ಕಲಘಟಗಿ: ಕಲಘಟಗಿ ಪಟ್ಟಣದಲ್ಲಿ ಚತುಷ್ಪತ ರಸ್ತೆ ಕಾಮಗಾರಿ ವಿಳಂಬವಾಗಿದ್ದರಿಂದ ಹá-ಬ್ಬಳ್ಳಿ ಅಂಕೋಲಾ ರಸ್ತೆಯಲ್ಲಿ ನಾಲ್ಕೈದು ಕಿಲೋ ಮೀಟರ್ವರೆಗೆ ವಾಹನಗಳು ನಿಲ್ಲುವಂತಾಗಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ವಾಹನಗಳ ಸಂಚಾರ ನಿಯಂತ್ರಿಸುವಲ್ಲಿ ಸ್ಥಳೀಯ ಪೊಲೀ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬá-ದು ಸಾರ್ವಜನಿಕರ ಆರೋಪವಾಗಿದೆ.
ಪಟ್ಟಣದಲ್ಲಿ ರಸ್ತೆ ಕಾಮಗಾರಿ ಕಳೆದ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳದ್ದರಿಂದ ಜನರು ರೋಸಿ ಹೋಗಿದ್ದಾರೆ. ಅಲ್ಲದೆ, ಈಗ ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧಿ ಪಡೆದ ಕಲಘಟಗಿಯ ಗ್ರಾಮ ದೇವತೆಯರ ಜಾತ್ರೆ ಸಮೀಪಿಸಿದೆ. ಆದರೂ ಒಂದೆಡೆ ಸಂಬಂಧಿಸಿದವರು ರಸ್ತೆ ಕಾಮಗಾರಿ ಪೂರ್ಣಗೊಳಿಸá-ತ್ತಿಲ್ಲ. ಇನ್ನೊಂದೆಡೆ ಪೊಲೀಸರು ಸಂಚಾರ ವ್ಯವಸ್ಥೆ ಸುಗಮವಾಗಿರá-ವಂತೆ ನೋಡಿಕೊಳ್ಳುತ್ತಿಲ್ಲ. ಸೋಮವಾರ ಮಧ್ಯಾಹ್ನ 4ಗಂಟೆಗೆ ಪಟ್ಣಣದ ಎಪಿಎಂಸಿ ಹಾಗೂ ಬಮ್ಮಿಗಟ್ಟಿ ಕ್ರಾಸ್ನಲ್ಲಿ ಸಮರ್ಪಕ ಸಂಚಾರ ಪೊಲೀಸ್ ವ್ಯವಸ್ಥೆ ಇಲ್ಲದ್ದರಿಂದ 4 ಕಿ.ಮೀ ನಷ್ಟು ಉದ್ದಗಲಕ್ಕೂ ವಾಹನಗಳ ದಟ್ಟಣೆ ಆಗಿತ್ತು. ಪಟ್ಟಣದ ಹಳಿಯಾಳ ಕ್ರಾಸ್ನಿಂದ ಹೊರವಲಯದ ತಡಸ್ಕ್ರಾಸ್ವರೆಗೂ 1 ತಾಸು ವಾಹನ ಸಂಚಾರ ಸ್ಥಗಿತವಾಗಿತ್ತು. ಇದಿಂದ ಸಾರ್ವಜನಿಕರು ಉರಿ ಬಿಸಿಲಿನಲ್ಲಿ ತೊಂದರೆ ಅನುಭವಿಸುವಂತಾಯಿತು.
ಬಮ್ಮಿಗಟ್ಟಿ ಕ್ರಾಸ್ ಬಳಿ ಪೊಲೀಸ್ ಸಿಬ್ಬಂದಿ ಮಧ್ಯಾಹ್ನ ಕೆಲ ಹೊತ್ತು ಕಾಣಿಸಲಿಲ್ಲ. ಇದರಿಂದ ವಾಹನ ಸಂಚಾರ ದಟ್ಟಣೆಯಾಗಿತ್ತು.ವಾಹನಗಳು ಸಾಲá-ಗಟ್ಟಿ ನಿಂತವು. ಕೆಲ ಹೊತ್ತಿನ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸಂಚಾರ ಸಮಸ್ಯೆ ಬಗೆಹರಿಸಿದರು ಎಂದು ಲಾರಿ ಚಾಲಕ ನೀಲಪ್ಪ ರಜಪೂತ ತಿಳಿಸಿದರು.
ಬಮ್ಮಿಗಟ್ಟಿ ಕ್ರಾಸ್ನಿಂದ ಮುಂಡಗೋಡ, ಹುಬ್ಬಳ್ಳಿ, ಕಾರವಾರ ಮತ್ತು ಪಟ್ಟಣದ ಮಾರುಕಟ್ಟೆಗೆ ತೆರಳಲು ನಾಲ್ಕು ಮಾರ್ಗಗಳಿದ್ದು, ಎಪಿಎಂಸಿ ಕ್ರಾಸ್ನಿಂದ ಕೃಷಿ ಉತ್ಪನ್ನ ಮಾರುಕಟ್ಟೆ, ಜಾನá-ವಾರá-ಗಳ ಮಾರುಕಟ್ಟೆ, ತಬಕದಹೊನ್ನಳ್ಳಿ ಮತ್ತು ಹುಬ್ಬಳ್ಳಿಗೆ ತೆರಳಲು ಮಾರ್ಗಗಳಿವೆ. ತಾಲೂಕಿನ ಸುತ್ತಲಿನ ಗ್ರಾಮಗಳಿಗೆ ತೆರಳುವ ವಾಹನಗಳೂ ಇಲ್ಲಿಯೇ ಬಂದು ಸೇರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗá-ತ್ತಿದೆ. ಪೊಲೀಸರು ಇನ್ನು ಮುಂದಾದರೂ ಸಂಚಾರ ವ್ಯವಸ್ಥೆ ಸರಿಪಡಿಸಬೇಕು ಎಂಬá-ದು ನಾಗರಿಕರ ಒತ್ತಾಯ.ಬಮ್ಮಿಗಟ್ಟಿ ಕ್ರಾಸ್ಬಳಿ ಇಬ್ಬರು ಪೊಲೀಸ್ ಪೇದೆ ಹಾಗೂ ಎಪಿಎಂಸಿ ಬಳಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅವರು ಕಾರಣಾಂತರಗಳಿಂದ ಬೇರೆಡೆ ತೆರಳಿದಾಗ ಸಂಚಾರ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದೆ.
| ವಿಜಯ ಬಿರಾದಾರ ಸಿಪಿಐ ಕಲಘಟಗಿ
ಎಪಿಎಂಸಿ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಬೈಕ್ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ದೊಡ್ಡ ಲಾರಿಯಂಥ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ.
| ರುದ್ರಗೌಡ ಪಾಟೀಲ ಎಪಿಎಂಸಿ ಸದಸ್ಯ