Thursday, 15th November 2018  

Vijayavani

ಸಚಿವ ಸ್ಥಾನಕ್ಕಾಗಿ ಬಳ್ಳಾರಿ ಶಾಸಕರ ಲಾಬಿ - ತುಕಾರಾಂ ಸೇರಿದಂತೆ ಐವರ ಪೈಪೋಟಿ        RSS ಬೈಠಕ್​​ನಲ್ಲಿ ರಾಮಮಂದಿರ ಪ್ರತಿಧ್ವನಿ-ಶಬರಿಮಲೆ ಹೋರಾಟದಿಂದ ಹಿಂದೆ ಸರಿಯಲ್ಲ-ಷಾ ಸಮ್ಮುಖದಲ್ಲಿ ನಿರ್ಧಾರ        KRS ಬಳಿ 125 ಅಡಿ ಎತ್ತರದ ಕಾವೇರಿ ಮಾತೆ ಸ್ಟ್ಯಾಚ್ಯೂ ನಿರ್ಧಾರ-ಡಿಕೆಶಿ ನೇತೃತ್ವದ ಸಮಿತಿಯ ತೀರ್ಮಾನ        ರವಿ ಕೊಲೆ ಹಿಂದೆ ಸೈಲೆಂಟ್ ಸುನಿಲನ ನೆರಳು - ತುಮಕೂರು ಡಾಬಾದಲ್ಲೇ ನಡೆದಿತ್ತು ಹಂತಕ ಮೀಟಿಂಗ್        ತಮಿಳುನಾಡಿನಲ್ಲಿ ಗಜ ಆರ್ಭಟ-ಸಮುದ್ರದಲ್ಲಿ ಅಲೆಗಳ ಅಬ್ಬರ-ಬೆಂಗಳೂರಿನ ಹಲವೆಡೆ ಮಳೆ ಸಾಧ್ಯತೆ        ದೀಪ್​-ವೀರ್​​ ಕಲ್ಯಾಣೋತ್ಸವ-ನಿನ್ನೆ ಕೊಂಕಣಿ, ಇಂದು ಸಿಂಧಿ ಸ್ಟೈಲ್​ ಕಲ್ಯಾಣ-ಇಟಲಿಯಲ್ಲಿ ಅದ್ದೂರಿ ವಿವಾಹ       
Breaking News

ವಾರ್ಡ್​ಗಳಲ್ಲಿ ಕಳಪೆ ಕಾಮಗಾರಿ

Monday, 09.07.2018, 9:52 PM       No Comments

ಲಕ್ಷೆ್ಮೕಶ್ವರ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯು ಸೋಮವಾರ ಪುರಸಭೆ ಸಭಾಭವನದಲ್ಲಿ ಅಧ್ಯಕ್ಷ ಎಂ.ಆರ್. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಭೆ ಆರಂಭವಾಗುತ್ತಿದ್ದಂತೆಯೇ ಹಿಂದಿನ ಸಭೆಯ ಠರಾವುಗಳನ್ನು ದೃಢೀಕರಿಸುವ ವೇಳೆ ಹಿರಿಯ ಸದಸ್ಯ ರಾಜು ಕುಂಬಿ ಅವರು ಫಾಗಿಂಗ್ ಯಂತ್ರ ಕಾರ್ಯನಿರ್ವಹಣೆ ಮತ್ತು ಪದೇ ಪದೆ ದುರಸ್ತಿಗೆ ಬರುವ ಸೂರಣಗಿ ನೀರು ಶುದ್ಧೀಕರಣ ಘಟಕದ ನೀರೆತ್ತುವ ಮೋಟರ್ ಬಗೆಗೆ ಪ್ರಶ್ನಿಸಿದರು. ಈಗ ಮಳೆಗಾಲವಾದ್ದರಿಂದ ಸೊಳ್ಳೆಗಳ ಕಾಟ ಹೆಚ್ಚಿದ್ದು, ಎಲ್ಲ ವಾರ್ಡ್​ಗಳಲ್ಲಿ ಫಾಗಿಂಗ್ ಮಾಡುವಂತೆ ಮತ್ತು ನೀರೆತ್ತುವ ಮೋಟರ್ ಪದೇ ಪದೆ ದುರಸ್ತಿಗೆ ಬರದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಕೊರೆಯಿಸಿದ ಬೋರ್​ವೆಲ್ ಮತ್ತು ಪೈಪ್​ಲೈನ್, ಮೋಟರ್ ಅಳವಡಿಸಿದ ಗುತ್ತಿಗೆದಾರರಿಗೆ ಇದುವರೆಗೂ ಪೇಮೆಂಟ್ ಮಾಡಿಲ್ಲ. ಕೂಡಲೇ ಅವರಿಗೆ ಪೇಮೆಂಟ್ ಮಾಡಲು ಸೂಚಿಸಿದರು.

