ವಿದ್ಯಾರ್ಥಿಗಳಿಗೆ ತಟ್ಟಿದ ಬಹಿಷ್ಕಾರದ ಬಿಸಿ

Latest News

ಚಲಿಸುತ್ತಿದ್ದ ಟ್ರಾಕ್ಟರ್​ಗೆ ನೆಲಕ್ಕೆ ಬಾಗಿದ ವಿದ್ಯುತ್​ ಕಂಬದ ತಂತಿ ಸ್ಪರ್ಶ: ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟ ಚಾಲಕ

ಬಾಗಲಕೋಟೆ: ಚಲಿಸುತ್ತಿದ್ದ ಟ್ರಾಕ್ಟರ್​ಗೆ ವಿದ್ಯುತ್​ ಹರಿದು ಚಾಲಕ ಮೃತಪಟ್ಟ ಘಟನೆ ಜಮಖಂಡಿ ತಾಲೂಕಿನ ಕಂಕಣವಾಗಿ ಗ್ರಾಮದಲ್ಲಿ ನಡೆದಿದೆ. ಶಿವಲಿಂಗ ಸೋಮರಾಯ ಸವಣೂರ (20) ವಿದ್ಯುತ್​...

ಮೇ 30ರ ವರೆಗೂ ಹರಿಯಲಿ ನೀರು: ಕರ್ನಾಟಕ ರೈತ ಹಿತರಕ್ಷಣಾ ವೇದಿಕೆ ಒತ್ತಾಯ

ಗಂಗಾವತಿ: ಎರಡನೇ ಬೆಳೆಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ಮೇ 30ರವರೆಗೂ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ...

ಕಾಡಾ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಮಾಜಿ ಸಚಿವ ಶಿವರಾಜ್ ತಂಗಡಗಿ

ಕಾರಟಗಿ: ತುಂಗಭದ್ರಾ ಜಲಾಶಯದಲ್ಲಿ 96 ಟಿಎಂಸಿ ಅಡಿ ನೀರಿದ್ದರೂ ಎರಡನೇ ಬೆಳೆಗೆ ನೀರು ಬಿಡಲು ಸರ್ಕಾರ ಮೀನ ಮೇಷ ಎಣಿಸುತ್ತಿರುವುದು ನಾಚಿಕೆಗಢು. ಏ.20ರ...

ಐತಿಹಾಸಿಕ ಪಿಂಕ್​ಬಾಲ್, ಅಹರ್ನಿಶಿ ಟೆಸ್ಟ್​ನಲ್ಲಿ 106 ಕ್ಕೆ ಆಲ್​ ಔಟ್​ ಆದ ಬಾಂಗ್ಲಾ ಹುಲಿಗಳು: ಪ್ರಭುತ್ವ ಮೆರೆದ ಭಾರತದ ವೇಗಿಗಳು

ಕೋಲ್ಕತ: ಬಾಂಗ್ಲಾದೇಶದ ವಿರುದ್ಧ ಈಡನ್ ಗಾರ್ಡನ್​ನಲ್ಲಿ ನಡೆಯುತ್ತಿರುವ ಮೊದಲ ಅಹರ್ನಿಶಿ ಟೆಸ್ಟ್​ ಕ್ರಿಕೆಟ್​​ ಪಂದ್ಯದ ಮೊದಲದಿನ ಭಾರತ ಕ್ರಿಕೆಟ್​ ತಂಡ ಪ್ರಭುತ್ವ ಮೆರೆದಿದೆ....

ಹುಬ್ಬಳ್ಳಿ;ಪದೋನ್ನತಿಗೆ ಒತ್ತಾಯಿಸಿ ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು 6ರಿಂದ 8ನೇ ತರಗತಿ ಬೋಧನೆ ಬಹಿಷ್ಕರಿಸಿ ನಡೆಸಿರುವ ಅನಿರ್ದಿಷ್ಟಾವಧಿ ಹೋರಾಟ ಮಕ್ಕಳ ಮೇಲೆ ಪರಿಣಾಮ ಬೀರತೊಡಗಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದೆ. ದಾಖಾಲಾತಿ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಹೆಣಗಾಡುತ್ತಿರುವ ಮಧ್ಯೆಯೇ ಶಿಕ್ಷಕರು, ತರಗತಿ ಬಹಿಷ್ಕರಿಸಿದ್ದು ಇಲಾಖೆಯನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. 6ರಿಂದ 8ನೇ ತರಗತಿ ಮಕ್ಕಳು ಶಾಲೆಗೆ ಬಂದು ಕಲಿಯದೇ ಕೇವಲ ಹಾಜರಾತಿಯಷ್ಟೇ ಹಾಕಿ ಹೋಗುತ್ತಿದ್ದಾರೆ.

1ರಿಂದ 5ನೇ ತರಗತಿ ವೃಂದದ ಪದವೀಧರ ಶಿಕ್ಷಕರು ತಮ್ಮ ಬೋಧನೆ ಜೊತೆ 14 ವರ್ಷದಿಂದ 6ರಿಂದ 8ನೇ ತರಗತಿಗೂ ಬೋಧಿಸುತ್ತ ಬಂದಿದ್ದಾರೆ. ಆದರೆ, ಇಲಾಖೆ 6ರಿಂದ 8ನೇ ಬೋಧಕ ವೃಂದಕ್ಕೆ ಸೇರಿಸದೇ 1-5ನೇ ತರಗತಿ ಬೋಧಕ ವರ್ಗವೆಂದಷ್ಟೇ ಪರಿಗಣಿಸಿದ್ದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪದವಿ, ಅನುಭವ, ಅರ್ಹತೆ ಇದ್ದರೂ 6-8ನೇ ತರಗತಿ ವೃಂದಕ್ಕೆ ಬಡ್ತಿ ನೀಡದೇ ಹೊಸ ನೇಮಕಾತಿ ಮಾಡುತ್ತಿರುವುದೇಕೆಂದು ಪ್ರಶ್ನಿಸುತ್ತಿದ್ದಾರೆ. 6-8ನೇ ತರಗತಿ ಬೋಧನೆಗೆ ಹೊಸದಾಗಿ ವಿಷಯವಾರು ಶಿಕ್ಷಕರ ನೇಮಕ ಪ್ರಕ್ರಿಯೆ ತಡೆ ಹಿಡಿದು ನಮಗೆ ಆದ್ಯತೆ ಕೊಡಬೇಕೆಂಬ ಬೇಡಿಕೆಯಿಟ್ಟು ಸೋಮವಾರದಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು 6ರಿಂದ 8ನೇ ತರಗತಿ ಬೋಧನೆಯನ್ನು ಬಹಿಷ್ಕರಿಸಿದ್ದಾರೆ.

ಏನಾಗಿದೆ?:ಈ ಮೊದಲು ಪ್ರಾಥಮಿಕ ಶಾಲೆಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ಡಿ.ಇಡಿ ಕಡ್ಡಾಯ ಮಾಡಲಾಗಿತ್ತು. ನೇಮಕವಾಗುವ ಶಿಕ್ಷಕರು 1ರಿಂದ 7ನೇ ತರಗತಿಗೆ ಬೋಧನೆ ಮಾಡುತ್ತಿದ್ದರು. ಬಳಿಕ 8ನೇ ತರಗತಿ ಪ್ರಾಥಮಿಕ ಶಾಲೆಗೆ ಸೇರ್ಪಡೆ ಆಯಿತು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಅಧಿನಿಯಮದನ್ವಯ ಪ್ರಥಮ ಭಾಷೆ, ವಿಜ್ಞಾನ, ಗಣಿತ ಸೇರಿ ಪ್ರತಿ ವಿಷಯಕ್ಕೆ ಪ್ರತ್ಯೇಕ ಶಿಕ್ಷಕರಿರಬೇಕೆಂದು ಕಡ್ಡಾಯಗೊಳಿಸಿ ಈ ಶಿಕ್ಷಕರಿಗೆ ಹೆಚ್ಚಿನ ವಿದ್ಯಾರ್ಹತೆ ನಿಗದಿಪಡಿಸಿದೆ. ಈ ಮೊದಲಿದ್ದ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5) ಎಂದು ಸೀಮಿತಗೊಳಿಸಿದೆ. ವಿಷಯವಾರು ಬೋಧನೆ ಮಾಡುವವರಿಗೆ ಪದವೀಧರ ಪ್ರಾಥಮಿಕ ಶಿಕ್ಷಕರು (6ರಿಂದ 8) ಎಂಬ ಹುದ್ದೆ ಹೊಸದಾಗಿ ಸೃಜಿಸಲಾಗಿದೆ. ಸದ್ಯ ಇರುವ ಶಿಕ್ಷಕರ ಪೈಕಿ 82 ಸಾವಿರ ಅಧಿಕ ಪದವೀಧರ ಶಿಕ್ಷಕರಿದ್ದು, ಇವರನ್ನು ಹೊಸ ವೃಂದದಲ್ಲಿ ವಿಲೀನಗೊಳಿಸಲಾಗುವುದು ಎಂದು ಸರ್ಕಾರ 2017 ಮೇ 17ರಂದು ಆದೇಶ ಮಾಡಿದೆ. ಆದರೆ ಶೇ. 75ರಷ್ಟು ಹುದ್ದೆಗಳನ್ನು ಹೊಸದಾಗಿ ಭರ್ತಿ ಮಾಡಲು ಸರ್ಕಾರ ನಿರ್ಧರಿಸಿರುವುದು ಹಾಲಿ ಪದವೀಧರ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಿಕ್ಷಕರ ವಾದ:ಸರ್ಕಾರ 52 ಸಾವಿರದಷ್ಟು 6ರಿಂದ 8 ವೃಂದದ ಶಿಕ್ಷಕರನ್ನು ಒಮ್ಮೆಲೇ ನೇಮಕಾತಿ ಮಾಡುವುದು ಅಸಾಧ್ಯದ ಮಾತು. ಹಂತ ಹಂತವಾಗಿ ನೇಮಕವಾಗುವವರೆಗೂ ಈಗಿರುವ ಶಿಕ್ಷಕರೇ ಈ ವೃಂದಕ್ಕೆ ಪಾಠ ಮಾಡಬೇಕಾಗುತ್ತದೆ. ಹೊಸ ಶಿಕ್ಷಕರು ಬಂದ ಬಳಿಕ ಸ್ಥಾನ ಬಿಟ್ಟು ಕೊಡಬೇಕಾಗುತ್ತದೆ. ಹೀಗಾಗಿ ನಮ್ಮನ್ನೇ 6-8 ವೃಂದಕ್ಕೆ ಸೇರಿಸಿ ಬಡ್ತಿ ನೀಡಬೇಕೆನ್ನುವುದು ಪ್ರಾಥಮಿಕ ಶಾಲೆ ಪದವೀಧರ ಶಿಕ್ಷಕರ ವಾದ.

ರಾಜ್ಯದಲ್ಲಿ ಸುಮಾರು 82 ಸಾವಿರ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿದ್ದಾರೆ. ಇವರೆಲ್ಲ 1ರಿಂದ 5 ತರಗತಿ ಬೋಧನೆ ಜೊತೆಗೆ 14 ವರ್ಷದಿಂದ 6ರಿಂದ 8ನೇ ತರಗತಿಗೂ ಬೋಧಿಸುತ್ತ ಬಂದಿದ್ದಾರೆ. ಈಗ 6-8ರ ವೃಂದಕ್ಕೆ ಹೊಸ ನೇಮಕ ಪ್ರಕ್ರಿಯೆ ಮಾಡುತ್ತಿರುವುದು ಏತಕ್ಕೆ? ಹೊಸ ನೇಮಕ ನಡೆಸಿದ್ದೆ ಆದಲ್ಲಿ 82 ಸಾವಿರ ಶಿಕ್ಷಕರಿಗೆ ಆದ್ಯತೆ ನೀಡಲಿ. ಇಲ್ಲದಿದ್ದರೆ ತರಗತಿ ಬಹಿಷ್ಕಾರ ಮುಂದುವರಿಯಲಿದೆ.

| ಎಸ್.ವೈ. ಸೊರಟಿ, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ

- Advertisement -

Stay connected

278,668FansLike
576FollowersFollow
611,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...