More

    ವಚನಗಳು ಸತ್ಯ, ಶುದ್ಧ

    ಬಸವಕಲ್ಯಾಣ: ಬಸವಾದಿ ಶರಣರು ರಚಿಸಿದ ವಚನಗಳು ಶಾಂತಿ ಸಮಾಧಾನ ಸಂತೋಷದಿಂದ ಕೂಡಿವೆ. ಅವುಗಳಲ್ಲಿನ ಜ್ಞಾನ ತಿಳಿದು ಬದುಕುವುದೇ ಶರಣ ಜೀವನ ಎಂದು ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ನುಡಿದರು.

    ಅಂತಾರಾಷ್ಟಿಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಆಶ್ರಯದಲ್ಲಿ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಶರಣು ಶರಣಾರ್ಥಿ ಸಮಾವೇಶದಲ್ಲಿ ಶರಣ ಜೀವನ ಕುರಿತು ಅನುಭಾವ ನೀಡಿ, ಶರಣರು ಆತ್ಮ ಸಾಕ್ಷಿಯಾಗಿ ಬದುಕಿದವರು. ಅವರು ರಚಿಸಿದ ವಚನಗಳು ಸತ್ಯ, ಶುದ್ಧ. ಸರ್ವಕಾಲಿಕ ಎಂದು ಹೇಳಿದರು.

    ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, ಷಟಸ್ಥಳಗಳಲ್ಲಿ ಐದನೇ ಸ್ಥಲವೇ ಶರಣ ಸ್ಥಲವಾಗಿದೆ. ಶರಣನು ಪೃಥ್ವಿ, ಅಪ್ಪು, ಅಗ್ನಿಯ ಗುಣ ಹೊಂದಿರುತ್ತಾನೆ. ನಮಗಿಂದು ಒಳ್ಳೆಯದು ಮಾಡಬೇಕೆಂಬ ಸದಾಸೆ ಇರಬೇಕು. ಕೆಟ್ಟದ್ದು ಮಾಡುವ ದುರಾಸೆ ಇರಬಾರದು ಎಂದರು.

    ಅಂಜನಾ ಜಾಧವ್ ಧ್ವಜಾರೋಹಣ ನೆರವೇರಿಸಿದರು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಭೋಸಗಾ ವಚನ ಸಂಗೀತ ನಡೆಸಿಕೊಟ್ಟರು. ಶಾಂತಿನಿಕೇತನ ಪ್ರೌಢಶಾಲೆ ಮಕ್ಕಳಿಂದ ನಡೆದ ವಚನ ನೃತ್ಯಜನಮನ ಸೆಳೆಯಿತು. ೨೦೨೩ರ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಕರಪತ್ರ ಬಿಡುಗಡೆ ಮಾಡಲಾಯಿತು. ಜೆಬಿಕೆ ೭೮ ಗೆಳೆಯರ ಬಳಗದವರು ದಾಸೋಹಗೈದರು.

    ಸಿಪಿಐ ಅಲಿಸಾಬ್, ಶ್ರೀ ವೀರೇಶಾನಂದ ಸ್ವಾಮೀಜಿ ಮಾತನಾಡಿದರು. ಬಿಡಿಪಿಸಿ ನಿರ್ದೇಶಕ ಅಶೋಕ ನಾಗರಾಳೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಸುರೇಶ ಅಕ್ಕಣ್ಣ, ಎನ್‌ಎಸ್‌ಎಸ್‌ಕೆ ನಿರ್ದೇಶಕ ಶಿವಬಸಪ್ಪ ಚನ್ನಮಲ್ಲೆ, ಲಿಂಗಾಯತ ಮಹಾಸಭಾ ಒಕ್ಕೂಟದ ಉಪಾಧ್ಯಕ್ಷ ಸಂಜುಕುಮಾರ ದೇಗಲೂರೆ, ಯುವ ಮುಖಂಡ ಆಕಾಶ ಖಂಡಾಳೆ ಉಪಸ್ಥಿತರಿದ್ದರು. ಸಂತೋಷ ಮಡಿವಾಳ ಸ್ವಾಗತಿಸಿದರು. ಸಂಗಮೇಶ ತೋಗರಖೇಡೆ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts