ಶೃಂಗೇರಿ: ದಾರ್ಶನಿಕರ ವಿಚಾರಧಾರೆಯನ್ನು ಕೇಳುವ ಮನಸ್ಸುಗಳು ಹೆಚ್ಚಾಗಬೇಕು. ಸಮಾಜವನ್ನು ತಿದ್ದುವ ಕೆಲಸ ಮಾಡಿದ ವಚನ ಸಾಹಿತ್ಯ ಇಂದಿಗೂ ಶ್ರೇಷ್ಠ. ಸರ್ವರಿಗೂ ಸಮಬಾಳು-ಸಮಪಾಲು ಎಂಬ ಶರಣರ ತತ್ವವನ್ನು ಅಳವಡಿಸಿಕೊಂಡ ಮಡಿವಾಳ ಮಾಚಿದೇವ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು ಎಂದು ತಹಸೀಲ್ದಾರ್ ಅನುಪ್ ಸಂಜೋಗ್ ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬುಧವಾರ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಚಿದೇವರಿಗೆ ಅಪಾರ ಜ್ಞಾನವಿತ್ತು. ಉತ್ತಮ ಗುರುಗಳ ಬೋಧನೆ ಅವರಿಗೆ ದೊರಕಿತ್ತು. 12ನೇ ಶತಮಾನದಲ್ಲಿ ಜ್ಞಾನ ಪಸರಿಸಿದವರಲ್ಲಿ ಅಂಬಿಗರ ಚೌಡಯ್ಯ, ಬಸವಣ್ಣ, ಮಡಿವಾಳ ಮಾಚಿದೇವರು ಶ್ರೇಷ್ಠರು. ಹಿಂದುಳಿದ ಹಾಗೂ ಶ್ರಮಜೀವಿಗಳ ಸಮಾನತೆಗೆ ಸಾಮಾಜಿಕ ಕ್ರಾಂತಿ ಮಾಡಿದವರಲ್ಲಿ ಮಾಚಿದೇವ ಒಬ್ಬರು. ಮೇಲು-ಕೀಲು, ಬಡವರು, ಸಾಮಾಜಿಕ ಬಹಿಷ್ಕಾರ ಹಾಗೂ ಶೋಷಣೆ ಬಗ್ಗೆ ಚಿಂತಿಸಿ ವ್ಯಕ್ತಿ-ವ್ಯಕ್ತಿಗಳ ಬಗ್ಗೆ ಇರುವ ಅಂತರ ಹೋಗಲಾಡಿಸಲು ಹೋರಾಡಿದರು ಎಂದರು.
ನಿವೃತ್ತ ಶಿಕ್ಷಕ ಜನಾರ್ದನ್ ಮಂಡಗಾರು ಮಾತನಾಡಿ, ಆಧುನಿಕ ಜೀವನದಲ್ಲಿ ಅಧಿಕಾರ, ಹಣಕ್ಕಾಗಿ ನಾವು ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ದೇಶದಲ್ಲಿ ಹುಟ್ಟಿದ ಸಂತರು, ಸಂಸ್ಕೃತಿ ಹಾಗೂ ಇತಿಹಾಸ ಮುಂತಾದ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ನಮಗೆ ಇರಬೇಕು. ಸಮಾಜಕ್ಕೆ ಮಾಚಿದೇವ ನೀಡಿದ ಕೊಡುಗೆ ಅನನ್ಯ ಎಂದರು.
ಮಡಿವಾಳ ಸಮಾಜದ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಮಾಚಿದೇವ ಅವರು ಸಮಾಜದ ಕೆಡಕನ್ನು ನಿವಾರಿಸುವ ಕೆಲಸ ಮಾಡಿದ್ದಾರೆ. ಆತ್ಮದ ಕೊಳೆ ಒಗೆದು ಅಂತರಂಗವನ್ನು ಶುದ್ಧವಾಗಿರಿಸಲು ಮಡಿವಾಳ ಜನಾಂಗದ ಮಾಚಿದೇವ ಮಾಡಿದ ಕಾರ್ಯ ಶ್ಲಾಘನೀಯ. ಜನರಲ್ಲಿ ಭಕ್ತಿ ಚಿಂತನೆಗಳನ್ನು ಮೂಡಿಸಿದ ಮಾಚಯ್ಯ ಮೂರು ಲಕ್ಷಕ್ಕೂ ಹೆಚ್ಚು ವಚನಗಳನ್ನು ಬರೆದಿದ್ದಾರೆ. ಶರಣರ ಸಂಸ್ಕೃತಿಯನ್ನು ಜೀವನದಲ್ಲಿ ಮೈಗೂಡಿಸಿಕೊಂಡು ಸಮಾಜದ ತಳಮಟ್ಟದ ಜನರನ್ನು ಮೇಲೆತ್ತುವ ಕಾಯಕಕ್ಕಾಗಿ ಅಹಿಂಸಾ ತತ್ವ ಅಳವಡಿಸಿಕೊಂಡ ಮಾಚಿದೇವ ಅವರ ತತ್ವ ಸರ್ವರಿಗೂ ಮಾದರಿ ಎಂದರು.
ತಾಪಂ ಇಒ ಸುದೀಪ್, ಪಪಂ ಮುಖ್ಯಾಧಿಕಾರಿ ಸರಸ್ವತಿ ಷಣ್ಮುಗ ಸುಂದರಿ, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ನೌಕರರ ಸಂಘದ ಅಧ್ಯಕ್ಷ ಬಿ.ಜಿ.ನಾಗೇಶ್, ಕೆಡಿಪಿ ಸದಸ್ಯ ಪುಟ್ಟಪ್ಪ ಹೆಗ್ಡೆ, ಕಂದಾಯ ಅಧಿಕಾರಿ ಪ್ರವೀಣ್, ಮಡಿವಾಳ ಸಂಘದ ಅಧ್ಯಕ್ಷ ಕೃಷ್ಣಪ್ಪ, ಪದಾಧಿಕಾರಿಗಳಾದ ವಾಸು, ಸುರೇಶ ಇದ್ದರು.
ವಚನ ಸಾಹಿತ್ಯ ಇಂದಿಗೂ ಶ್ರೇಷ್ಠ

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional
devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…
ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ಸಾಕು! Watermelon
Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…
ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol
Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…