ಕಪ್ಪು ಪಟ್ಟಿಗೆ ಸೇರಿಸಿ: 2016-17ರ 4 ಕೋಟಿ 68 ಲಕ್ಷ ರೂ. ಅನುದಾನದಲ್ಲಿ ಪಟ್ಟಣದ ಸರ್ವೆ ನಂ. 1ರಲ್ಲಿ ನೆಲ ಅಂತಸ್ತು ವಾಣಿಜ್ಯ ಮಳಿಗೆ ನಿರ್ವಣ, ವಿವಿಧ ವಾರ್ಡ್​ಗಳಲ್ಲಿ ಚರಂಡಿ, ರಸ್ತೆ, ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಪಡೆದ ಸುಪ್ರದಾ ಕನ್ಸ್​ಟ್ರಕ್ಷನ್ ಗುತ್ತಿಗೆದಾರ ಭುಜಂಗಶೆಟ್ಟಿ ಎಂಬುವರು ಕೈಗೆತ್ತಿಕೊಂಡ ಕಾಮಗಾರಿ ಅತ್ಯಂತ ಕಳಪೆಯಾಗಿವೆ. ಗುತ್ತಿಗೆದಾರ ಪುರಸಭೆ ಅಧ್ಯಕ್ಷರ, ಸದಸ್ಯರ ಪೋನ್ ಕರೆಯನ್ನೂ ಸ್ವೀಕರಿಸುವುದಿಲ್ಲ. ಭಾನುವಾರ ಸರ್ವೆ ನಂ. 1ರಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಕಾರ್ಯಕ್ಕೆ ಯಾರನ್ನೂ ಕೇಳದೆ ತಮ್ಮ ಸಹಾಯಕರಿಂದ ಲೈನ್​ಔಟ್ ಹಾಕಿಸಿದ್ದಾರೆ. ಆಡಳಿತ ಮಂಡಳಿಗೆ ಕಿಮ್ಮತ್ತು ಇಲ್ಲವೇ? ಕಾರ್ಯ ಸ್ಥಗಿತಗೊಳಿಸಿ ನೋಟಿಸ್ ಕೊಡಿ ಮತ್ತು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕೆಂದು ಸರ್ವ ಸದಸ್ಯರು ಆಗ್ರಹಿಸಿದರು.

ಕಳೆದ ಕೆಲ ವರ್ಷಗಳ ಹಿಂದೆ ಇಟ್ಟಿಕೇರಿ ದಂಡೆಯ ಮೇಲಿದ್ದ ಗುಡಿಸಲು ವಾಸಿಗಳನ್ನು ತೆರವುಗೊಳಿಸಿ, ಗುಡಿ ರಂಗಾಚಾರ್ಯ ಪ್ಲಾಟ್​ನಲ್ಲಿ ವಾಸಕ್ಕೆ ಅನುಕೂಲ ಕಲ್ಪಿಸಲಾಗಿದ್ದು, ಅವರಿಗೆ ಪಟ್ಟಾಬುಕ್ ಕೊಟ್ಟರೆ ಮನೆ ನಿರ್ವಿುಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸದಸ್ಯ ರಾಮಣ್ಣ ರಿತ್ತಿ ನೀಡಿದ ಸಲಹೆಗೆ ಸಭೆ ಒಪ್ಪಿಗೆ ಸೂಚಿಸಿತು. ಪಟ್ಟಣದ 23 ವಾರ್ಡ್​ಗಳಲ್ಲಿ 5,6,8,9,15,16 ವಾರ್ಡ್​ಗಳನ್ನು ಬಯಲು ಶೌಚಮುಕ್ತ ಎಂದು ಘೊಷಿಸುವ ಕುರಿತು ಚರ್ಚೆ ನಡೆದಾಗ, ಸದಸ್ಯ ಕುಂಬಿ ಅವರು, ಪಟ್ಟಣದ ಇಟ್ಟಿಗೇರಿ ಪ್ರದೇಶ ಬಯಲು ಶೌಚವಾದ ಬಗ್ಗೆ ಪತ್ರಿಕೆಗಳು ಪದೇ ಪದೆ ಸುದ್ದಿ ಪ್ರಕಟಿಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಸೂಕ್ತ ಗಮನ ಹರಿಸಬೇಕು ಎಂದು ಸೂಚಿಸಿದರು.

