸಲಾಗಿತ್ತು.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಮಾರುಕಟ್ಟೆ, ವ್ಯಾಪಾರದ ಮಾಹಿತಿ ನೀಡಲು ಪ್ರಾಯೋಗಿಕವಾಗಿ ಕೃತಕ ಮಾರುಕಟ್ಟೆ ನಿರ್ಮಾಣ ಚಟುವಟಿಕೆ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಯಾರಿಸಿದ ದೇಶೀಯ ಉತ್ಪನ್ನಗಳ ಪ್ರಾಮುಖ್ಯ ಹಾಗೂ ಅವುಗಳ ಬಳಕೆ ಅಗತ್ಯವನ್ನು ತಿಳಿಸಿಕೊಟ್ಟರು. ಈ ಚಟುವಟಿಕೆ ಮೂಲಕ ಸ್ವದೇಶಿ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಬೇಕು ಮತ್ತು ಅವುಗಳನ್ನು ಹೆಚ್ಚಾಗಿ ಬಳಸಬೇಕು ಎಂಬ ಮಹತ್ವದ ಸಂದೇಶ ನೀಡಿದರು. ಕಾಲೇಜಿನ ಪ್ರಾಚಾರ್ಯ ಎಸ್.ವಿ.ಮೇರುತುಂಗ, ಪ್ರೌಢಶಾಲೆ ಮುಖ್ಯಶಿಕ್ಷಕ ಜಯಪ್ರಕಾಶ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಗೀತಾ, ಕಾರ್ಯಕ್ರಮ ಆಯೋಜಕಿ ಸ್ಪಂದನಾ ಇತರರಿದ್ದರು.