ಹೊಸಪೇಟೆ: ವಕ್ಪ್ ಮಂಡಳಿಯಿAದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಆಗ್ರಹಿಸಿ ಇಲ್ಲಿನ ರೈತ ಸಂಘದಿAದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ವಕ್ಸ್ ಮಂಡಳಿ ರೈತರಿಗೆ ಯಾವುದೇ ಸೂಚನೆ ನೀಡದೇ ಅವರ ಆಸ್ತಿಗಳ ಪಹಣಿಗಳಲ್ಲಿ ವಕ್ಫ್ ಮಂಡಳಿಯ ಹೆಸರನ್ನು ನಮೂದಿಸಿ, ನೋಂದಣಿಗೆ ಮುಂದಾಗಿರುವುದು ರೈತ ವಿರೋಧಿ ಕ್ರಮವಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಸಹ ರೈತರ ಆಸ್ತಿಗಳ ಪಹಣಿಗಳಲ್ಲಿ ವಕ್ಸ್ ಮಂಡಳಿಯ ಹೆಸರು ನಮೂದು ಆಗಿದೆ. ಅಂದಾಜು 400 ರಿಂದ 500 ವರ್ಷಗಳಿಂದ ಭೂಮಿಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ವಕ್ಸ್ ಮಂಡಳಿಯ ಏಕರೂಪದ ಕಾನೂನಿನ ಅಡಿಯಲ್ಲಿ ದೇಶದ ಅನ್ನದಾತರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ರೈತರಿಗೆ ವಕ್ಸ್ ಮಂಡಳಿಯಿAದ ಆಗುವ ಅನ್ಯಾಯವನ್ನು ತಡೆಯಬೇಕು. ಇಲ್ಲವಾದಲ್ಲಿ ವಕ್ಸ್ ಮಂಡಳಿ ವಿರುದ್ಧ ರೈತರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ ನಾಯಕ, ನಿರ್ದೇಶಕರಾದ ಉತ್ತಂಗಿ ಕೊಟ್ರೇಶ್, ರಾಂಪುರ ಯಲ್ಲಪ್ಪ, ಜೋಗಯ್ಯ, ಪರಸಪ್ಪ, ಗಾದಿಲಿಂಗಪ್ಪ, ಪ್ರಮುಖರಾದ ಬಿಸಾಟಿ ಕಣಿಮೆಪ್ಪ, ಬೆಳಗೋಡ್ ಅಂಬಣ್ಣ, ತಳವಾರ್ ಮಹೇಶ್, ಕಂಪಿ ್ಲಕಣಿಮೆಪ್ಪ ಇತರರಿದ್ದರು.