ವಿದೇಶದಲ್ಲಿ ಸಂಶೋಧನೆ ಸಲ್ಲ

ಕಲಬುರಗಿ: ದೇಶದ ಪ್ರಾಚೀನ ನಳಂದ ಮತ್ತು ತಕ್ಷಶೀಲ ವಿಶ್ವವಿದ್ಯಾಲಯಗಳು ವಿದೇಶಿ ಸಂಶೋಧಕರಿಗೆ ಜ್ಞಾನದ ಮೂಲಗಳಾಗಿವೆ. ಯುವಕರು ಸಂಶೋಧನಾ ಚಟುವಟಿಕೆಗಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಪ್ರವೃತ್ತಿ ತಡೆಯುವುದು ರಾಷ್ಟ್ರೀಯ ಶಿಕ್ಷಣ ನೀತಿ-2019ರ ಮೂಲಕ ಸಾಧ್ಯವಾಗಲಿದೆ ಎಂದು ಶರಣಬಸವ ವಿಶ್ವವಿದ್ಯಾಲಯ ಕುಲಪತಿ ಡಾ.ನಿರಂಜನ್ ನಿಷ್ಠಿ ಅಭಿಪ್ರಾಯಪಟ್ಟರು.
ಶರಣಬಸವ ವಿಶ್ವವಿದ್ಯಾಲಯ ಆವರಣದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2019ರ ಅವಲೋಕನ ಕುರಿತು ಮಾತನಾಡಿದ ಅವರು, ದೇಶದ ಒಟ್ಟು ಉತ್ಪನ್ನದಲ್ಲಿ (ಜಿಡಿಪಿ) ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ವ್ಯಯ ಮಾಡಲಾಗುತ್ತಿದೆ. ದೇಶದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಕಾರ್ಯಯೋಜನೆಗಳಿಂದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತ ಬಡವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುಣಮಟ್ಟದ ವಿಶ್ವವಿದ್ಯಾಲಯ ಮತ್ತು ಕಾಲೇಜು ವಿಷಯದ ಬಗ್ಗೆ ವಿವಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಸುಸ್ಥಿರತೆ ಪರಿವರ್ತಿಸಲು ಸಹಾಯ ಮಾಡುತ್ತದೆ. ಸಮಾನತೆ ಮತ್ತು ಉನ್ನತ ಮಟ್ಟದ ಜ್ಞಾನ ಆಧರಿಸಿ ಸಮಾಜ ಸೃಷ್ಟಿಗೆ ಸಹಕಾರಿಯಾಗಿದೆ. ಈ ನೀತಿ ಎಲ್ಲರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಗುರಿ ಹೊಂದಿದೆ. ದೇಶವ್ಯಾಪಿ ಮಲ್ಟಿ ಡಿಸಿಪ್ಲಿನರಿ ಉನ್ನತ ಶಿಕ್ಷಣದ ನೀತಿ ಶಿಕ್ಷಣ ಕ್ಷೇತ್ರ ಸುಧಾರಿಸುವಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದರು.
ಅತ್ಯುತ್ತಮ ಕಲಿಕಾ ವಾತಾವರಣ ಮತ್ತು ವಿದ್ಯಾರ್ಥಿಗಳಿಗೆ ಬೆಂಬಲ ಕುರಿತು ವಿವಿ ಸಮಕುಲಪತಿ ಡಾ.ವಿ.ಡಿ. ಮೈತ್ರಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಿದ ಎಲ್ಲ ಪ್ರಮುಖ ಬದಲಾವಣೆ ಅಂಶಗಳು ಅಭಿವೃದ್ಧಿ ಹೊಂದಿರುವ ದೇಶದಲ್ಲಿ ಪ್ರಸ್ತುತ ಚಾಲ್ತಿಯಲ್ಲಿವೆ. ಈ ದೇಶಗಳಿಗೆ ಹೋಲಿಸಿದರೆ ಭಾರತ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಉತ್ಕೃಷ್ಟ ಮಟ್ಟದ ಪಠ್ಯಕ್ರಮ, ಶಿಕ್ಷಣ ಮತ್ತು ವಿದ್ಯಾಥರ್ಿಗಳ ಬೆಂಬಲದಿಂದ ಗುಣಮಟ್ಟದ ಕಲಿಕೆ ವಾತಾವರಣ ಸೃಷ್ಟಿ ಸಾಧ್ಯವಾಗುತ್ತದೆ. ಗುರಿ ನಿರ್ದಿಷ್ಟ, ಆಕರ್ಷಕ ಪಠ್ಯಕ್ರಮ ವಿನ್ಯಾಸಗೊಳಿಸುವ ಅಗತ್ಯವಿದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನವು ಕಠಿಣ, ಕಿರಿದಾದ ಮತ್ತು ಬಳಕೆಯಲ್ಲಿಲ್ಲದ ಪಠ್ಯಕ್ರಮ ಅನುಸರಿಸುತ್ತವೆ. ಶಿಸ್ತಿನ ಜ್ಞಾನ ಮತ್ತು ಶಿಕ್ಷಣ ಅಭ್ಯಾಸಗಳಲ್ಲಿನ ಆಧುನಿಕ ಪ್ರಗತಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ. ಇದು ಶೈಕ್ಷಣಿಕವಾಗಿ ದೇಶವನ್ನು ಹಿಮ್ಮುಖಗೊಳಿಸುತ್ತಿದೆ. ಯುಜಿಸಿ, ಎಐಸಿಟಿ, ಎನ್ಎಎಸಿ ನಿಗದಿಪಡಿಸಿದ ಪಠ್ಯಕ್ರಮದ ಯೋಜನಾ ಕ್ರಮಗಳಿಗೆ ಶಿಕ್ಷಣ ಸಂಸ್ಥೆಗಳು ಸ್ಪಂದಿಸಬೇಕು ಎಂದರು.
ಡಾ.ಲಕ್ಷ್ಮೀ ಮಾಕಾ, ಡಾ.ಶಶಿಕಲಾ ಸೇರಿ 200ಕ್ಕೂ ಹೆಚ್ಚು ಪ್ರಾಧ್ಯಾಪಕರು ಪಾಲ್ಗೊಂಡಿದ್ದರು. ಪ್ರೊ.ಶೋಭನಾ ಪ್ರಾರ್ಥಿಸಿದರು. ಡಾ.ಲಿಂಗರಾಜ ಶಾಸ್ತ್ರಿ ಸ್ವಾಗತಿಸಿದರು. ಡಾ.ಶಿವಕುಮಾರ ಜವಳಗಿ ನಿರೂಪಣೆ ಮಾಡಿದರು. 


ವಿದ್ಯಾರ್ಥಿಗಳು ಸ್ವತಂತ್ರವಾಗಿ ಓದುವುದು, ಬರೆಯುವುದು ಮತ್ತು ಮಾತನಾಡುವಿಕೆಯನ್ನು ತಾರ್ಕಿಕ ಮತ್ತು ವಿಶ್ಲೇಷಣೆಯನ್ನು ಹೆಚ್ಚುವರಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಂಬಲಕ್ಕಾಗಿ ರೂಪಿಸಿದ್ದ ಈ ಶಿಕ್ಷಣ ನೀತಿ ಮೊದಲೇ ನಿರ್ದೇಶಿಸಲಾಗಿದೆ.
| ಶ್ರೀ ಡಾ.ಶರಣಬಸವಪ್ಪ ಅಪ್ಪ,
ಕುಲಾಧಿಪತಿ, ಶರಣಬಸವ ವಿವಿ ಕಲಬುರಗಿ

Leave a Reply

Your email address will not be published. Required fields are marked *