ವಚನ ಸಂವಿಧಾನದ ಮೇರುಪುರುಷ ಚನ್ನಬಸವಣ್ಣ

blank

ಚಿತ್ರದುರ್ಗ: ಮಾನವನ ದೇಹ ರಚನೆ, ಕಾರ್ಯನಿರ್ವಹಣೆ ಕುರಿತು ನೂರಾರು ವರ್ಷಗಳ ಹಿಂದೆಯೇ ಅಗಾಧ ಪಾಂಡಿತ್ಯ ಹೊಂದಿ, ವಚನಗಳ ಮೂಲಕ ಅರಿವು ಮೂಡಿಸಿದ ಅವಿರಳಜ್ಞಾನಿ ಚನ್ನಬಸವಣ್ಣ ಮೇರುಪುರುಷ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಶ್ರೀ ಬಣ್ಣಿಸಿದರು.

ಮುರುಘಾಮಠದ ಆವರಣದಲ್ಲಿ ಶನಿವಾರ ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಅರಿವು ಮತ್ತು ಜ್ಞಾನದ ಸಂಗಮವಾಗಿದ್ದ ಚನ್ನಬಸವಣ್ಣ ಕೋಟಿಗೊಬ್ಬರು. ಭರತಖಂಡ ಕಂಡ ಮಹಾ ಮೇಧಾವಿ ಎಂದು ವರ್ಣಿಸಿದರು.

ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಶ್ರೀ ಮಾತನಾಡಿ, ಅಹಂಕಾರ, ಅವಿವೇಕ, ಅಪ್ರಭುದ್ಧ ನಡೆಯಿಂದ ಅಜ್ಞಾನ ಹೆಚ್ಚುತ್ತದೆ. ಅದರ ನಾಶಕ್ಕಾಗಿ ವಿನಯ, ಅರಿವಿನ ಮೂಲಕ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕಿದೆ. ಸಮಾಜಕ್ಕೆ ಕಂಟಕವಾಗದೆ, ರತ್ನತ್ರಯಗಳಾಗಬೇಕಿದೆ ಎಂದು ಸಲಹೆ ನೀಡಿದರು.

ಬೆಂಗಳೂರಿನ ಸ್ವ್ಯಾನ್‌ ಪ್ರಿಂಟರ್ಸ್‌ನ ಕೃಷ್ಣಮೂರ್ತಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಅಖಿಲ ಭಾರತ ಲಿಂಗಾಯತ ಸಭಾದ ಬಸವರಾಜ ಕಟ್ಟಿ, ನಿವೃತ್ತ ಪ್ರಾಚಾರ್ಯ ಎಸ್.ಎಂ.ಕೊಟ್ರೇಶಪ್ಪ, ಜಾಲಿಕಟ್ಟೆ ರುದ್ರಪ್ಪ, ಕೆ.ಎಂ.ರಮೇಶ್, ಬಸವರಾಜ ಗಡ್ಡೆಪ್ಪ, ಎಂ.ಜಿ.ಕೊಟ್ರೇಶ್, ನಿಟುವಳ್ಳಿ ಮಹಾಂತೇಶ್, ಬಸವನಗೌಡ, ಆನಂದ್, ನವೀನ್ ಮಸ್ಕಲ, ಆರೋಗ್ಯ ಇಲಾಖೆ ಮಂಜುನಾಥ್ ಇತರರಿದ್ದರು.

Share This Article

Health Tips: ಚಳಿಗಾಲದಲ್ಲಿ ಕೆಮ್ಮು, ನೆಗಡಿ ಹೋಗಲಾಡಿಸಲು ಹೀಗೆ ಮಾಡಲೇಬೇಕು!

Health Tips:   ಚಳಿಗಾಲ   ಶುರುವಾಗಿದೆ ಎಂದರೆ ಸೀಸನಲ್ ಕಾಯಿಲೆಗಳೂ ನಮ್ಮನ್ನು ಕಾಡುತ್ತಿವೆ. ಅದರಲ್ಲೂ ಶೀತ ವಾತಾವರಣದಲ್ಲಿ…

ವಿಟಮಿನ್​ ಡಿ ಕೊರತೆ: ನೀವು ಈ ಆಹಾರಗಳನ್ನು ಸೇವಿಸಿದ್ರೆ ಸಾಕು ಬೇಕಾದಷ್ಟು ಡಿ ವಿಟಮಿನ್ ಪಡೆಯಬಹುದು! Vitamin D

Vitamin D : ಚಳಿಗಾಲದಲ್ಲಿ ದೀರ್ಘಕಾಲದ ನೋವು ಮತ್ತು ಮೂಳೆ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ…

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…