18 C
Bangalore
Friday, December 6, 2019

ವರ್ಷಧಾರೆಗೆ ಮನೆಗಳು ಜಲಾವೃತ

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಹೊನ್ನಾವರ: ತಾಲೂಕಿನಲ್ಲಿ ಮಂಗಳವಾರ ಮಳೆ ಅಬ್ಬರ ಜೋರಾಗಿದ್ದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಶಾಲೆ-ಕಾಲೇಜ್​ಗಳಿಗೆ ರಜೆ ಘೊಷಿಸಲಾಗಿದೆ.

ತಾಲೂಕಿನಲ್ಲಿ ಹರಿಯುವ ಶರಾವತಿ, ಗುಂಡಬಾಳ, ಬಡಗಣಿ ನದಿಗಳು ಉಕ್ಕಿ ಹರಿದಿವೆ. ಹಳದೀಪುರ, ರ್ಕ, ಭಾಸ್ಕೇರಿ, ಕಡತೋಕ, ನವಿಲಗೋಣ, ಕೆಕ್ಕಾರ, ಸಾಲಕೋಡ, ಭಾಸ್ಕೇರಿ, ಮಾವಿನಕುರ್ವಾ, ಹಡಿನಬಾಳ, ಚಿಕ್ಕನಕೋಡ, ಉಪ್ಪೋಣಿ, ಗೇರುಸೊಪ್ಪಾಗಳಲ್ಲಿ ಮಳೆ ನೀರು ಮನೆ, ತೋಟಗಳಿಗೆ ನುಗ್ಗಿ ಹಾನಿಯಾಗಿದೆ.

ಮನೆಗಳಿಗೆ ನುಗ್ಗಿದ ನೀರು: ತಾಲೂಕಿನ ವಿವಿಧೆಡೆ 8 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ನವಿಲಗೋಣದಲ್ಲಿ ತಿಮ್ಮಣ್ಣ ನಾರಾಯಣ ನಾಯ್ಕ, ಹಳದೀಪುರದ ಉದಯ ದೇಶಭಂಡಾರಿ, ಸಾಲ್ಕೋಡದ ಮಾದೇವಿ ನಾಗಪ್ಪ ಜೋಗಿ, ರ್ಕಯ ಶ್ರೀ ಮೂಡಗಣಪತಿ ದೇವಸ್ಥಾನ ಸಮೀಪದ ಸುಶೀಲಾ ಕುಪ್ಪ ಮೊಗೇರ ಅವರ ಮನೆ ಗೋಡೆ ಕುಸಿದು ಹಾನಿಯಾಗಿದೆ. ಸಾಲ್ಕೋಡದಲ್ಲಿ ಅಶೋಕ ನಾರಾಯಣ ಭಟ್ಟ ಅವರ ಮನೆ ಮೇಲೆ ಧರೆ ಕುಸಿದು ಹಾನಿಯಾಗಿದೆ. ಮಾವಿನಕುರ್ವಾದ ಹನುಮಂತ ತಿಪ್ಪಯ್ಯ ನಾಯ್ಕ ಅವರ ಮನೆಯ ಮೇಲೆ ಹಿಂಭಾಗದ ಧರೆ ಕುಸಿದು ಹಾನಿಯಾಗಿದೆ. ಹೊನ್ನಾವರದಲ್ಲಿ ಅನ್ವರ್ ಹಸನ್ ಶೇಖ್​ಅವರ ಮನೆ ಹಾಗೂ ರ್ಕಯಲ್ಲಿ ಸುಶೀಲಾ ಗೌಡ ಅವರ ಮನೆಗೆ ನೀರು ನುಗ್ಗಿ ಹಾನಿಯಾಗಿದೆ.

ಗಂಜಿಕೇಂದ್ರ ಸ್ಥಾಪನೆ: ತಾಲೂಕಿನ ರ್ಕ, ಕೆಕ್ಕಾರ, ಭಾಸ್ಕೇರಿ, ಕೆಕ್ಕಾರ- ನಂ 2 ಶಾಲೆ, ಹಳದೀಪುರದ ಕಲಕಟ್ಟಿಯಲ್ಲಿ ತಾಲೂಕಾಡಳಿತ ಗಂಜಿಕೇಂದ್ರಗಳನ್ನು ಸ್ಥಾಪಿಸಿದೆ. ಒಟ್ಟು 78 ಕುಟುಂಬಗಳ 181 ಜನರನ್ನು ಆಶ್ರಯಕ್ಕಾಗಿ ಈಗಾಗಲೇ ಗುರುತಿಸಲಾಗಿದೆ. ಭಾಸ್ಕೇರಿ ಶಾಲೆಯಲ್ಲಿ ತೆರೆದ ಗಂಜಿಕೇಂದ್ರದಲ್ಲಿ 10 ಕುಟುಂಬ, ರ್ಕಯಲ್ಲಿ 2 ಕುಟುಂಬ, ಕೆಕ್ಕಾರ ದಲ್ಲಿ 3 ಕುಟುಂಬ ಆಶ್ರಯ ಪಡೆದಿವೆ. ಇನ್ನೂ ಕೆಲವೆಡೆ ಗಂಜಿಕೇಂದ್ರ ತೆರೆಯಲು ಉದ್ದೇಶಿಸಲಾಗಿತ್ತು. ಆದರೆ, ಜನರು ಬರಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ತೆರೆದಿಲ್ಲ ಎನ್ನಲಾಗಿದೆ.

ಕಡಲ ಕೊರೆತ: ರ್ಕ ಗ್ರಾಮದ ತೊಪ್ಪಲಕೇರಿ ಮಜರೆಯಲ್ಲಿ ಅರಬ್ಬಿ ಸಮುದ್ರದ ನೀರು ಅಬ್ಬರಿಸುತ್ತಿದೆ. ಸಮುದ್ರ ಕೊರೆತಕ್ಕೆ ತೋಟ, ಕುಡಿಯುವ ನೀರಿನ ಬಾವಿಗೆ ನೀರು ನುಗ್ಗಿದೆ. ಮನೆಯೊಳಗೆ ನೀರು ನುಗ್ಗುವ ಅಪಾಯವಿದೆ. ರ್ಕಯಲ್ಲಿ ಪ್ರತಿವರ್ಷ ಕಡಲ ಕೊರೆತ ಉಂಟಾಗುತ್ತಿದ್ದರೂ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಹಾನಿಗೊಳಗಾದ ಸ್ಥಳಗಳಿಗೆ ತಹಸೀಲ್ದಾರ್ ವಿ.ಆರ್. ಗೌಡ, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಭಟ್ಕಳ ತಾಲೂಕಿನಲ್ಲಿ ಬಿಡುವು ನೀಡಿದ ವರುಣ
ಭಟ್ಕಳ:
ಕೆಲವು ದಿನಗಳಿಂದ ತಾಲೂಕಿನಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ಕೆಲವೆಡೆ ಸರ್ಕಾರಿ ಶಾಲೆ, ಅಂಗನವಾಡಿಗಳ ಗೋಡೆ ಕುಸಿದಿವೆ. ಮಂಗಳವಾರವೂ ಭಾರಿ ಮಳೆ ಬೀಳುವ ನಿರೀಕ್ಷೆ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳು ಶಾಲೆಗಳಿಗೆ ರಜೆ ಘೊಷಿಸಿದರು. ಆದರೆ, ಬೆಳಗ್ಗೆ 8ರ ನಂತರ ಮಳೆ ಸಂಪೂರ್ಣವಾಗಿ ನಿಂತಿತ್ತು. ಬ್ಲಾಕ್ ಆಗಿದ್ದ ಚರಂಡಿಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.

ಅಸಮರ್ಪಕ ಚರಂಡಿ ಕಾಮಗಾರಿ, ಹೂಳು ತುಂಬಿದ ಹೊಳೆಯಿಂದಾಗಿ ನೀರು ಹರಿದು ಹೋಗುತ್ತಿಲ್ಲ. ಮಳೆ ಹೀಗೆಯೆ ಮುಂದುವರಿದಲ್ಲಿ ನಮ್ಮ ಪರಿಸ್ಥಿತಿ ಕೇಳುವವರಿಲ್ಲ. ಮನೆಯೊಳಗೆ ನೀರು ಬರುತ್ತದೆ ಎಂದು ರಾತ್ರಿಯಿಡೀ ನಿದ್ರೆ ಬಿಟ್ಟು ಕಾಯುವ ಕೆಲಸವಾಗಿದೆ. ಬೆಳಗ್ಗೆ ಉಪಾಹಾರ ಕೂಡ ಸೇವಿಸಿಲ್ಲ ಎಂದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ ಅವರನ್ನು ಪುರಸಭೆ ಸದಸ್ಯ ಮೋಹನ ನಾಯ್ಕ, ಇತರರು ತರಾಟೆಗೆ ತೆಗೆದುಕೊಂಡರು.

