More

  ವಿಜಯಾ ಬ್ಯಾಂಕ್ ಸ್ಥಳಾಂತರಕ್ಕೆ ವಿರೋಧ

  ಶಿರಸಿ: ಶಿರಸಿಯ ಹೃದಯ ಭಾಗದ ದೇವಿಕೆರೆಯಲ್ಲಿನ ವಿಜಯಾ ಬ್ಯಾಂಕ್ ಪ್ರಧಾನ ಶಾಖೆ ಸ್ಥಳಾಂತರಕ್ಕೆ ಗ್ರಾಹಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

  ಸರ್ಕಾರದ ಆದೇಶದಂತೆ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲಿನವಾಗಿರುವ ವಿಜಯಾ ಬ್ಯಾಂಕ್ ಶಾಖೆಯನ್ನು ಶಿರಸಿಯ ಹೊಸಪೇಟೆ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾ ಕಚೇರಿಗೆ ಮೂರು ತಿಂಗಳೊಳಗೆ ವರ್ಗಾವಣೆ ಮಾಡುವಂತೆ ಮೇಲಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಹೀಗಾಗಿ ಕಳೆದ 4 ದಶಕಗಳಿಂದ ಗ್ರಾಹಕ ಸ್ನೇಹಿ ವಾತಾವರಣ ಹೊಂದಿರುವ ಶಿರಸಿ ಶಾಖೆಯನ್ನು ಬೇರೆಡೆಗೆ ಸ್ಥಳಾಂತರ ಮಾಡದಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

  ಸಮರ್ಪಕವಾದ ರ್ಪಾಂಗ್ ವ್ಯವಸ್ಥೆ ಇಲ್ಲದ, ಗ್ರಾಹಕರಿಗೆ ಅನುಕೂಲವಾಗುವಷ್ಟು ಸ್ಥಳಾವಕಾಶ ಇಲ್ಲದ ಕಚೇರಿಗೆ ವಿಜಯಾ ಬ್ಯಾಂಕ್ ಕಚೇರಿ ವರ್ಗಾವಣೆ ಮಾಡುವ ಬದಲು ಬ್ಯಾಂಕ್ ಆಫ್ ಬರೋಡಾ ಶಾಖೆಯನ್ನೆ ದೇವಿಕೆರೆ ವಿಜಯಾ ಬ್ಯಾಂಕ್​ಗೆ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

  ವ್ಯವಹಾರ ಸ್ಥಗಿತದ ಮನವಿ: ನಗರದ ಚನ್ನಪಟ್ಟಣ ಬಜಾರ್, ನಟರಾಜ ರಸ್ತೆ, ದೇವಿಕೆರೆಯ ಪ್ರಮುಖ ವ್ಯಾಪಾರಸ್ಥರು, 300ಕ್ಕೂ ಅಧಿಕ ಅಡಕೆ ಟ್ರೇಡರ್ಸ್ ಮಾಲೀಕರು ಹಾಗೂ ಸುಮಾರು 10 ಸಾವಿರಕ್ಕೂ ಅಧಿಕ ಉದ್ಯಮಿಗಳು, ರೈತರು ದೇವಿಕರೆ ವಿಜಯಾ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿದ್ದು, ಬ್ಯಾಂಕ್ ಸ್ಥಳಾಂತರವಾದರೆ ವ್ಯವಹಾರ ಸ್ಥಗಿತಗೊಳಿಸುವುದಾಗಿ ಗ್ರಾಹಕರು ಶಾಖಾ ವ್ಯವಸ್ಥಾಪಕರಿಗೆ ಮನವಿ ನೀಡಿದ್ದಾರೆ.

  ಗ್ರಾಹಕರ ಮನವಿಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಂದನೆ ನೀಡದಿದ್ದರೆ ಬೇರೆ ಬ್ಯಾಂಕ್​ಗೆ ಖಾತೆಗಳನ್ನು ವರ್ಗಾವಣೆ ಮಾಡುತ್ತೇವೆಯೆ ಹೊರತು ಹೊಸಪೇಟೆ ರಸ್ತೆಯ ಬ್ಯಾಂಕ್ ಬರೋಡಾ ಶಾಖೆಗೆ ವ್ಯವಹಾರಕ್ಕೆ ಆಗಮಿಸುವದಿಲ್ಲ. ವಿಜಯಾ ಬ್ಯಾಂಕ್ ಶಾಖೆ ಸ್ಥಳಾಂತರ ಪ್ರಕ್ರಿಯೆ ಮುಂದುವರಿದರೆ ಗ್ರಾಹಕರೆಲ್ಲರೂ ಒಂದಾಗಿ ಪ್ರತಿಭಟನೆ ನಡೆಸುತ್ತೇವೆ. | ಎಂ.ಎಸ್. ಹೆಗಡೆ ಗ್ರಾಹಕ

  1973ರಲ್ಲಿ ಶಿರಸಿಯ ಚನ್ನಪಟ್ಟಣ ಬಜಾರ್​ನಲ್ಲಿ ಆರಂಭಗೊಂಡ ವಿಜಯಾ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿದಂತೆ ದೇವಿಕೆರೆಯಲ್ಲಿನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಯಿತು. ಆ ನಂತರ 20 ವರ್ಷಗಳಿಂದ ದೇವಿಕೆರೆ ಕಟ್ಟಡದಲ್ಲಿ ಸೇವೆ ನೀಡಲಾಗುತ್ತಿದ್ದು, ಇದೀಗ ಶಾಖೆಯನ್ನು ಹೊಸಪೇಟೆ ರಸ್ತೆಯ ಬ್ಯಾಂಕ್ ಆಫ್ ಬರೋಡಾಗೆ ವರ್ಗಾಯಿಸಲಾಗುತ್ತಿದೆ. ಮೇಲಾಧಿಕಾರಿಗಳ ಆದೇಶ ಪಾಲನೆಯಷ್ಟೇ ನಮ್ಮ ಜವಾಬ್ದಾರಿ. | ನಾಗವೇಣಿ ನಾಯ್ಕ ಶಾಖಾ ವ್ಯವಸ್ಥಾಪಕಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts