ಸಿನಿಮಾ

ವಿಜೃಂಭಣೆಯ ಜ್ಯೋತಿ ಪಲ್ಲಕ್ಕಿ ಉತ್ಸವ

ಸರಗೂರು: ಪಟ್ಟಣದ 10ನೇ ವಾರ್ಡ್‌ನಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ 83ನೇ ವರ್ಷದ ಜ್ಯೋತಿ ಪಲ್ಲಕ್ಕಿ ಉತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.

ನೇಕಾರ ತೊಗಟವೀರ ಕ್ಷತ್ರಿಯ ಸಮಾಜ ವತಿಯಿಂದ ಉತ್ಸವ ಆಯೋಜಿಸಲಾಗಿದ್ದು, 28ರವರೆಗೆೆ ನಡೆಯಲಿದೆ. ಉತ್ಸವದ ಹಿನ್ನೆಲೆಯಲ್ಲಿ ಪುಣ್ಯಾಹ, ನಂದಿ ಕಳಸ ಸ್ಥಾಪನೆ, ಗಣಪತಿ ಪೂಜೆ, ನವಗ್ರಹೋಮ ಮತ್ತು ದುರ್ಗಾ ಹೋಮ ನೆರವೇರಿತು. ನಂತರ ಚೌಡೇಶ್ವರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ಮಹಾಮಂಗಳಾರತಿ ಮಾಡಲಾಯಿತು.

ಇದಕ್ಕೂ ಮುನ್ನ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವವನ್ನು ಸಮಾಜದವರು ಮಂಗಳವಾದ್ಯದೊಂದಿಗೆ ಕಪಿಲಾ ನದಿ ದಡಕ್ಕೆ ಕರೆತಂದು ಪೂಜಾ ವಿಧಿವಿಧಾನ ನೆರವೇರಿಸಿದರು. ಬಳಿಕ ಭಕ್ತರು ಬಾಯಿ ಬೀಗ ಹಾಕಿಕೊಂಡು ಭಕ್ತಿ ಸಮರ್ಪಿಸಿದರು.

ದೇವಸ್ಥಾನವನ್ನು ಹಸಿರು ತೋರಣದಿಂದ ಸಿಂಗರಿಸಲಾಗಿತ್ತು. ದೇವಸ್ಥಾನದ ಮುಂಭಾಗ ಮತ್ತು ಬೀದಿಯಲ್ಲಿ ರಂಗೋಲಿ ಬಿಡಿಸಲಾಗಿತ್ತು. ದೇವಿ ದರ್ಶನ ಪಡೆದ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ವಿತರಿಸಲಾಯಿತು. ಉತ್ಸವವು ದೇವಸ್ಥಾನ ತಲುಪಿದ ನಂತರ ಮಹಾಮಂಗಳಾರತಿ ಮಾಡಿ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಬಳಿಕ ಅನ್ನ ಸಂತರ್ಪಣೆ ನಡೆಯಿತು.

Latest Posts

ಲೈಫ್‌ಸ್ಟೈಲ್