ಗುಳ್ಮಿಯಿಂದ ನೀರು ಹರಿದು ಹೋಗಲು ಸಾಕಷ್ಟು ವ್ಯವಸ್ಥೆ ಇಲ್ಲದಿರುವುದು, ಸ್ವಲ್ಪ ಮಳೆ ಬಂದರೂ ಇಲ್ಲಿನ ಮನೆಗಳಿಗೆ ನೀರು ನುಗ್ಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರು. ಅದಕ್ಕುತ್ತರಿಸಿದ ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ, ‘ನಿಮಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಮಣ್ಕುಳಿ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗುವುದು’ ಎಂದರು. ಸತತ 2 ದಿನಗಳ ಕಾರ್ಯಾಚರಣೆ ಬಳಿಕವೂ ಮಾರುತಿನಗರದ ಮನೆಗಳಿಗೆ ಮತ್ತೆ ನೀರು ನುಗ್ಗಿದೆ. ಈ ಬಾರಿ ನೀರಿನ ಪ್ರಮಾಣ ಹೆಚ್ಚಿದ್ದು, ಸುಮಾರು 3 ಅಡಿ ನೀರು ಮನೆಗೆ ನುಗ್ಗಿದೆ ಎಂದು ಗ್ಯಾರೇಜ್​ನ ರಾಮದಾಸ ನಾಯ್ಕ ಅಳಲು ತೋಡಿಕೊಂಡರು. ಎಸಿ ಸಾಜಿದ್ ಮುಲ್ಲಾ ಅವರು ಭಟ್ಕಳ ಬೈಪಾಸ್ ಹೊಳೆಯ ಬಳಿ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ರ್ಚಚಿಸಿದರು.

ಶಾಲೆ ಗೋಡೆ ಕುಸಿತ: ಮುಟ್ಟಳ್ಳಿ ಪಂಚಾಯಿತಿ ವ್ಯಾಪ್ತಿಯ ಮಣ್ಕುಳಿಕೇರಿ ಸ.ಕಿ.ಪ್ರಾ. ಶಾಲೆಯ ಕಾಂಪೌಂಡ್ ಗೋಡೆ ಕುಸಿದಿದೆ. ರಘುನಾಥ ರಸ್ತೆ ಅಂಗನವಾಡಿಯ ಗೋಡೆಯೂ ಕುಸಿದಿದೆ. ತಲಾಂದ ವ್ಯಾಪ್ತಿಯ ಕೃಷಿ ಗದ್ದೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಶೇಖರಣೆಯಾಗುತ್ತಿದೆ. ನೀರು ಹರಿದು ಹೋಗದಿದ್ದಲ್ಲಿ ಭತ್ತ ಬೆಳೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಬೈಲೂರು ಗ್ರಾಮದ ತೂದಳ್ಳಿಯ ಶ್ರೀಧರ ಈರಪ್ಪ ನಾಯ್ಕ ಅವರ ಮನೆಯ ಗೋಡೆ ಕುಸಿದಿದೆ. ಕರಿಕಲ್​ನ ದುರ್ಗಮ್ಮ ನಾರಾಯಣ ಮೊಗೇರ ಅವರ ಕಚ್ಚಾ ಮನೆ ಭಾಗಶಃ ಹಾನಿಯಾಗಿದೆ. ಮಾರುಕೇರಿ ಗ್ರಾಮದ ಸಣ್ಣು ಸೋಮಯ್ಯ ಗೊಂಡ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ.

ಗುಡ್ಡ ಕುಸಿಯುವ ಭೀತಿ: ಯಲ್ವಡಿಕವೂರನ ಪುರವರ್ಗದಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ. ಗುಡ್ಡದ ಮೇಲಿನ ನಿವಾಸಿಗಳು ಆತಂಕಿತರಾಗಿದ್ದು ಸಮಸ್ಯೆ ಪರಿಹರಿಸುವಂತೆ ತಾಲೂಕಾಡಳಿತದ ಮೋರೆ ಹೋಗಿದ್ದಾರೆ. ಮಂಗಳವಾರ ಕುಸಿತದ ಪ್ರಮಾಣ ಹೆಚ್ಚಾಗಿದ್ದು ಅಲ್ಲಿನ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಗುಡ್ಡದ ಕೆಳಗಿನ ಮಾಲ್ಕಿ ಜಾಗದ ಮಾಲಿಕರು ಮಣ್ಣನ್ನು ತೆಗೆದು ಜಾಗ ಸಮತಟ್ಟು ಮಾಡಿರುವದು ಗುಡ್ಡ ಕುಸಿಯಲು ಕಾರಣವೆಂದು ಗುಡ್ಡದ ಮೇಲಿನ ನಿವಾಸಿಗಳು ಆರೋಪಿಸಿದ್ದಾರೆ. ಸ್ಥಳಕ್ಕೆ ಎಸಿ ಸಾಜಿದ್ ಅಹ್ಮದ್ ಮುಲ್ಲಾ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಿತು. ಮಳೆ ಪ್ರಮಾಣ ಕಡಿಮೆ ಆಗುವವರೆಗೂ ಗಡ್ಡದ ಬದಿಯ ನಿವಾಸಿಗಳಿಗೆ ಅಲ್ಲಿ ವಾಸಿಸದಂತೆ ಎಸಿ ಸೂಚಿಸಿದ್ದಾರೆ. ತಹಸೀಲ್ದಾರ್ ಅವರಿಂದ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಸ್ಥಳೀಯ ಪಂಚಾಯಿತಿ ಪಿಡಿಒಗೂ ಈ ಕುರಿತು ಸೂಚನೆ ನೀಡಿದ್ದಾರೆ.

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...