ಚಿತ್ರದುರ್ಗ: ಶಾಲೆಯೊಂದರ ಆವರಣದಲ್ಲಿ ನವನವೀನ ಮಾದರಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ವಿಜ್ಞಾನದ ಕುರಿತ ಆಸಕ್ತಿಯನ್ನು ಅನಾವರಣಗೊಳಿಸಿದರು.
ಬಿ.ಡಿ.ರಸ್ತೆಯ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ ವಿಜ್ಞಾನ ವಸ್ತು ಪ್ರದರ್ಶನ ಇದಕ್ಕೆ ಸಾಕ್ಷಿಯಾಯಿತು.
1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಮಳೆ ನೀರಿನ ಕೊಯ್ಲು, ಸಾರಿಗೆ ವ್ಯವಸ್ಥೆ, ಅಣೆಕಟ್ಟು, ಸೋಲಾರ್ ಸ್ಮಾರ್ಟ್ ಸಿಟಿ, ಆಮ್ಲೀಯ ಮಳೆ, ವಾಯುಮಾಲಿನ್ಯ, ಜ್ವಾಲಾಮುಖಿ, ಇನ್ನಿತರೆ ಮಾದರಿಗಳನ್ನು ಸಿದ್ಧಪಡಿಸಿ ಅದರ ಮಹತ್ವವನ್ನು ವಿವರಿಸುವ ಮೂಲಕ ಪಾಲಕರ, ತೀರ್ಪುಗಾರರ ಗಮನ ಸೆಳೆದರು.
ಶಾಲೆಯ ಕಾರ್ಯದರ್ಶಿ ಸಿ.ರವಿಕುಮಾರ್ ಇದ್ದರು.