ವರ್ಧಂತಿ ಉತ್ಸವದಲ್ಲಿ ಸ್ವರ್ಣವಲ್ಲೀ ಶ್ರೀಗಳಿಂದ ರಕ್ತದಾನ

ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ವರ್ಧಂತಿ ಉತ್ಸವ ಮಂಗಳವಾರ ನಡೆಯಿತು. ಇದರ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ಸ್ವಾಮೀಜಿ ರಕ್ತದಾನ ಮಾಡಿದರು.

ಉತ್ಸವ ಅಂಗವಾಗಿ ಬೆಳಗ್ಗೆ ಸಹಸ್ರಾವರ್ತನ ಅಥರ್ವಶೀರ್ಷ ಪಾರಾಯಣ ಹಾಗೂ ಹವನ, ಗಣವಹನ, ಶ್ರೀಸೂಕ್ತ ಪುರುಷ ಸೂಕ್ತ ಪಾರಾಯಣ ಮತ್ತು ಹವನ, ಮಹಾಮೃತ್ಯಂಜಯ ಜಪ, ಹವನ, ಗ್ರಹ ಶಾಂತಿ, ಆಯುಷ್ಯಚರು ಶಾಂತಿ ನಡೆದವು. ಬಳಿಕ ಆರೋಗ್ಯ ಉಚಿತ ತಪಾಸಣೆ, ಔಷಧ ವಿತರಣೆ ಜತೆಗೆ ರಕ್ತದಾನ ಶಿಬಿರ ನಡೆಯಿತು.

ಗ್ರಾಮಾಭ್ಯುದಯ, ಸ್ವರ್ಣವಲ್ಲೀ ಮಹಾ ಸಂಸ್ಥಾನ, ಟಿಎಸ್​ಎಸ್ ಆಸ್ಪತ್ರೆ, ವಿವಿಧ ಸೀಮಾ ಪರಿಷತ್ತುಗಳು, ತಾಲೂಕು ಆರೋಗ್ಯ ಇಲಾಖೆ, ಸ್ಥಳೀಯ ಸೊಸೈಟಿಗಳು, ಕೃಷಿ ಪ್ರತಿಷ್ಠಾನ, ಜಾಗೃತ ವೇದಿಕೆ, ಶ್ರೀದೇವಿ ಶಿಕ್ಷಣ ಸಂಸ್ಥೆ, ಸಾಮ್ರಾಟ್ ಹೋಟೆಲ್​ನ ಗೋಳಿಕೊಪ್ಪ ಸಹೋದರರ ಜಂಟಿ ಸಹಭಾಗಿತ್ವದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಆರೋಗ್ಯ ತಪಾಸಣೆಯಲ್ಲಿ ಡಾ. ಅರುಣ ಶೆಟ್ಟಿ, ಡಾ. ಜ್ಞಾನಪ್ರಕಾಶ ಬಿ. ಕಾರಂತ, ಡಾ. ಪಿ.ಎಸ್. ಹೆಗಡೆ, ಡಾ. ಶುಭಮಂಗಳಾ ಹೆಗಡೆ ಇತರರು ಪಾಲ್ಗೊಂಡರು. ಮಠದ ಕಾರ್ಯಾಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಎಂ.ಆರ್. ಹೆಗಡೆ ಮತ್ತಿಹಳ್ಳಿ, ಗ್ರಾಮಾಭ್ಯುದಯ ಅಧ್ಯಕ್ಷ ಶಿವಾನಂದ ದೀಕ್ಷಿತ, ಕಾರ್ಯದರ್ಶಿ ಸಂತೋಷ ಭಟ್ಟ ಕೋಡಿಗಾರ, ಎಂ.ಕೆ. ಹೆಗಡೆ ಗೋಳಿಕೊಪ್ಪ ಇತರರಿದ್ದರು.

Leave a Reply

Your email address will not be published. Required fields are marked *