ವಚನ ಆಧ್ಯಾತ್ಮಿಕ ಮಾರ್ಗಕ್ಕೆ ದಾರಿದೀಪ: ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

mysore

ಮೈಸೂರು: ಲೌಕಿಕ ಜೀವನದಲ್ಲಿ ವಚನ ಸಂದೇಶವು ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗಲು ದಾರಿ ದೀಪವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ

ಆಯೋಜಿಸಿದ್ದ ‘ಶಿವಶರಣೆಯರು-ಸಮಕಾಲೀನ ಸಂದರ್ಭ’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣ. ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ಹಲವರು ಅನುಭವ ಮಂಟಪಕ್ಕೆ ಬಂದವರಿಗೆ ಆಧ್ಯಾತ್ಮಿಕ ಅರಿವು ಮೂಡಿಸಿದ್ದರು. ಯಾವುದೇ ವಿಚಾರವನ್ನು ಮುಕ್ತವಾಗಿ ಹಂಚಿಕೊಂಡಾಗ ಮನುಷ್ಯನ ಜ್ಞಾನ ವಿಸ್ತಾರವಾಗುತ್ತದೆ.

ಹೀಗಾಗಿ, ಸಕ್ರಿಯ ಭಾಗವಹಿಸುವಿಕೆಯಿಂದ ಜ್ಞಾನವಂತರಾಗಲು ಸಾಧ್ಯ ಎಂದರು.
ಆಧುನಿಕ ಕಾಲಘಟ್ಟದಲ್ಲೂ ವಚನಗಳು ಪ್ರಸ್ತುತವಾಗಿದೆ. ಇದನ್ನು ಪ್ರತಿಯೊಬ್ಬರು ಅರಿಯಬೇಕಾಗಿದೆ. ಜತೆಗೆ ಪಾಲನೆಯನ್ನೂ ಮಾಡಬೇಕಿದೆ ಎಂದರು.

ಹುಣಸೂರು ಡಿ.ದೇವರಾಜ ಅರಸು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಬಿ.ವಿ.ವಸಂತಕುಮಾರ್ ಮಾತನಾಡಿ, ಶರಣ-ಶರಣೆಯ ವಿಚಾರಧಾರೆ ಸಾರ್ವಕಾಲಿಕರು. ಸಮಕಾಲೀನ ಸಂದರ್ಭವನ್ನು ಶರಣ ಸಾಹಿತ್ಯವನ್ನು ಅರ್ಥೈಸಿಕೊಳ್ಳಬೇಕು. ಮಹಾಕಾವ್ಯಕ್ಕಿಂತ ಬದುಕಿನ ಅನುಭವ ದೊಡ್ಡದು. ವಚನ ಸಾಹಿತ್ಯದ ಮೂಲ ಆಶಯವನ್ನು ಮರೆಯಬಾರದು ಎಂದರು.

ಭಕ್ತಿಯೆಂಬುದು ಹುಟ್ಟಿಕೊಳ್ಳಬೇಕಾದರೆ ಕಾಯಕವೆಂಬುದು ಇರಲೇಬೇಕು. ಸಂಘರ್ಷವಿಲ್ಲದೆ ಸಾಮರಸ್ಯವಿಲ್ಲ. ಇಂದಿನ ದಿನಮಾನದಲ್ಲಿ ಸಮುದಾಯಗಳು ತುಂಡಾಗುತ್ತಿರುವುದು ದುಃಖಕ್ಕೆ ಕಾರಣವಾಗುತ್ತಿದೆ. ಒಂದಾಗುವುದು ಸುಖಕ್ಕೆ ಕಾರಣವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಶಿಕ್ಷಣದಿಂದ ವಿಕಾಸ ಆಗುತ್ತಿದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ನಡೆನುಡಿ ಶುದ್ಧವಾಗಿಲ್ಲದವರು ವಚನಗಳನ್ನು ಓದಬಾರದು. ಶಿವಶರಣೆಯರ ಮುಖ್ಯ ಸಿದ್ಧಾಂತ ಎಂದರೆ ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು ಎಂದು ಹೇಳಿದರು.

ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಮಾತನಾಡಿ, ಮುಕ್ತ ವಿವಿಯಲ್ಲಿ ಶರಣ ಸಾಹಿತ್ಯ ಕೋರ್ಸ್ ಶುರು ಮಾಡಬೇಕು. ಇದರಿಂದ ಸಾಮಾಜಿಕ ಬದುಕು ಸುಧಾರಿಸಲಿದೆ. ಶರಣೆಯರ ಪ್ರಬುದ್ಧ ಚಿಂತನೆಗಳು, ಪರಿಶುದ್ಧವಾದ ಬದುಕು ಎಲ್ಲರಿಗೂ ಸಿಗಬೇಕು ಎಂದರು.

ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಪರೀಕ್ಷಾಂಗ ಕುಲಸಚಿವ ಡಾ.ಎಚ್.ವಿಶ್ವನಾಥ್,ಡೀನ್‌ಗಳಾದ ಪ್ರೊ.ಎನ್.ಲಕ್ಷ್ಮೀ, ಪ್ರೊ.ಎಂ.ರಾಮನಾಥಂನಾಯ್ಡು, ಹಣಕಾಸು ಅಧಿಕಾರಿ ಡಾ.ಎಸ್.ನಿರಂಜನ್‌ರಾಜ್, ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷೆ ಪ್ರೊ.ಟಿ.ಎಂ.ಗೀತಾಂಜಲಿ, ಕಾರ್ಯಕ್ರಮ ಸಂಯೋಜಕಿ ಡಾ.ಜ್ಯೋತಿ ಶಂಕರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರಾಧ್ಯಕ್ಷ ಮ.ಗು.ಸದಾನಂದಯ್ಯ ಇತರರು ಇದ್ದರು.

*1

Share This Article

ಕೂದಲು ಬಿಳಿಯಾಗುವುದನ್ನು ತಡೆಯುವುದೇಗೆ ಎಂಬ ಚಿಂತೆಯೇ?; ಇಲ್ಲಿದೆ ಸಿಂಪಲ್​ ವಿಧಾನ | Health Tips

10 ವರ್ಷದಿಂದ 25 ರಿಂದ 30 ರವರೆಗೆ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಕಾಲಿಕ ಬಿಳಿ ಕೂದಲಿನಿಂದ…

ನೀವು ಈ ನಕ್ಷತ್ರದಲ್ಲಿ ಹುಟ್ಟಿದ್ದೀರಾ? ಹಾಗಾದ್ರೆ ಈ ಡಿಸೆಂಬರ್​ ತಿಂಗಳಲ್ಲಿ ನಿಮ್ಮ ಅದೃಷ್ಟ ಖುಲಾಯಿಸಲಿದೆ! Birth of Stars

Birth of Stars : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ…

ರಾಗಿಮುದ್ದೆಯಿಂದ ಇಷ್ಟೆಲ್ಲಾ ಪ್ರಯೋಜನ ಇದ್ಯಾ!; ತಿಳಿದ್ರೆ ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಮಿಸ್​ ಮಾಡೋದೆ ಇಲ್ಲ | Health Tips

ಚಳಿಗಾಲವು ಆರಂಭವಾಗಿದ್ದು ಭವಿಷ್ಯದಲ್ಲಿ ಈ ಬಾರಿ ಹಿಂದಿನ ವರ್ಷಗಳಿಗಿಂತ ತೀವ್ರ ಚಳಿ ಇರುತ್ತದೆ. ಇತ್ತೀಚಿನ ದಿನಗಳಲ್ಲಿ…