ಅಭಿವೃದ್ಧಿ ಕಾರ್ಯಕ್ಕೆ ಒಪ್ಪಿಗೆ: ಆಸ್ತಿ ತೆರಿಗೆ ವಿಧಿಸುವುದು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಿರ್ವಣಕ್ಕೆ ನಿವೇಶನ ನೀಡುವುದು, ಎಸ್​ಸಿಪಿ, ಎಸ್​ಟಿಪಿ ಅನುದಾನದಲ್ಲಿ ಲಂಡಿನಾಲಾ ಸ್ವಚ್ಛತೆ, ಮೂಲ ಸೌಲಭ್ಯ ಕಲ್ಪಿಸುವುದು, ವೈಯಕ್ತಿಕ ಶೌಚಗೃಹ ನಿರ್ವಣ, ಅತಿಕ್ರಮಣ ತೆರವು, ಪಾದಗಟ್ಟಿ-ಹಳೇ ಬಸ್​ನಿಲ್ದಾಣ ರಸ್ತೆ ಅಗಲೀಕರಣ ಸೇರಿ 40 ವಿಷಯಗಳು ಚರ್ಚೆಗೊಳಪಟ್ಟು ಬಹುತೇಕ ವಿಷಯಗಳು ಸರ್ವಾನುಮತದ ಒಪ್ಪಿಗೆ ಪಡೆದವು. ಉಪಾಧ್ಯಕ್ಷ ಬಸವರಾಜ ಓದುನವರ, ಸ್ಥಾಯಿ ಸಮಿತಿಯ ಸೋಮಣ್ಣ ಸುತಾರ, ವಿ.ಜಿ. ಪಡಗೇರಿ, ಜಯಕ್ಕ ಕಳ್ಳಿ, ಗಂಗಮ್ಮ ಫಕೀರಸ್ವಾಮಿಮಠ, ದಾದಾಪೀರ ಮುಚ್ಚಾಲೆ, ಗಣೇಶ ಬೇವಿನಮರದ, ಲೆಂಕೆಪ್ಪ ಶರಸೂರಿ, ಅನಿಲ ಮುಳಗುಂದ, ನಾಗಪ್ಪ ಓಂಕಾರಿ ಇತರರಿದ್ದರು.

ಮಹಿಳಾ ಕಾರ್ವಿುಕರ ಧರಣಿ ಹಿಂದಕ್ಕೆ: ಲಕ್ಷೆ್ಮೕಶ್ವರ ಪಟ್ಟಣದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 12 ಮಹಿಳಾ ಕಾರ್ವಿುಕರು ತಮಗೆ ಮತ್ತೆ ಕೆಲಸ ನೀಡಬೇಕು ಎಂದು ಜು. 3ರಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯು ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೆಲಸ ನೀಡುವ ಭರವಸೆ ನೀಡಿದ್ದರಿಂದ ಧರಣಿ ಅಂತ್ಯಗೊಂಡಿತು.

7 ದಿನಗಳಿಂದ ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ತಹಸೀಲ್ದಾರ್, ಮುಖ್ಯಾಧಿಕಾರಿ ಭರವಸೆ ನೀಡಿದರೂ ಧರಣಿ ಹಿಂಪಡೆಯದ ಮಹಿಳೆಯರು, ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸೂಕ್ತ ಭರವಸೆ ದೊರೆತಿದ್ದರಿಂದ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ.

8 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತ ಬಂದಿದ್ದ 12 ಮಹಿಳೆಯರನ್ನು ಟೆಂಡರ್ ಅವಧಿ ಮುಗಿದಿದೆ ಎಂಬ ಕಾರಣದಿಂದ ಕೆಲಸದಿಂದ ತೆಗೆಯಲಾಗಿತ್ತು. ಮತ್ತೆ ತಮಗೆ ಕೆಲಸ ನೀಡಬೇಕು ಎಂದು ಮಹಿಳೆಯರು ಸತ್ಯಾಗ್ರಹ ಕೈಗೊಂಡಿದ್ದರು. ಸೋಮವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಉಪಾಧ್ಯಕ್ಷ ಬಸವರಾಜ ಓದುನವರ ಮಾತನಾಡಿ, ಸ್ವಚ್ಛತೆ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇದೆ. 8 ವರ್ಷದಿಂದ ಮನೆ ಮನೆ ಕಸ ಸಂಗ್ರಹ ಸೇವೆ ಸಲ್ಲಿಸಿದ 12 ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗೆ ಠರಾವು ಕಳುಹಿಸುವ ಸೂಚನೆಗೆ ಒಮ್ಮತದ ಒಪ್ಪಿಗೆ ಸೂಚಿಸಿದರು. ಸಭೆ ಬಳಿಕ ಧರಣಿ ನಿರತರಿಗೆ ಕೆಲಸ ನೀಡುವ ಭರವಸೆ ನೀಡಿದ ಅಧ್ಯಕ್ಷ ಎಂ.ಆರ್. ಪಾಟೀಲ ಮತ್ತು ಸದಸ್ಯರು ಎಳನೀರು ಕೊಟ್ಟು ಮನವೊಲಿಸಿದರು. ಸೂಕ್ತ ಭರವಸೆ ಹಿನ್ನೆಲೆಯಲ್ಲಿ ಮಹಿಳೆಯರು ಧರಣಿ ಅಂತ್ಯಗೊಳಿಸಿದರು. ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ, ಮುಖಂಡರಾದ ಸುರೇಶ ನಂದೆಣ್ಣವರ, ರಾಮು ಅಡಗಿಮನಿ, ನಾಗೇಶ ಅಮರಾಪೂರ, ರಾಮು ಗಡದವರ, ಮಹೇಶ ನಂದೆಣ್ಣವರ, ಪೌರ ಕಾರ್ವಿುಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ಮತ್ತಿತರರಿದ್ದರು.

Leave a Reply

Your email address will not be published. Required fields are marked *

Back To Top