ವಿಂಡೀಸ್​ಗೆ ರೋಚಕ ಜಯ

ಗಯಾನ: ಅಂತಿಮ ಕ್ಷಣದವರೆಗೂ ಗೆಲುವಿಗಾಗಿ ಹೋರಾಡಿದರೂ ಬಾಂಗ್ಲಾದೇಶ ತಂಡ 2ನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3 ರನ್​ಗಳಿಂದ ವೀರೋಚಿತ ಸೋಲು ಕಂಡಿತು. ಅಂತಿಮ ಓವರ್​ನಲ್ಲಿ ಜಯ ದಾಖಲಿಸಲು 8 ರನ್ ಅವಶ್ಯಕತೆಯಿದ್ದರೂ ಮುಶ್ಪಿಕರ್ ರಹೀಂ (68 ರನ್, 67 ಎಸೆತ, 5 ಬೌಂಡರಿ, 1 ಸಿಕ್ಸರ್) ಮೊದಲ ಎಸೆತದಲ್ಲೇ ಔಟಾದ ಪರಿಣಾಮ ಬಾಂಗ್ಲಾ ತಂಡ ಸೋಲಿನ ಸುಳಿಗೆ ಸಿಲುಕಿತು. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ ಜಯ ದಾಖಲಿಸುವ ಅವಕಾಶದಿಂದ ವಂಚಿತವಾಯಿತು. ಉಭಯ ತಂಡಗಳು ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ವೆಸ್ಟ್ ಇಂಡೀಸ್, ಶಿಮ್ರೊನ್ ಹಿಟ್ಮೆಯರ್ (125 ರನ್, 93 ಎಸೆತ, 3 ಬೌಂಡರಿ, 7 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡುವೆಯೂ 49.3 ಓವರ್​ಗಳಲ್ಲಿ 271 ರನ್​ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ ಸಂಘಟಿತ ಹೋರಾಟದ ನಡುವೆಯೂ 50 ಓವರ್​ಗಳಲ್ಲಿ 6 ವಿಕೆಟ್​ಗೆ 268 ರನ್​ಗಳಿಸಿದೆ. 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಶನಿವಾರ ನಡೆಯಲಿದೆ.

ವೆಸ್ಟ್ ಇಂಡೀಸ್: 49.3 ಓವರ್​ಗಳಲ್ಲಿ 271 (ಹಿಟ್ಮೆಯರ್ 125, ರೊವ್​ವುನ್ ಪಾವೆಲ್ 44, ರುಬೆಲ್ ಹುಸೇನ್ 61ಕ್ಕೆ 3, ಶಕೀಬ್ ಅಲ್ ಹಸನ್ 45ಕ್ಕೆ 2), ಬಾಂಗ್ಲಾದೇಶ: 50 ಓವರ್​ಗಲ್ಲಿ 6 ವಿಕೆಟ್​ಗೆ 268 (ತಮಿಮ್ ಇಕ್ಬಾಲ್ 54, ಶಕೀಬ್ ಅಲ್ ಹಸನ್ 56, ಮುಶ್ಪಿಕರ್ ರಹೀಂ 68, ಜೇಸನ್ ಹೋಲ್ಡರ್ 66ಕ್ಕೆ 1, ಬಿಶೂ 39ಕ್ಕೆ 1).