ಕೊಳ್ಳೇಗಾಲ: ತಾಲೂಕಿನ ಕುಂತೂರು ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸೋಮವಾರ ಜಿಲ್ಲೆಯ ಪ್ರತಿಷ್ಠಿತ ವೇಣು ಗೋಪಾಲ್ ಗೋಲ್ಡ್ ಪ್ಯಾಲೇಸ್ ಮಾಲೀಕರು ತಟ್ಟೆ ಹಾಗೂ ಲೋಟ ವಿತರಣೆ ಮಾಡಿದರು.
ಶಾಲೆಯಲ್ಲಿ ನೀಡುವ ಬೀಸಿ ಊಟ ಯೋಜನೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1 ರಿಂದ 7 ತರಗತಿವರೆಗಿನ ಶಾಲೆಯ 101 ವಿದ್ಯಾರ್ಥಿಗಳಿಗೆ ವೇಣು ಗೋಪಾಲ್ ಗೋಲ್ಡ್ ಪ್ಯಾಲೇಸ್ ಮಾಲೀಕ ಓ.ಎ ವೇಣುಗೋಪಾಲ್ ಹಾಗೂ ಇವರ ಪುತ್ರ ಓ.ವಿ ದಿವಾಕರ್ ತಟ್ಟೆ ಹಾಗೂ ಲೋಟಗಳನ್ನು ವಿತರಿಸಿದರು.
ಈ ವೇಳೆ ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್ ಮಾಲೀಕ ಓ.ವಿ ದಿವಾಕರ್ ಅವರು ಶಾಲೆಯ ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ವಿದ್ಯಾರ್ಥಿ ಜೀವನ ಬಹಳ ವಿಶೇಷವಾದದ್ದು. ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಮುಂದೆ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ಸಾಗಬೇಕು. ಸಮಾಜಕ್ಕೆ ಕೊಡುಗೆ ನೀಡಬೇಕು. ನಮ್ಮೂರು ಹಾಗೂ ಪಾಲಕರಿಗೆ ಹೆಸರು ತರುವ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಶಾಲೆ ಮುಖ್ಯ ಶಿಕ್ಷಕಿ ಹಾಗೂ ಶಾಲಾ ಶಿಕ್ಷಕ, ಶಿಕ್ಷಕಿಯರು ಇದ್ದರು.