ಸಿನಿಮಾ

ವಿಚಾರಣೆ ನಡೆಸಿ ವರದಿ ಸಲ್ಲಿಸಲು ಡಿಸಿ ಆದೇಶ

ದಾವಣಗೆರೆ : ನಗರದ ದೇವರಾಜ ಅರಸು ಬಡಾವಣೆಯ ಈಜುಕೊಳದಲ್ಲಿ ಇತ್ತೀಚೆಗೆ ಇಬ್ಬರು ಬಾಲಕರು ಮೃತಪಟ್ಟ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಉಪ ವಿಭಾಗಾಧಿಕಾರಿಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚನೆ ನೀಡಿದ್ದಾರೆ.
 ಬಾಲಕರಾದ ತಾಜುದ್ದೀನ್ ಮತ್ತು ಮುಬಾರಕ್ ಎಂಬುವರು ಮೇ 19ರಂದು ಈಜಲು ಹೋಗಿದ್ದಾಗ ಈಜುಕೊಳದಲ್ಲಿ ಮುಳುಗಿ ಮೃತಪಟ್ಟಿದ್ದರು. ಈಜುಕೊಳದ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆಯ ನಿರ್ಲಕ್ಷೃದಿಂದ ಈ ದುರಂತ ಸಂಭವಿಸಿದೆ ಎಂದು ಆರೋಪಿಸಿ, ನಿಸಾರ್ ಅಹಮದ್ ಮತ್ತು ಮುಕ್ತಿಯಾರ್ (ಪಾಲಕರು) ಅವರು ಮನವಿ ಸಲ್ಲಿಸಿದ್ದರು.
 ಈಜುಕೊಳದಲ್ಲಿ ನಿಯಮಾನುಸಾರ ಕಡ್ಡಾಯವಾಗಿ ತೆಗೆದುಕೊಳ್ಳಬೇಕಾದ ಯಾವುದೇ ಮುನ್ನೆಚ್ಚರಿಕೆ, ರಕ್ಷಣಾ ವ್ಯವಸ್ಥೆ ಇಲ್ಲದಿರುವುದು ಹಾಗೂ ತರಬೇತಿದಾರರನ್ನು ನಿಯೋಜಿಸದೆ ಅಸಡ್ಡೆ ಹಾಗೂ ನಿರ್ಲಕ್ಷೃತೆಯನ್ನು ತೋರಿ ಇಬ್ಬರು ಬಾಲಕರ ಸಾವಿಗೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಪಾಲಕರು ಕೋರಿದ್ದರು. ಈ ಹಿನ್ನೆಲೆಯಲ್ಲಿ ಡಿಸಿ ಆದೇಶ ಹೊರಬಿದ್ದಿದೆ.
 …

Latest Posts

ಲೈಫ್‌ಸ್ಟೈಲ್