ಲ್ಯಾಬ್, ಎವಿ ರೂಮ್ ಲೋಕಾರ್ಪಣೆ

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆ ರೇಣುಕಾನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಕ್ಕೆ ವಿಜಯಾ ಬ್ಯಾಂಕ್ ವತಿಯಿಂದ ನೀಡಲಾದ ಕಂಪ್ಯೂಟರ್ ಲ್ಯಾಬ್ ಹಾಗೂ ಎ.ವಿ. ರೂಮ್ಳನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.

14 ಕಂಪ್ಯೂಟರ್ ಹಾಗೂ ಎ.ವಿ. ರೂಮ್ ಮತ್ತು ವಿನ್​ವಿದ್ಯಾ ಶೈಕ್ಷಣಿಕ ಆಪ್​ಗಳನ್ನು ವಿದ್ಯಾರ್ಥಿಗಳ ಕಲಿಕೆಗೆ ಬಿಡುಗಡೆ ಮಾಡಿ ಮಾತನಾಡಿದ ವಿಜಯಾ ಬ್ಯಾಂಕ್ ಎಂಡಿ ಹಾಗೂ ಸಿಇಒ ಆರ್.ಎ. ಶಂಕರನಾರಾಯಣನ್, ದೇಶದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ವಿಜಯಾ ಬ್ಯಾಂಕ್ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದೆ ಎಂದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ಬ್ಯಾಂಕ್ ನೆರವು ನೀಡಲಿದೆ. ವಿದ್ಯಾರ್ಥಿಗಳು ಇಂಥ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.

ವಿದ್ಯಾಕೇಂದ್ರದ ಆಡಳಿತ ಮಂಡಳಿಯ ವೀರೇಂದ್ರ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಸದಸ್ಯ ಅಶೋಕ ಸೋನಕರ, ಬ್ಯಾಂಕ್ ಅಧಿಕಾರಿಗಳಾದ ನಿರ್ಮಲಾ ಶ್ರೀಧರ, ಸುಬ್ರತಕುಮಾರ, ಬ್ಯಾಪ್ಟಿಸ್ಟ್ ಲೋಬೋ ಇತರರು ಇದ್ದರು.

ಶ್ವೇತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಾಧ್ಯಾಪಕಿ ಜ್ಯೋತಿ ಗುಡಿ ಪರಿಚಯಿಸಿದರು. ಗುರುಬಾಯಿ ಮಾತಾಜಿ ವಂದಿಸಿದರು.