More

  ವಿಐಎಸ್​ಎಲ್ ಉತ್ಸವಕ್ಕೆ ಚಾಲನೆ

  ಭದ್ರಾವತಿ: ನ್ಯೂಟೌನ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಿಂದ ಹಮ್ಮಿಕೊಂಡಿರುವ ‘ವಿಐಎಸ್​ಎಲ್ ಉತ್ಸವ’ಕ್ಕೆ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್.ಎಸ್ ರಾವ್ ಚಾಲನೆ ನೀಡಿದರು.

  ನಂತರ ವಿವಿಧ ವಿಭಾಗದ ಅಧಿಕಾರಿಗಳೊಂದಿಗೆ ತೆರಳಿ ಕ್ರೀಡಾಂಗಣದಲ್ಲಿ ನಿರ್ವಿುಸಿದ್ದ ಸೈಲ್ ಸ್ಟಾಲ್ ವಸ್ತು ಪ್ರದರ್ಶನ ಮಳಿಗೆಗೆ ಭೇಟಿ ನೀಡಿ ವಿಐಎಸ್​ಎಲ್ ಕಾರ್ಖಾನೆ ಗೆ ಸಂಬಂಧಿಸಿ ವಿವಿಧ ವಿಭಾಗದ ಯಂತ್ರೋಪರಣಗಳು ಹಾಗೂ ಕಾರ್ಖಾನೆ ನಡೆದು ಬಂದ ಹಾದಿ ಕುರಿತಾದ ವಿಡಿಯೋ ಚಿತ್ರೀಕರಣ ಪ್ರದರ್ಶನ ವೀಕ್ಷಿಸಿದರು.

  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ತಾಲೂಕಿನ ಪ್ರತಿಭೆಗಳ ಅನಾವರಣ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಯಿತು. ನಂತರ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ಸರ್ ಎಂ.ವಿ. ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ದಿನವಾದ ಬುಧವಾರ ಕಿರಣ್ ಡ್ಯಾನ್ಸ್ ತಂಡ ಮನೋರಂಜನೆ ನೀಡಿತು.

  ಉತ್ಸವ 31 ದಿನಗಳ ಕಾಲ ನಡೆಯಲಿದ್ದು ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಾಲಾ ಮಕ್ಕಳು, ಯುವ ಪ್ರತಿಭೆಗಳಿಗೆ, ವಿವಿಧ ಕಲಾ ತಂಡಗಳಿಗೆ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ವಿವಿಧ ಭಾಷಿಕರಿಗೆ ತಮ್ಮ ಸಂಸ್ಕೃತಿ, ಆಹಾರ ಪದಾರ್ಥಗಳ ತಯಾರಿಕೆಗೂ ಈ ಬಾರಿ ಅವಕಾಶ ಕಲ್ಪಿಸಿಕೊಡಲಾಗಿದೆ.

  ಕಾರ್ಖಾನೆಯ ಸ್ಥಾವರ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ವೆಂಕಟೇಶ್, ನಿರ್ವಹಣೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಸುರಜಿತ್ ಮಿಶ್ರಾ, ನಗರಾಡಳಿತಾಧಿಕಾರಿ ವಿಶ್ವನಾಥ್, ಅಧಿಕಾರಿಗಳಾದ ರವಿಚಂದ್ರನ್, ಶೋಭಾ, ಅಧಿಕಾರಿಗಳ ಸಂಘದ ಅಧ್ಯಕ್ಷ ಎ.ಆರ್.ವೀರಣ್ಣ, ಕಾರ್ವಿುಕ ಸಂಘದ ಅಧ್ಯಕ್ಷ ಜೆ.ಜಗದೀಶ್, ಬಸಂತ್​ಕುಮಾರ್, ಅಮೃತ್​ಕುಮಾರ್, ಮೋಹನ್, ಉತ್ಸವ ಸಮಿತಿ ಸಂಯೋಜಕ ಎಲ್.ಪ್ರವೀಣ್​ಕುಮಾರ್ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts