ಬಾಗಲಕೋಟೆ: ಮೃತ ಹೊಂದಿರುವವರ ಹೆಸರಿನಲ್ಲಿಯೇ ಆಸ್ತಿಗಳು ಮುಂದುವರೆದು, ಇಂದು ದೊಡ್ಡ ಪ್ರಮಾಣದಲ್ಲಿ ಉಳಿದಿವೆ. ಅವುಗಳನ್ನು ಅಭಿಯಾನದ ರೂಪದಲ್ಲಿ ಜನರ ಬಳಿಗೆ ಹೋಗಿ ವಾರಸುದಾರರಿಗೆ ಆಸ್ತಿಯ ಹಕ್ಕು ಪರಿವರ್ತನೆಗೆ ಕ್ರಮ ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣಾ ಬೈರೇಗೌಡ ಅಽಕಾರಿಗಳಿಗೆ ಸೂಚಿಸಿದರು.

ಜಿಲ್ಲಾಽಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ೫೨ ಲಕ್ಷ ಮೃತರ ಹೆಸರಿನಲ್ಲಿ ಇದ್ದ ಕೃಷಿ ಜಮೀನುಗಳು ವಾರಸುದಾರರಿಗೆ ಕಾಲದಿಂದ ಕಾಲಕ್ಕೆ ಹಸ್ತಾಂತರವಾಗದೇ ಉಳಿದು, ದೊಡ್ಡ ಪ್ರಮಾಣದಲ್ಲಿ ಉಳಿದಿವೆ. ಇದು ದಾಖಲೆಗಳ ನಿರ್ವಹಣೆಗೆ ಒಳ್ಳೆಯದಲ್ಲ. ಆಂದೋಲದ ರೂಪದಲ್ಲಿ ತೆಗೆದುಕೊಂಡು ಜಿಲ್ಲೆಯಲ್ಲಿ ಹಕ್ಕು ಪರಿವರ್ತನೆಗೆ ಅಽಕಾರಿಗಳು ಕ್ರಮವಹಿಸಲು ಸೂಚನೆ ನೀಡಿದರು.
ವಸತಿ ಪ್ರದೇಶದಲ್ಲಿ ವಾಸಮಾಡುತ್ತಿರುವ ಮನೆಗಳಿಗೆ ಹಕ್ಕು ಪತ್ರ ನೀಡುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ಕಾರ್ಯವನ್ನು ಸರ್ಕಾರ ನಿರಂತರವಾಗಿ ಮಾಡುತ್ತಿದೆ. ಮೇ ೨೦ ರಂದು ವಿಜಯನಗರದಲ್ಲಿ ರಾಜ್ಯದ ೧ ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಇನ್ನು ೩೦ ರಿಂದ ೫೦ ಸಾವಿರ ಜನರಿಗೆ ಹಕ್ಕು ಪತ್ರ ವಿತರಣೆಗೆ ಈ ವರ್ಷ ಗುರಿ ಹೊಂದಲಾಗಿದ್ದು, ತಾಂಡಾ, ಹಟ್ಟಿ, ಊರು, ಗ್ರಾಮಗಳು ಬಿಟ್ಟು ಹೋಗಿದ್ದರೆ ಅಂತವುಗಳನ್ನು ಸೇರಿಸಿ, ಹಕ್ಕು ಪತ್ರ ಕೊಡುವ ಕೆಲಸ ಈ ವರ್ಷದಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಲಾಗಿದ್ದು, ಅಽಕಾರಿಗಳು ತಮ್ಮ ಕಾರ್ಯ ವೈಖರಿಯ ವೇಗ ಹೆಚ್ಚಿಸಲು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳಾಗಿ ಮಾಡಲು ಗುರುತಿಸಲಾದ ೩೬ ಗ್ರಾಮಗಳ ಪೈಕಿ ೨೮ಕ್ಕೆ ಅಽಸೂಚನೆ ಹೊರಡಿಸಲಾಗಿದ್ದು, ಬಾಕಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಒಟ್ಟು ೭೦೪೧ ಪೈಕಿ ೪೮೦೨ ಜನರಿಗೆ ಹಕ್ಕುಪತ್ರ ನೀಡಲು ಅನುಮೋದನೆ ನೀಡಿದ್ದು, ೨೨೨೯ ಅರ್ಜಿಗಳನ್ನು ತೀರಸ್ಕೃತಗೊಂಡಿವೆ. ೪೨೮ ಮಾತ್ರ ಪೆಂಡಿAಗ್ ಉಳಿದಿವೆ. ಯಾವುದೇ ಕಾರಣಕ್ಕೂ ತೀರಸ್ಕರಿಸದೇ ಪರಿವರ್ತಿಸಲಾದ ಕಾನೂನನ್ನು ಓದಿಕೊಂಡು ಹಕ್ಕುಪತ್ರ ವಿತರಣೆ ಕ್ರಮವಹಿಸಲು ಸೂಚಿಸಿದರು.
