Tuesday, 11th December 2018  

Vijayavani

Breaking News

ವಿಜಯವಾಣಿಯ 7 ಪತ್ರಕರ್ತರಿಗೆ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ

Sunday, 14.01.2018, 3:04 AM       No Comments

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2017-18ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ವಿಜಯವಾಣಿ’ಯ 7 ಪತ್ರಕರ್ತರು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ವಿಜಯವಾಣಿ ಸಹಾಯಕ ಸಂಪಾದಕ ರುದ್ರಣ್ಣ ಹರ್ತಿಕೋಟೆ -ಕೆ.ಎನ್. ಸುಬ್ರಮಣ್ಯ ಪ್ರಶಸ್ತಿ, ಮುಖ್ಯ ವರದಿಗಾರ ಕೀರ್ತಿನಾರಾಯಣ ಸಿ. -ಗಿರಿಧರ್, ವರದಿಗಾರ ಗಿರೀಶ್ ಗರಗ-ಬೆಂಗಳೂರು ನಿರ್ವತೃ ಕೇಂಪೇಗೌಡ ಸ್ಮಾರಕ, ಕ್ರೀಡಾ ವರದಿಗಾರ ಡಿ.ಪಿ. ರಘುನಾಥ್ -ಕೆ.ಎ. ನೆಟ್ಟಕಲ್ಲಪ್ಪ, ಹಿರಿಯ ವರದಿಗಾರ ಬಾಬುರಾವ್ ಯಡ್ರಾಮಿ -ಮಂಡಿಬೆಲೆ ಶಾಮಣ್ಣ ಸ್ಮಾರಕ, ಛಾಯಾಗ್ರಾಹಕ ದೀಪಕ್ ಸಾಗರ್ – ಮಂಡಿಬೆಲೆ ರಾಮಣ್ಣ, ವರದಿಗಾರ ಸತ್ಯಲೋಕೇಶ್ -ಜಿ. ನಾರಾಯಣಸ್ವಾಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜ.20ಕ್ಕೆ ಪ್ರಶಸ್ತಿ ಪ್ರದಾನ: ವೃತ್ತಿನಿರತ ಪತ್ರಕರ್ತರ ಪ್ರತಿಭೆ, ಶ್ರಮ ಮತ್ತು ಬದ್ಧತೆಯನ್ನು ಗುರುತಿಸಿ ಉತ್ತೇಜಿಸುವ ಮತ್ತು ಆ ಮೂಲಕ ಗುಣಾತ್ಮಕ ಬೆಳವಣಿಗೆಗೆ ಒತ್ತು ನೀಡುವಲ್ಲಿ ಸಂಘವು ಪ್ರತಿ ವರ್ಷ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಕೊಡ ಮಾಡುತ್ತಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನವು ಜ.20 ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಸಂಘದ ಅಧ್ಯಕ್ಷ ಎನ್. ರಾಜು ತಿಳಿಸಿದ್ದಾರೆ.

ಪ್ರಶಸ್ತಿ ಪುರಸ್ಕೃತರ ವಿವರ: ಡಿ.ವಿ.ಜಿ. ಪ್ರಶಸ್ತಿ- ಮಹಾದೇವ ಪ್ರಕಾಶ್. ಗರುಡನಗಿರಿ ನಾಗರಾಜ್ – ಗುಡಿಹಳ್ಳಿ ನಾಗರಾಜ್, ಬೆಂಗಳೂರು. ಎಸ್. ವಿ. ಜಯಶೀಲರಾವ್- ವೀರಭದ್ರೇಗೌಡ, ಬಳ್ಳಾರಿ. ಡಾ.ಎಂ.ಎಂ.ಕಲಬುರ್ಗಿ -ಡಾ.ಸರ್ಜುಕಾಟ್ಕರ್, ಬೆಳಗಾವಿ. ಪಾಟೀಲ್ ಪುಟ್ಟಪ್ಪ-ಬಸವರಾಜ ಸ್ವಾಮಿ, ರಾಯಚೂರು. ಎಂ.ನಾಗೇಂದ್ರ ರಾವ್- ದೇಶಾದ್ರಿ ಹೊಸಮನಿ, ಶಿವಮೊಗ್ಗ. ಎಚ್.ಎಸ್. ರಂಗಸ್ವಾಮಿ-ಆರ್.ಟಿ ವಿಠಲಮೂರ್ತಿ. ಮಿಂಚು ಶ್ರೀನಿವಾಸ ಪ್ರಶಸ್ತಿ- ವೈ.ಗ.ಜಗದೀಶ್, ಬೆಂಗಳೂರು.

ಸಂಘದ ದತ್ತಿನಿಧಿ ಪ್ರಶಸ್ತಿಗಳು: ಪಿ.ಆರ್. ರಾಮಯ್ಯ ಸ್ಮಾರಕ- ಡಾ. ಕೆ. ಉಮೇಶ್ವರ, ಬೆಂಗಳೂರು. ಶ್ರೀಮತಿ ಯಶೋದಮ್ಮ ಜಿ. ನಾರಾಯಣ – ಎಂ.ಎಚ್. ನೀಳಾ, ಬೆಂಗಳೂರು. ಡಿ.ವಿ.ಜಿ. – ಜೆ.ಆರ್. ಕೆಂಚೇಗೌಡ, ಹಾಸನ. ಬದರಿನಾಥ ಹೊಂಬಾಳೆ – ಬಿ.ಆರ್. ಉದಯ ಕುಮಾರ್, ಹಾಸನ. ಕಿಡಿಶೇಷಪ್ಪ – ಬಸವೇಗೌಡ, ಮಂಡ್ಯ. ಅಪ್ಪಾಜಿಗೌಡ ಸ್ಮಾರಕ – ಶರಣು ಹೊನ್ನೂರು. ಆರ್. ಶಾಮಣ್ಣ. ಮಾ. ರಾಮಮೂರ್ತಿ ಸ್ಮಾರಕ – ರಾಜುವಿಜಾಪುರ, ಹುಬ್ಬಳ್ಳಿ. ಎಚ್. ಎಸ್. ದೊರೆಸ್ವಾಮಿ- ಅನಂತನಾಡಿಗ್, ತರೀಕೆರೆ.

ಅತ್ಯುತ್ತಮ ವರದಿಗಳಿಗೆ ನೀಡುವ ಪ್ರಶಸ್ತಿ: ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ)- ಕಾಯಪಂಡ ಶಶಿಸೋಮಯ್ಯ, ಕೊಡಗು. ಸತ್ಯಲೋಕೇಶ್, ಪಾವಗಡ. ಪಟೇಲ್ ಬೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ)- ಮಾಯಾ ಶರ್ಮ, ಗುರುಮೂರ್ತಿ ಕೊಟ್ಟಿಗೆಮನೆ. ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ) ಕೀರ್ತಿ ನಾರಾಯಣ ಸಿ., ಗಿರೀಶ್ ಕೋಟೆ. ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ) ಧ್ಯಾನ್​ಪೂಣಚ್ಚ, ಎ.ಎಲ್.ನಾಗೇಶ್. ಕೆ.ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ) ಡಿ.ಪಿ. ರಘುನಾಥ್, ಬಿ.ಆರ್. ವಿಶ್ವನಾಥ್. ಖಾದ್ರಿ ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ವಿಮರ್ಶಾತ್ಮಕ ಲೇಖನ) ಕೆಂಚೇಗೌಡ, ರವಿ ಪ್ರಕಾಶ್. ಮಂಡಿಬೆಲೆ ರಾಜಣ್ಣ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರ)ಎಂ.ಎಸ್.ಬಸವಣ್ಣ, ದೀಪಕ್ ಸಾಗರ್. ಆರ್. ಎಲ್. ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನ) ಶಿವಮೂರ್ತಿ ಜುಪ್ತಿಮಠ, ರವಿಚಂದ್ರ ಮಲ್ಲೇದ. ಆರ್. ಎಲ್.

ವಾಸುದೇವರಾವ್ ಪ್ರಶಸ್ತಿ -(ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನ) ರಶ್ಮೀ ಭಟ್, ವಿಶ್ವ ಕುಂದಾಪುರ. ಬಿ. ಜಿ. ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತು) ಹೇಮಾ ವೆಂಕಟ್, ವಿಕಾರ್ ಅಹ್ಮದ್ ಸೈಯದ್. ಮಂಗಳಾ ಎಂ.ಸಿ. ವರ್ಗೀಸ್ ಪ್ರಶಸ್ತಿ- ಶಾಂತಲಾ ಧರ್ಮರಾಜು, ಬೆನಕನಹಳ್ಳಿ ಶೇಖರಗೌಡ. ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನ ಕುರಿತ ಅತ್ಯುತ್ತಮ ವರದಿ) ಬಸವರಾಜ್ ಹವಲ್ದಾರ್, ಬಾಬುರಾವ್ ಯಡ್ರಾಮಿ. ಬೆಂಗಳೂರು ನಿರ್ವತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ

(ಬೆಂಗಳೂರು ಜಿಲ್ಲೆ ಅಭಿವೃದ್ಧಿ ಕುರಿತು) ಗಿರೀಶ್ ಗರಗ, ನಾಗರತ್ನ. ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ) ಕೀರ್ತನಾ, ಕೀರ್ತಿ ಪ್ರಸಾದ್.

ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷರಾಯರ ಸ್ಮಾರಕ ಪ್ರಶಸ್ತಿ: ನಾಮದೇವ ಕಾಗದಗಾರ್, ಶಿವರಾಮ್ ವಿದ್ಯುನ್ಮಾನ ಮಾಧ್ಯಮದ ಕ್ರಿಯಾಶೀಲ ಪತ್ರಕರ್ತರಿಗೆ ನೀಡುವ ಪ್ರಶಸ್ತಿ- ಸಿ.ಎಸ್.ಬೋಪಯ್ಯ, ಎಂ.ಆರ್.ರಮೇಶ್. ಡಿ.ವಿ.ಜಿ. ಸಂಘಟನಾ ಪ್ರಶಸ್ತಿ: ಹಾಸನದ ರವಿನಾಕಲಗೂಡು, ಅತೀಕ್​ಕುರ್ ರೆಹಮಾನ್, ಎಂ.ಎ.ವೆಂಕಟೇಶ್, ಎಸ್.ಆರ್.ಪ್ರಸನ್ನಕುಮಾರ್, ಕೆ.ಎಚ್.ವೇಣುಕುಮಾರ್, ಮಾ. ಶಿವಮೂರ್ತಿ ಬೇಲೂರು, ಎಸ್.ಎನ್. ಅಶೋಕ್ ಕುಮಾರ್, ಶ್ರವಣಬೆಳಗೊಳ.

ಅಭಿನಂದನೆ

ವಿಜಯವಾಣಿಯ ಏಳು ಪತ್ರಕರ್ತರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಶಸ್ತಿಗಳು ಲಭಿಸಿರುವುದಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಮತ್ತು ಎಂಡಿ ಆನಂದ ಸಂಕೇಶ್ವರ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

Back To Top