ಕೊಪ್ಪ: ಹರಿಹರಪುರ ಸಮೀಪದ ಕಲ್ಮಕ್ಕಿ ಗ್ರಾಮದ ಪುಟ್ಟಮ್ಮ ಎಂಬುವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ ದುರಸ್ತಿಗೊಳಿಸಿ, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಶೌಚಗೃಹ ದುರಸ್ತಿಪಡಿಸಿ ಹಸ್ತಾಂತರಿಸಲಾಯಿತು.
ಒಂಟಿಯಾಗಿದ್ದ ಪುಟ್ಟಮ್ಮ ಬಡತನದಲ್ಲಿದ್ದು, ಕಷ್ಟದಲ್ಲಿ ದಿನ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಧರ್ಮಸ್ಥಳ ಸಂಘ ಅವರಿಗೆ ಸಾವಿರ ರೂಪಾಯಿ ಮಾಸಾಶನ ನೀಡಿ, ಮನೆ ದುರಸ್ತಿಪಡಿಸಿಕೊಟ್ಟಿದೆ.
ದುರಸ್ತಿಪಡಿಸಿದ ಮನೆಯನ್ನು ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹಸ್ತಾಂತರಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಜನಮಂಗಲ ಕಾರ್ಯಕ್ರಮದಡಿ ಅಂಗವಿಕಲವಿಕರಿಗೆ ಸಲಕರಣೆ ವಿತರಣೆ, ಮಾಸಾಶನ ವಿತರಣೆ, ವಾತ್ಸಲ್ಯ ಗೃಹ ನಿರ್ಮಾಣ ಇನ್ನುಮುಂತಾದ ಜನಕಲ್ಯಾಣ ಕಾರ್ಯದ ಮೂಲಕ ಬಡವರಿಗೆ ಉಪಯೋಗವಾಗುತ್ತಿದೆ ಎಂದರು.
ಹರಿಹರಪುರ ಗ್ರಾಪಂ ಉಪಾಧ್ಯಕ್ಷೆ ಆಶಾ, ನರಸೀಪುರ ಗ್ರಾಪಂ ಸದಸ್ಯ ಅನಿಲ್‌ಕುಮಾರ್, ಒಕ್ಕೂಟ ಅಧ್ಯಕ್ಷ ಜಗನ್ನಾಥ, ಪದಾಧಿಕಾರಿಗಳಾದ ವಿಮಲಾ, ಸದಾನಂದ, ದೇವಪ್ಪ, ತಾಲೂಕು ಯೋಜನಾಧಿಕಾರಿ ನಿರಂಜನ್ ಇತರರಿದ್ದರು.
