More

  ವಾರದೊಳಗೆ ಎಲ್ಲ ಸಮಸ್ಯೆ ಬಗೆಹರಿಸಿ


  ಯಾದಗಿರಿ: ಗ್ರಾಮೀಣ ಭಾಗದಲ್ಲಿನ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವದ ಯೋಜನೆ ಜೆಜೆಎಂ ಗ್ರಾಮೀಣ ಭಾಗದಲ್ಲಿ ಸಂಪೂಣ್ ಹಳ್ಳ ಹಿಡಿದಿದ್ದು, ಎಲ್ಲೆಡೆ ಕಳಪೆ ಕಾಮಗಾರಿಯಾಗಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಸಮಧಾನ ವ್ಯಕ್ತಪಡಿಸಿದರು.

  ಶನಿವಾರ ನಗರದ ಸಕರ್ಿಟ್ ಹೌಸ್ನಲ್ಲಿ ಕರೆದಿದ್ದ ಲೋಕೊಪಯೋಗಿ, ಗ್ರಾಮೀಣ ನೀರು ಸರಬರಾಜು ಇಲಾಖೆ, ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಅಕಾರಿಗಳ ಸಭೆಯಲ್ಲಿ ಮಾತನಾಡಿ, ಜೆಜೆಎಂ ಯೋಜನೆಯಡಿ ಪೈಪ್ಲೈನ್ ಮಾಡಲು ಹಳ್ಳಿಗಳಲ್ಲಿನ ರಸ್ತೆಗಳ ಮಧ್ಯದಲ್ಲಿ ರಂಧ್ರ ಕೊರೆಯಲಾಗಿದೆ. ಇದು ಮತ್ತಷ್ಟು ಸಮಸ್ಯೆಯಾಗಿದ್ದು, ಮಳೆಗಾಲದಲ್ಲಿ ಇಡೀ ರಸ್ತೆ ಸಂಪೂರ್ಣ ಹಾಳಾಗಿ ಸಂಚಾರ ಮಾಡಲು ಕಷ್ಟದ ಸ್ಥಿತಿ ಇದೆ ಎಂದು ಕಿಡಿಕಾರಿದರು.

  ಪೈಪ್ಲೈನ್ ಮಾಡಿದ ಮೇಲೆ ರಸ್ತೆ ಮೊದಲಿನಂತೆ ದುರಸ್ತಿ ಮಾಡಬೇಕಾಗಿರುವುದು ಗುತ್ತಿಗೆದಾರರ ಹೊಣೆಯಾಗಿದೆ. ಆದರೆ ಕಾಟಾಚಾರಕ್ಕೆಂಬಂತೆ ನಾಲ್ಕು ಪುಟ್ಟಿ ಮಣ್ಣು ಹಾಕಿ ಕೈ ತೊಳೆದುಕೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾನು ಭೇಟಿ ನೀಡಿದ ಎಲ್ಲ ಗ್ರಾಮಗಳಲ್ಲಿ ಇದೇ ಸಮಸ್ಯೆ ಗಮನಕ್ಕೆ ಬಂದಿದೆ. ಹಳ್ಳಿಗಳಲ್ಲಿ ರಸ್ತೆಗಳು ನಿಮರ್ಾಣ ಮಾಡುವುದೇ ಅಪರೂಪ ಎಂಬ ಸ್ಥಿತಿ ಇದೆ. ಹೀಗಿರುವಾಗ ಇದ್ದ ರಸ್ತೆಯನ್ನೂ ಹಾಳು ಮಾಡಿದರೆ, ಜನರ ಗತಿ ಏನು? ಎಂದು ಖಾರವಾಗಿ ಪ್ರಶ್ನಿಸಿದರು.

  ನನ್ನ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಬಗ್ಗೆ ಇನ್ನೆರಡು ದಿನಗಳಲ್ಲಿ ಮಾಹಿತಿ ಕೊಡಬೇಕು. ಅಲ್ಲದೆ, ನನ್ನ ಗಮನಕ್ಕೆ ತರದೆ ಯಾವುದೇ ಕಾಮಗಾರಿಗೆ ಚಾಲನೆ ನೀಡುವಂತಿಲ್ಲ. ಇನ್ನು ಕ್ಷೇತ್ರದಲ್ಲಿ ಶೇ.65ರಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ನಿರ್ವಹಣೆ ಮಾಡುವ ಎಜೆನ್ಸಿಗಳ ಅವ ಪೂರ್ಣಗೊಂಡು ಎರಡು ತಿಂಗಳು ಕಳೆದರೂ ಯಾಕೆ ಸುಮ್ಮನಿದ್ದೀರಿ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಅಕಾರಿಯನ್ನು ತರಾಟೆಗೆ ತೆಗೆದುಕೊಂಡರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts