ಗಂಗಾವತಿ: ಬೆಂಗಳೂರಿನ ಬಿಡದಿ ಬಳಿ ನಡೆದಿರುವ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ವಿವಿಧ ಶಾಲೆ ವಿದ್ಯಾರ್ಥಿಗಳೊಂದಿಗೆ ಶುಕ್ರವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಮಾತನಾಡಿ, 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಪಾರದರ್ಶಕ ತನಿಖೆ ನಡೆಸಬೇಕಾಗಿದ್ದ ಪೊಲೀಸರು ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದು, ವಿಚಾರಿಸುವ ಸಾರ್ವಜನಿಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ವಿಚಾರಣೆ ನೆಪದಲ್ಲಿ ಪೊಲೀಸರು ಪಾಲಕರನ್ನು ಶೋಷಿಸುತ್ತಿದ್ದು, ಎ್ಐಆರ್ ಸರಿಯಾಗಿ ದಾಖಲಿಸಿಲ್ಲ. ಪ್ರಕರಣ ಸೂಕ್ತ ತನಿಖೆಗೊಳಪಡಿಸಬೇಕಿದ್ದು, ಅತ್ಯಾಚಾರಿಗಳನ್ನು ