ಶಿರಾಳಕೊಪ್ಪ: ಶಿರಾಳಕೊಪ್ಪ-ಹಿರೇಕೆರೂರು ರಸ್ತೆಯ ಹುಲಗಿನಕೊಪ್ಪ ನೆಡುತೋಪು ಬಳಿ ಸೋಮವಾರ ವಾಹನ ಡಿಕ್ಕಿಯಾಗಿ ಹೆಣ್ಣು ಚಿರತೆ ಮೃತಪಟ್ಟಿದೆ.
ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಚಿರತೆಯ ಬೆನ್ನಿನ ಮೂಳೆ ಮುರಿದಿದೆ ಎಂದು ಶಿರಾಳಕೊಪ್ಪ ಅರಣ್ಯ ಇಲಾಖೆಯ ಆರ್ಎಫ್ಒ ಸುರೇಶ್ ‘ವಿಜಯವಾಣಿ’ಗೆ ತಿಳಿಸಿದರು. ಮಂಗಳವಾರ ಪಶುವೈದ್ಯ ಇಲಾಖೆಯ ಐವರು ವೈದ್ಯರ ತಂಡ ಮರಣೋತ್ತರ ಪರೀಕ್ಷೆ ನಡೆಸಿದರು. ಮೃತ ಚಿರತೆಯು ಗರ್ಭ ಧರಿಸಿದ್ದು 3 ಮರಿಗಳಿದ್ದವು. ಮರಣೋತ್ತರ ಪರೀಕ್ಷೆ ನಂತರ ಚಿರತೆಯನ್ನು ದಹಿಸಲಾಯಿತು. ಪಶು ವೈದ್ಯಾಧಿಕಾರಿಗಳಾದ ಡಾ. ಜಯಣ್ಣ, ಡಾ. ಲಕ್ಷ್ಮಣ, ಡಾ. ಅನಂತ ನಾಯಕ್, ಎಸಿಎಫ್ ಗೋಪ್ಯಾನಾಯ್್ಕ ಇತರರಿದ್ದರು.
TAGGED:Back BoneburningChicksCollisionDeathFemale LeopardForest DepartmentHirekaruruMidwivesPlantationPostmortemPregnancyRFOShirakoppaVehicleVeterinary Departmentಅರಣ್ಯ ಇಲಾಖೆಆರ್ಎಫ್ಒಎಸಿಎಫ್ಗರ್ಭಿಣಿಡಿಕ್ಕಿದಹನನೆಡುತೋಪುಪಶುವೈದ್ಯ ಇಲಾಖೆಬೆನ್ನಿನ ಮೂಳೆಮರಣೋತ್ತರ ಪರೀಕ್ಷೆಮರಿಗಳುವಾಹನವೈದ್ಯಾಧಿಕಾರಿಗಳುಶಿರಾಳಕೊಪ್ಪಸಾವುಹಿರೇಕೆರೂರುಹೆಣ್ಣು ಚಿರತೆ