ಚಿಕ್ಕಮಗಳೂರು: ವಾಸವಿ ಜಯಂತಿಯ ಅಂಗವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವುದಾಗಿ ವಾಸವಿ ಯುವಜನ ಸಂಘ ಹಾಗೂ ವಾಸವಿ ಕ್ಲಬ್ ಅಧ್ಯಕ್ಷ ದಿನೇಶ್‌ಗುಪ್ತ ತಿಳಿಸಿದರು.

ಬುಧವಾರ ವಾಸವಿ ಜಯಂತಿ ಅಂಗವಾಗಿ ಆರ್ಯ ವೈಶ್ಯ ಬಂಧುಗಳು ಸೇರಿ ಕಳೆದ ೪೨ ವರ್ಷಗಳಿಂದ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮುಂದೆ ಮಜ್ಜಿಗೆ, ಕೋಸಂಬರಿ, ಹೊಸ ವಸ್ತç ವಿತರಣೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬರುತ್ತಿz್ದೆÃವೆ ಎಂದು ಹೇಳಿದರು.
ನಗರದ ಎಂಜಿ ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದಿನಿAದ ಒಂದು ವಾರಗಳ ಕಾಲ ಪೂಜೆ, ಹವನ ಇತ್ಯಾದಿ ಧಾರ್ಮಿಕ ಕಾರ್ಯಗಳು ಜರುಗಲಿವೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಮುಕ್ತಾಯಗೊಂಡ ಬಳಿಕ ನಗರದ ರಾಜಬೀದಿಯಲ್ಲಿ ಕನ್ನಿಕಾ ಪರಮೇಶ್ವರಿ ದೇವಿಯ ರಥೋತ್ಸವ ಉತ್ಸವ ಜರುಗಲಿದೆ. ನಂತರ ಪ್ರಸಾದ ವಿನಿಯೋಗ ಪ್ರಾಕಾರೋತ್ಸವ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಕ್ಲಬ್‌ನ ಸದಸ್ಯರಾದ ಜಿ.ಎನ್. ರಾಮಕೃಷ್ಣ, ಎಂ.ಯು ದೀಪಕ್, ಮಹೇಶ್, ನಿತಿನ್, ಉಮೇಶ್, ಆನಂದ, ರಮೇಶ್, ಮದನ್, ರಘುನಂದನ್ ಮತ್ತಿತರರು ಭಾಗವಹಿಸಿದ್ದರು.