ವಿದ್ಯಾರ್ಥಿಗಳಿಗೆ ಕೃಷಿ ಶಿಕ್ಷಣ ಪ್ರಾತ್ಯಕ್ಷಿಕೆ

ಹಳಿಯಾಳ: ಕೃಷಿ ಎಂದರೇ ಏನು, ನಾಟಿ ಹೇಗೆ ಮಾಡುತ್ತಾರೆ ಎಂಬುದನ್ನು ಮಕ್ಕಳಿಗೆ ತಿಳಿಸಲು ಪಟ್ಟಣದ ವಿವಿಡಿ ಸ್ಕೂಲ್ ಆಫ್ ಎಕ್ಸ್​ಲೆನ್ಸ್ ಗುರುವಾರ ಪ್ರಾತ್ಯಕ್ಷಿಕೆ ಶಿಬಿರವನ್ನು ಆಯೋಜಿಸಿ ಕೃಷಿ ಶಿಕ್ಷಣ ನೀಡಿತು.

ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಾಟಿಗೆ ಸಿದ್ದವಿರುವ ಹೊಲದಲ್ಲಿ ಶಿಕ್ಷಕ, ಶಿಕ್ಷಕಿಯರು ವಿದ್ಯಾರ್ಥಿಗಳೊಂದಿಗೆ ಭತ್ತದ ನಾಟಿ ಮಾಡಿದರು. ಕೃಷಿ ಬೇಸಾಯದಲ್ಲಿ ಎದುರಾಗುವ ಸಮಸ್ಯೆಗಳು, ರೈತರು ಎದುರಿಸುವ ಸಮಸ್ಯೆಗಳ ಬಗ್ಗೆ ಶಿಕ್ಷಕರಾದ ನೆಲ್ಸಿ ಫರ್ನಾಂಡಿಸ್ ಹಾಗೂ ಪರಶುರಾಮ ಬಡಿಗೇರ ಮಕ್ಕಳಿಗೆ ಮನವರಿಕೆ ಮಾಡಿದರು.

ನಾಟಿ ಮಾಡಿ ಸಂಭ್ರಮಿಸಿದ ಮಕ್ಕಳು

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿ ಅನುಭವದ ಪಾಠವನ್ನು ಪ್ರಾಯೋಗಿಕವಾಗಿ ಪಡೆದುಕೊಂಡರು.

ಏಳನೇ ತರಗತಿಯ ವಿದ್ಯಾರ್ಥಿಗಳ ಕನ್ನಡ ಪಠ್ಯದಲ್ಲಿ ಇರುವ ಶೀನ ಶೆಟ್ಟರು ನಮ್ಮ ಟೀಚರ್ ಎಂಬ ಪಾಠದಲ್ಲಿ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ವಿಚಾರ ಇದ್ದು, ಅದನ್ನು ಪ್ರಾಯೋಗಿಕವಾಗಿ ಶಿಕ್ಷಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಾರಾಯಣ ಭಟ್ಟ ಮೊಟ್ಟೆಪಾಲ ಅವರ ಹೊಲದಲ್ಲಿ ವಿದ್ಯಾರ್ಥಿಗಳು ಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ, ಶಿಕ್ಷಕರಾದ ಇಂದಿರಾ ನಾಯಕ, ಪ್ರತಿಭಾ ಹೆಗಡೆ, ಅಮಿತ್ ಚೌಹಾಣ್, ಗ್ರಾಮಸ್ಥರಾದ ಮಧುಕರ ಆಚಾರಿ, ಶಂಕರ ಭಟ್ಟ ಕಲಗಂಡ, ನಾರಾಯಣ ಭಟ್ಟ ಮೊಟ್ಟೆಪಾಲ ಹಾಗೂ ಎಸ್​ಡಿಎಂಸಿ ಸದಸ್ಯರ ಮಾರ್ಗದರ್ಶನದಲ್ಲಿ ಭತ್ತದ ಸಸಿಗಳನ್ನು ಕಿತ್ತು, ನಾಟಿ ಮಾಡಿ ಸಂಭ್ರಮಿಸಿದರು.

Leave a Reply

Your email address will not be published. Required fields are marked *