ವಿದೇಶದಲ್ಲಾಗುವ ಸಂಶೋಧನೆ ಭಾರತಕ್ಕೆ ಪರಿಚಯಿಸಲು ಡಾ. ಕೋರೆ ಕರೆ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿಯಲ್ಲಿ 1975ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಸ್ನೇಹ ಕೂಟ ಆಯೋಜಿಸಿದ್ದರು.
ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಉದ್ಘಾಟಿಸಿ, ವಿದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಬೆಳವಣಿಗೆಗಳನ್ನು ನಮ್ಮ ದೇಶಕ್ಕೆ ಪರಿಚಯ ಮಾಡಿಕೊಟ್ಟಲ್ಲಿ ವೈದ್ಯರಾದ ತಾವು ದೇಶಕ್ಕೆ ಅಪರೂಪದ ಸೇವೆ ಸಲ್ಲಿಸಿದಂತೆ ಎಂದು ಹೇಳಿದರು.
ಡಾ.ಬಿ.ಆರ್.ದೇಸಾಯಿ, ಡಾ.ಜೋಗಳೇಕರ, ಡಾ.ಬಿ.ಬಿ.ಪುಟ್ಟಿ, ಡಾ.ಎನ್.ಡಿ.ಜಿಂಗಾಡೆ, ಡಾ.ಪಿ.ಎ.ಪಾಟೀಲ, ಡಾ.ಎ.ಎಸ್.ಗೋಧಿ, ಡಾ.ಎ.ಎಸ್.ವಂಟಮೂಟೆ, ಡಾ.ಎ.ವಿ.ಧಡೇದ, ಡಾ.ಅಂಟಿನ, ಡಾ.ಬಿ.ಆರ್.ನೀಲಗಾರ, ಡಾ.ಬಿ.ಎಸ್.ಕೋಡ್ಕಿಣಿ, ಡಾ.ಬಿ.ಸಿದ್ದರಾಮಪ್ಪ, ಡಾ.ಸಿ.ಎಸ್.ಪಾಟೀಲ, ಡಾ.ಡಿ.ಎಸ್.ಕುಚಬಾ, ಡಾ.ಜಿ.ಎಂ.ವಾಲಿ, ಡಾ.ಎಚ್.ಬಿ.ರಾಜಶೇಖರ, ಡಾ.ಹೇಮಶೆಟ್ಟರ್, ಡಾ.ಕುಚಬಾಳ, ಡಾ.ಎಂ.ಎಚ್.ಇನಾಮದಾರ, ಡಾ.ನರಗುಂದ, ಡಾ.ಪಿ.ಆರ್.ಮಲ್ಲೂರ, ಡಾ.ವಿ.ಬಿ.ಧಡೇದ ಸೇರಿ ಹಲವು ಹಳೆಯ ವಿದ್ಯಾರ್ಥಿಗಳು ಇದ್ದರು.
ಡಾ.ವಿ.ಡಿ.ಪಾಟೀಲ ಅಧ್ಯಕ್ಷತೆಯಲ್ಲಿ ಹಳೇ ವಿದ್ಯಾರ್ಥಿಗಳೆಲ್ಲ ಸೇರಿ ತಮಗೆ ಕಲಿಸಿದ ಗುರುಗಳಿಗೆ ನೆನಪಿನ ಕಾಣಿಕೆ ನೀಡಿ, ಶಾಲು ಹೊದಿಸಿ ಗೌರವಿಸಿದರು. ಗುರುಗಳು ಹಾಗೂ ತಮ್ಮ ನಡುವಿನ ಅನ್ಯೋನ್ಯ ಸಂಬಂಧಗಳ ಹಳೇ ನೆನಪುಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು.
1975ರಲ್ಲಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಡಾ.ಎಸ್.ಜಿ.ದೇಸಾಯಿ ಅವರಿಗೆ ಈಗ 92 ವರ್ಷ. ಕಾರ‌್ಯಕ್ರಮದಲ್ಲಿ ಅವರಿಗೆ ಪಾಲ್ಗೊಳ್ಳಲಾಗಲಿಲ್ಲ. ಎಲ್ಲ ವಿದ್ಯಾರ್ಥಿಗಳು ಸೇರಿ ಸದಾಶಿವನಗರದಲ್ಲಿರುವ ಅವರ ಮನೆಗೆ ಹೋಗಿ ಗೌರವಿಸಿದರು. ಡಾ.ಶಶಿಧರ ಮೇಸ್ತ್ರಿ, ಡಾ.ಸುರೇಶ ಕರ್ಲಟ್ಟಿ ಹಾಗೂ ಡಾ.ಬಸವರಾಜ ಪಟ್ಟಣಶೆಟ್ಟಿ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರುಗಿತು.