More

  ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್‌ಬುಕ್ ವಿತರಣೆ

  ತಿ.ನರಸೀಪುರ: ತಾಲೂಕಿನ ಮೂಗೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ರಸಗೊಬ್ಬರ ತಯಾರಕ ಕಂಪನಿ ಸ್ಪಿಕ್ ಮತ್ತು ಗ್ರೀನ್ ಸ್ಟಾರ್ ಫರ್ಟಿಲೈಸರ್ ಲಿಮಿಟೆಡ್ ವತಿಯಿಂದ 300 ವಿದಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ನೋಟ್‌ಬುಕ್‌ಗಳನ್ನು ಶುಕ್ರವಾರ ವಿತರಿಸಲಾಯಿತು.


  ಸ್ಪಿಕ್ ಕಂಪನಿ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ನಂಜುಂಡಸ್ವಾಮಿ ಮಾತನಾಡಿ, ರೈತರ ಜಮೀನುಗಳ ಮಣ್ಣು ಪರೀಕ್ಷೆ, ರಿಯಾಯಿತಿ ದರದಲ್ಲಿ ರಸಗೊಬ್ಬರ, ಕೀಟನಾಶಕ, ಗ್ರಾಮೀಣ ಮೆಡಿಕಲ್ ಕ್ಯಾಂಪ್, ಕ್ರೀಡೆಗೆ ಪ್ರಾಮುಖ್ಯತೆಯನ್ನು ಕಂಪನಿ ನೀಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ಅವಶ್ಯವಿರುವ ಸಾಮಗ್ರಿಗಳು ವಿತರಿಸುವ ಕಡೆ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದು ತಿಳಿಸಿದರು.


  ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಜು, ಮುಖ್ಯಶಿಕ್ಷಕಿ ಆರ್.ಭ್ರಮರಾಂಬ, ಸಿಆರ್‌ಪಿ ಶಿವರಾಜು, ಎಸ್‌ಡಿಎಂಸಿ ಸದಸ್ಯರಾದ ಗುರುಸ್ವಾಮಿ, ವಾಸು, ಶಿಕ್ಷಕರಾದ ಪ್ರಕಾಶ್, ಪಾಲ ಪ್ರೇಮಾಚಂದ್, ವಿಶ್ವನಾಥ್, ತುಳಸಿಬಾಯಿ, ಚಂದ್ರಿಕಾ, ವಿದ್ಯಾಶ್ರೀ, ಮರಿಗೌಡ, ನಿರ್ಮಲಾ, ಗಂಗಾ, ಕಂಪನಿಯ ಮಾರುಕಟ್ಟೆ ಅಧಿಕಾರಿ ಚಂದ್ರಕುಮಾರ್, ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ಮಾರುತಿ ಕುಮಾರ್, ಕಿರಿಯ ಅಭಿವೃದ್ಧಿ ಅಧಿಕಾರಿ ಸಿದ್ಧಾರ್ಥ್, ಮಲ್ಲಿಕಾರ್ಜುನ ಎಂಟರ್ ಪ್ರೈಸಸ್ ಮೈಸೂರು ಮಾಲೀಕ ನಾಗರಾಜು ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts