More

  ವಾಹನ ಸವಾರರ ಜೇಬಿಗೆ ರಾಜ್ಯ ಸರ್ಕಾರ ಕತ್ತರಿ

  ನವಲಗುಂದ: ರಾಜ್ಯ ಸರ್ಕಾರ ತೈಲ ದರ ಹೆಚ್ಚಿಸಿರುವುದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಗುರುವಾರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

  ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಗಾಗಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬರೆ ಎಳೆದಿದೆ. ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದೆ. ಸರ್ಕಾರಕ್ಕೆ ಜನಸಾಮಾನ್ಯರ ಶಾಪ ತಟ್ಟಲಿದೆ ಎಂದರು.

  ಬಿಜೆಪಿ ತಾಲೂಕು ಅಧ್ಯಕ್ಷ ಎಸ್.ಬಿ. ದಾನಪ್ಪಗೌಡ್ರ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿಯನ್ನು ದಿವಾಳಿ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

  ಸಿದ್ದನಗೌಡ ಪಾಟೀಲ, ಅಣ್ಣಪ್ಪಬಾಗಿ, ಶಣ್ಮುಖ ಗುರಿಕಾರ, ಆನಂದ ಜಕ್ಕನಗೌಡ್ರು, ಮುತ್ತಣ್ಣ ಮನವಿ, ಶರಣಪ್ಪ ಹಕ್ಕರ್ಕಿ, ಬಸವರಾಜ ಕಟ್ಟಿಮನಿ, ಬಸವರಾಜ ಕಾತರಕಿ, ಜಯಪ್ರಕಾಶ ಬದಾಮಿ, ಅರುಣ ಮೆಣಸಿನಕಾಯಿ, ದೇವರಾಜ ದಾಡಿಬಾಯಿ, ನಿಂಗಪ್ಪ ಬಾರಕೇರ, ಶಂಕರಗೌಡ್ರ ಮುದಿಗೌಡ್ರ, ನಿಂಗಪ್ಪ ಬಾರಕೇರ, ವಿನಯ ಹಿರೇಮಠ, ಕೃಷ್ಣಾ ಭೋವಿ, ಮಲ್ಲಯ್ಯ ಸುಬೇಧರಮಠ ಇತರರಿದ್ದರು.

  See also  ವನ್ಯಜೀವಿಗಳಿಗೆ ಟ್ಯಾಂಕರ್ ನೀರೇ ಗತಿ !

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts