ಕೊಳ್ಳೇಗಾಲ: ಪಟ್ಟಣದ ವಾಸವಿ ವಿದ್ಯಾ ಕೇಂದ್ರ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ನ.4 ರಂದು ನಡೆದ 2024-25ನೇ ಸಾಲಿನ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ 4*100 ಮೀಟರ್ ಓಟದ ಸ್ಪರ್ಧೆಯಲ್ಲಿ ಮೊಹಮದ್ ರೆಹಾನ್, ಎನ್.ಆರ್.ಪ್ರಣೀತ್, ಎಸ್.ನಿರಂಜನ್, ಎಂ.ಎಸ್.ಸೃಜನ್ ಪ್ರಥಮ ಸ್ಥಾನ ಪಡೆದಿದ್ದಾರೆ. ಉದ್ದ ಜಿಗಿತದಲ್ಲಿ ಎಸ್.ನಿರಂಜನ್ ದ್ವಿತೀಯ ಸ್ಥಾನ ಪಡೆದಿದ್ದಾರೆ. 400 ಮೀ. ಓಟದಲ್ಲಿ ಎನ್.ಆರ್.ಪ್ರಣೀತ್ ತೃತೀಯ ಸ್ಥಾನ ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಎ.ಡಿ.ಕುಮಾರ ಕೃಷ್ಣ, ಕಾರ್ಯದರ್ಶಿ ಡಾ.ಪಿ.ಜಿ.ಶ್ರೀಧರ್ ಮತ್ತು ಶಾಲೆಯ ಆಡಳಿತ ಮಂಡಳಿಯ ಸದಸ್ಯರು, ಮುಖ್ಯಶಿಕ್ಷಕಿ ಬಿ.ಎಸ್.ಗೀತಾ ಹಾಗೂ ದೈಹಿಕ ಶಿಕ್ಷಣದ ಶಿಕ್ಷಕರಾದ ಸಿ.ನಾಗೇಂದ್ರ, ಎಲಿಜಬೆತ್ ಶೀಬಾ, ಆರ್.ಸುನೀಲ್, ಎಂ.ಸುನೀಲ್, ಎ.ಸೌಮ್ಯಾ ಇತರರು ಅಭಿನಂದಿಸಿದ್ದಾರೆ.
TAGGED:Kollegala news