More

  ವಿದ್ಯಾರ್ಥಿಗಳಿಗೆ ಬೇಕಿದೆ‌‌ ಸೈಬರ್ ಜಾಗೃತಿ:ಎಚ್.ಹಾರೂನ್ ರಶೀದ್

  ದಾವಣಗೆರೆ: ಪೊಲೀಸ್ ಮತ್ತು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶಾಲಾ ಕಾಲೇಜು ಮಕ್ಕಳಿಗೆ ಸೈಬರ್ ಅಪರಾಧಗಳು, ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ನಿವೃತ್ತ ಎಎಸ್ಐ ಎಚ್.ಹಾರೂನ್ ರಶೀದ್ ಹೇಳಿದರು.

  ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
  ಹಗಲು ರಾತ್ರಿ ಎನ್ನದೇ ಸೈನಿಕರು ದೇಶದ ಗಡಿ ಕಾಯುವಂತೆಯೇ ದೇಶದೊಳಗಿನ ಕಾನೂನು ಸುವ್ಯವಸ್ಥೆ ಮತ್ತು ಶಾಂತತೆಯನ್ನು ನಮ್ಮ ಪೊಲೀಸರು ಕಾಪಾಡಲು ಶ್ರಮಿಸುತ್ತಾರೆ ಎಂದರು.
  ನಿವೃತ್ತ ಪೊಲೀಸ್ ಅಧಿಕಾರಿ-ಸಿಬ್ಬಂದಿ ಆರೋಗ್ಯದ ದೃಷ್ಠಿಯಿಂದ ನಿತ್ಯ ಧ್ಯಾನ, ಯೋಗಾಸನಗಳನ್ನು ಮಾಡಿರಿ.ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂದರು.
  ಪೂರ್ವವಲಯ ಐಜಿಪಿ ಡಾ.ಕೆ.ತ್ಯಾಗರಾಜನ್, ಎಸ್ಪಿ ಸಿ.ಬಿ.ರಿಷ್ಯಂತ್, ಎಎಸ್ಪಿ ರಾಮಗೊಂಡ ಬಸರಗಿ, ನಿವೃತ್ತ ಅಧಿಕಾರಿಗಳಾದ ಕೆ.ಪಿ.ಚಂದ್ರಪ್ಪ, ರವಿನಾರಾಯಣ, ಹಿಮೊಪಿಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ ಹನಗವಾಡಿ, ವೈ.ಮಲ್ಲೇಶ ಇದ್ದರು.ನಿವೃತ್ತಿ ಹೊಂದಿದ ೧೫ ಜನ ಅಧಿಕಾರಿಗಳು ಗೌರವ ಸ್ವೀಕರಿಸಿದರು. ಹಿಮೊಫಿಲಿಯಾ ಸೊಸೈಟಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts