Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ವಿಜಯ್ ಮಲ್ಯ ಘೋಷಿತ ಅಪರಾಧಿ?

Thursday, 09.11.2017, 3:03 AM       No Comments

ನವದೆಹಲಿ: ಬಹುಸಾವಿರ ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡು ವಿದೇಶದಲ್ಲಿ ನೆಲಸಿರುವ ಉದ್ಯಮಿ ವಿಜಯ್ ಮಲ್ಯರನ್ನು ಘೋಷಿತ ಅಪರಾಧಿ ಎಂದು ಸಾರಲು ದೆಹಲಿ ಕೋರ್ಟ್ ಸಿದ್ಧತೆ ನಡೆಸಿದೆ. ಅಕ್ರಮ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ಮಲ್ಯಗೆ ಹಲವು ಬಾರಿ ನೋಟಿಸ್ ಕಳುಹಿಸಲಾಗಿದೆ. ಆದರೆ ಮಲ್ಯ ಕೋರ್ಟ್​ಗೆ ಹಾಜರಾಗದೆ ತಪ್ಪಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ. 18ರಂದು ಹಾಜರಾಗುವಂತೆ ಕೊನೆಯ ಅವಕಾಶ ನೀಡಿದ್ದು, ತಪ್ಪಿದಲ್ಲಿ ಘೋಷಿತ ಅಪರಾಧಿ ಎಂದು ಕೋರ್ಟ್ ಘೋಷಿಸಲಿದೆ.

ಮಲ್ಯ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೇಹ್ರಾವತ್ ನಿರ್ದೇಶನ ನೀಡಿದ್ದಾರೆ.

ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ

ಏ. 12ರಂದು ಜಾಮೀನುರಹಿತ ವಾರಂಟ್ ಹೊರಡಿಸಿತ್ತು. ಆದರೆ ನೋಟಿಸ್​ಗೆ ಮಲ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಘೋಷಿತ ಅಪರಾಧಿ ಎಂದು ಸಾರಲು ಅಗತ್ಯ ಕ್ರಮಕ್ಕೆ ನ್ಯಾಯಾಲಯ ಮುಂದಾಗಿದೆ. ಈ ಮಧ್ಯೆ ತಾನು ಭಾರತಕ್ಕೆ ಬರಲಿಚ್ಛಿಸಿದ್ದೇನೆ, ಆದರೆ ಭಾರತೀಯ ಅಧಿಕಾರಿಗಳು ಪಾಸ್​ಪೋರ್ಟ್ ತಡೆಹಿಡಿದಿದ್ದರಿಂದ ಸಮಸ್ಯೆಯಾಗುತ್ತಿದೆ ಎಂದು ಮಲ್ಯ ಹೇಳಿದ್ದರು. ಕಳೆದ ಜು. 9ರಂದು ನ್ಯಾಯಾಲಯವು ವಿಚಾರಣೆಗೆ ನೇರ ಹಾಜರಾತಿಯಿಂದ ಮಲ್ಯಗೆ ನೀಡಿದ್ದ ವಿನಾಯಿತಿ ರದ್ದುಪಡಿಸಿ, ಸೆ. 9ರಂದು ಕೋರ್ಟ್​ಗೆ ಹಾಜರಾಗುವಂತೆ ಸೂಚನೆ ನೀಡಿತ್ತು. ಆದರೆ ಮಲ್ಯ ಸಕಾರಣವಿಲ್ಲದೆ ವಿಚಾರಣೆಗೆ ಗೈರಾಗಿದ್ದರು.

ಟ್ವಿಟರ್ ಅಕ್ಷರಗಳ ಮಿತಿ 140ರಿಂದ 280ಕ್ಕೆ ಏರಿಕೆ

ನವದೆಹಲಿ: ಸಾಮಾಜಿಕ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟರ್ ತನ್ನ ಅಕ್ಷರಗಳ ಮಿತಿಯನ್ನು ಬುಧವಾರ ದುಪ್ಪಟ್ಟುಗೊಳಿಸಿದೆ. ಈ ಮೊದಲು ಎಲ್ಲ ಬಳಕೆದಾರರಿಗೆ 140 ಅಕ್ಷರಗಳ ಮಿತಿಯನ್ನು ಟ್ವಿಟರ್ ಒದಗಿಸಿತ್ತು. ಆದರೆ 140ಕ್ಕಿಂತ ಹೆಚ್ಚಿನ ಅಕ್ಷರಗಳ ಬಳಕೆಗೆ ಅವಕಾಶ ಒದಗಿಸಬೇಕು ಎಂದು ಹಲವು ಬಳಕೆದಾರರು ಟ್ವಿಟರ್ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್​ನಲ್ಲಿ ಟ್ವಿಟರ್ ಪ್ರಾಯೋಗಿಕವಾಗಿ ಕೆಲ ಬಳಕೆದಾರರಿಗೆ 280 ಅಕ್ಷರಗಳ ಟ್ವೀಟ್ ಮಾಡಲು ಅವಕಾಶ ಕಲ್ಪಿಸಿತ್ತು.

ಟ್ವೀಟ್​ನ ಅಕ್ಷರಗಳ ಮಿತಿ ಏರಿಕೆಗೆ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಎಲ್ಲ ಬಳಕೆದಾರರಿಗೆ ಈಗಿರುವ ಟ್ವೀಟ್​ನ ಅಕ್ಷರಗಳ ಮಿತಿಯನ್ನು 140ರಿಂದ 280ಕ್ಕೆ ಏರಿಕೆ ಮಾಡಿದೆ. ಆದರೆ ಜಪಾನ್, ಕೊರಿಯಾ ಮತ್ತು ಚೀನಿ ಭಾಷಿಗರಿಗೆ ಮಾತ್ರ ಈ ಹಿಂದಿನ 140 ಅಕ್ಷರಗಳ ಮಿತಿ ಮುಂದುವರಿಯಲಿದೆ.


ಭಾರತ ಮನವಿ ಮಾಡಿದರೆ ಜಾಕೀರ್ ಹಸ್ತಾಂತರ

ಕೌಲಾಲಂಪುರ: ಭಾರತ ಸರ್ಕಾರ ಮನವಿ ಮಾಡಿದರೆ ವಿವಾದಾತ್ಮಕ ಇಸ್ಲಾಂ ಧರ್ಮಗುರು ಜಾಕೀರ್ ನಾಯ್್ಕನ್ನು ಹಸ್ತಾಂತರಿಸಲಾಗುವುದು ಎಂದು ಮಲೇಷ್ಯಾ ಉಪ ಪ್ರಧಾನ ಮಂತ್ರಿ ಅಹ್ಮದ್ ಜಹಿದ್ ಹಮಿದಿ ಬುಧವಾರ ಹೇಳಿದ್ದಾರೆ.

ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಹಮಿದಿ, ಕಾನೂನು ನೆಲೆಗಟ್ಟಿನಲ್ಲಿ ಜಾಕೀರ್​ನನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿದರೆ ಆತನನ್ನು ಭಾರತದ ವಶಕ್ಕೆ ಒಪ್ಪಿಸಲಾಗುವುದು. ಆದರೆ ಇದುವರೆಗೆ ನೆರೆಯ ರಾಷ್ಟ್ರದಿಂದ ಅಂಥ ಮನವಿ ಬಂದಿಲ್ಲ ಎಂದಿದ್ದಾರೆ. ಅಲ್ಲದೆ ಮಲೇಷ್ಯಾ ಪೌರತ್ವಕ್ಕೆ ಜಾಕೀರ್ ಮನವಿ ಸಲ್ಲಿಸಿದ್ದಾನೆ ಎಂಬುದನ್ನು ಗೃಹ ಸಚಿವರೂ ಆದ ಹಮಿದಿ ಅಲ್ಲಗಳೆದಿದ್ದಾರೆ.

ಗಲಭೆಗೆ ಕುಮ್ಮಕ್ಕು ನೀಡದೆ, ನೆಲೆದ ಕಾನೂನಿಗೆ ತಕ್ಕಂತೆ ನಡೆದುಕೊಳ್ಳುವವರೆಗೆ ಮಲೇಷ್ಯಾದಲ್ಲಿ ನೆಲೆಸಲು ಜಾಕೀರ್​ಗೆ ಅನುಮತಿ ನೀಡಲಾಗುವುದು. ಜಾಕೀರ್ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಆತನ ಭಾಷಣಗಳನ್ನು ಗೃಹ ಇಲಾಖೆ ವಿಶ್ಲೇಷಿಸಿದ್ದು, ಅದರಲ್ಲಿ ಯಾವುದೇ ತೆರನಾದ ಪ್ರಚೋದನಾತ್ಮಕ ಅಂಶಗಳಿಲ್ಲ ಎಂದು ಹಮಿದಿ ಹೇಳಿದ್ದಾರೆ.

ಜಾಕೀರ್ ಮೇಲೆ ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪವಿದ್ದು, ಆತನ ವಿರುದ್ಧ ಕಳೆದ ವಾರ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಕೋರ್ಟ್​ಗೆ ಆರೋಪ ಪಟ್ಟಿ ಸಲ್ಲಿಸಿದೆ. 52 ವರ್ಷದ ಜಾಕೀರ್ ವಿರುದ್ಧ ಅಕ್ರಮ ಚಟುವಟಿಕೆ ಹಾಗೂ ಜಾಗತಿಕ ಉಗ್ರ ಸಂಘಟನೆ ಐಸಿಸ್ ಸೇರುವಂತೆ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಜಾಕೀರ್ ಬಂಧನಕ್ಕೆ ಸಂಬಂಧಿಸಿದಂತೆ ರೆಡ್ ಕಾರ್ನರ್ ನೋಟಿಸ್ ಹೊರಡಿಸುವಂತೆ ಇಂಟರ್​ಪೋಲ್​ಗೆ ಪತ್ರ ಮುಖೇನ ಎನ್​ಐಎ ಮನವಿ ಮಾಡಿತ್ತು ಎಂದು ಈ ಹಿಂದೆ ವರದಿಯಾಗಿತ್ತು.

Leave a Reply

Your email address will not be published. Required fields are marked *

Back To Top