ಪೋಡಿಮುಕ್ತ ಗ್ರಾಮ ಅಭಿಯಾನದಲ್ಲಿ ಮುಳಗಡೆ, ಪುನರ್ವಸತಿ ಹಾಗೂ ಕೆನಾಲ್‌ಗಳನ್ನು ಹೊರತುಪಡಿಸಿ ಆಸ್ಪತ್ರೆ, ಶಾಲೆ, ಆಟದ ಮೈದಾನಗಳನ್ನು ಸೇರಿಸಿಕೊಳ್ಳಲು ತಿಳಿಸಿದರು. ಒಟ್ಟು ಇರುವ ಜಮೀನಿನಲ್ಲಿ ಇರುವ ವಾರಸುದಾರರಿಗೆ ಪ್ರತ್ಯೇಕವಾಗಿ ಪಹಣಿ ನೀಡುವ ಕೆಲಸ ಆಗಬೇಕಿದೆ. ಇದಕ್ಕೂ ಅಭಿಯಾನ ಹಮ್ಮಿಕೊಂಡಿದ್ದು, ಜನ ಅರ್ಜಿ ಕೊಡುವುದಲ್ಲಿ ಜನರ ಮನೆ ಬಾಗಿಲಿಗೆ ಹೋಗಿ ಮಾಡುವ ಕಾರ್ಯವಾಗಬೇಕು ಎಂದರು.
ಪೌತಿಖಾತೆಯಲ್ಲಿಯೂ ಸಹ ಅದಾಲತ್ ಮಾಡಿ ಪ್ರಗತಿ ಸಾಽಸಲು ತಿಳಿಸಿದ ಅವರು, ಭೂಸುರಕ್ಷ ಯೋಜನೆಯಡಿ ದಾಖಲೆಗಳನ್ನು ಗಣಕಿಕೃತ ಮಾಡುವ ಮೂಲಕ ಹಳೆಯ ದಾಖಲೆಗಳನ್ನು ಅತ್ಯಂತ ಸುಲಭವಾಗಿ ಜನರಿಗೆ ಒದಗಿಸಲು ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿನ ಭೂಸುರಕ್ಷಾ ಯೋಜನೆಯಡಿ ಮೂಲ ಹಳೆಯ ದಾಖಲೆಗಳ ಗಣೀಕರಣ ಕಾರ್ಯ ಮಾಡಲಾಗಿದೆ. ಬಾಕಿ ಉಳಿದ ದಾಖಲೆಗಳ ಗಣಕೀರಣ ಕಾರ್ಯಕ್ಕೆ ತ್ವರಿತಗತಿ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಭೂ ದಾಖಲೆ ಇಲಾಖೆಯ ಜಂಟಿ ನಿರ್ದೇಶಕಿ ಜನಮಾ ಪೀರಜಾಧೆ, ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ, ಜಿಲ್ಲಾ ಭೂದಾಖಲೆ ಇಲಾಖೆಯ ಉಪನಿರ್ದೇಶಕ ರವಿಕುಮಾರ ಎಂ. ಸೇರಿದಂತೆ ಆಯಾ ತಾಲೂಕಿನ ತಹಸೀಲ್ದಾರರು ಉಪಸ್ಥಿತರಿದ್ದರು.