ವಾರಣಾಸಿಯಲ್ಲಿ ಲಿಂಗಪೂಜೆ

1 Min Read
Varanasi, Lingapuje, Basavanbagewadi, Kashivishwanath,
ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಶ್ರೀಗಳು ವಾರಣಾಸಿಯ ಗಂಗಾ ನದಿ ದಂಡೆಯಲ್ಲಿ ಮರಳಿನಲ್ಲಿ ಲಿಂಗ ಸ್ಥಾಪಿಸಿ ಪೂಜೆ ಸಲ್ಲಿಸಿದರು. ಕಮಲವ್ವ ಪಾರಗೊಂಡ, ನಿಲಮ್ಮ ಕಬ್ಬಿನ, ಅನಸುಯಾ ಮುತ್ತಪ್ಪನವರ, ಸಂಜು ಬೂದಿಹಾಳ, ಗಣಪತಿ ಜಾಧವ, ಮುತ್ತಪ್ಪ ಬೆಲ್ಲದ ಇತರರಿದ್ದರು.

ಬಸವನಬಾಗೇವಾಡಿ: ವರುಣನ ಕೃಪೆ ಹಾಗೂ ನಾಡಿನ ಜನರ ಒಳಿತಿಗಾಗಿ ವಾರಣಾಸಿಯ ಗಂಗಾ ನದಿ ದಂಡೆಯಲ್ಲಿ ಉಸುಕಿನಲ್ಲಿ ಲಿಂಗ ಸ್ಥಾಪಿಸಿ ಭಕ್ತರೊಂದಿಗೆ ಭಾನುವಾರ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಾಲೂಕಿನ ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಶ್ರೀಗಳು ತಿಳಿಸಿದ್ದಾರೆ.

ಶ್ರೀಮಠವು ನಾಡಿನ ಒಳಿತಿಗಾಗಿ ಭಕ್ತರ ಅನುಕೂಲಕ್ಕಾಗಿ ಹತ್ತು ಹಲವಾರು ವಿಶೇಷ ಪೂಜೆ, ಪುನಸ್ಕಾರಗಳನ್ನು ನಮ್ಮ ಹಿಂದಿನ ಗುರುಗಳು ಮಾಡುತ್ತ ಬಂದಿದ್ದಾರೆ.

ನಾವು ಕೂಡ ಭಕ್ತರ ಕಷ್ಟದಲ್ಲಿ ಭಾಗಿಯಾಗಿ ನಾಡಿನ ಜನತೆಯ ಒಳಿತಿಗಾಗಿ ಮನಗೂಳಿ ಪಟ್ಟಣದಿಂದ ಅಂದಾಜು ನೂರು ಭಕ್ತರೊಂದಿಗೆ ಕಾಶಿವಿಶ್ವನಾಥನ ಸನ್ನಿಧಿಗೆ ತೆರಳಿ ಪೂಜೆ ಸಲ್ಲಿಸಲಾಗಿದೆ. ಜನತೆ ಹೊಸವರ್ಷದಲ್ಲಿ ಹೊಸ ಆಸೆಗಳೊಂದಿಗೆ ಸುಖ, ಶಾಂತಿ, ನೆಮ್ಮದಿಯ ಬದುಕು ಸಾಗಿಸುವಂತೆ ಕಾಶಿವಿಶ್ವನಾಥನಲ್ಲಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದ್ದಾರೆ.

ಲಕ್ಷ್ಮೀ ನಾವಣ್ಣನವರ, ಜಯಶ್ರೀ ಹಂಚನಾಳ, ಶಾಂತವ್ವ ಗೆನ್ನೂರ, ಸುಮಿತ್ರಾ ಸಾಹುಕಾರ, ನೀಲಮ್ಮ ಹುಣಶಿನಕಟ್ಟಿ, ಕಮಲವ್ವ ಪಾರಗೊಂಡ, ನಿಲಮ್ಮ ಕಬ್ಬಿನ, ಅನಸುಯಾ ಮುತ್ತಪ್ಪನವರ, ಸಂಜು ಬೂದಿಹಾಳ, ಗಣಪತಿ ಜಾಧವ, ಮುತ್ತಪ್ಪ ಬೆಲ್ಲದ, ಸುಮನಗೌಡ ಪಾಟೀಲ, ಸುರೇಶಗೌಡ ಬಿರಾದಾರ, ಎಚ್.ಎಚ್. ಕೊಕಟನೂರ, ಮಹಾಂತೇಶ ಮನಗೂಳಿ, ಮುತ್ತು ಚಿಗರಿ, ಮುದಕಪ್ಪ ಹತ್ತರಕಿ, ನಿಂಗಪ್ಪ ಕಾಸಾಪುರ, ಭೀಮಪ್ಪ ಬೂದಿಹಾಳ, ನೇಕಪ್ಪ ಬನ್ನೂರ, ಪ್ರಭಾವತಿ ದುಳಶೆಟ್ಟಿ, ಜಯಶ್ರೀ ಹಂಚನಾಳ, ಶೋಭಾ ಇಟಿ, ಶಾಂತಪ್ಪ ಇಂಡಿ, ಗುಂಡಪ್ಪ ಗುಡಲಮನಿ ಇತರರು ಪೂಜೆಯಲ್ಲಿದ್ದರು.

See also  ಕಿಟ್‌ಗಾಗಿ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ
Share This Article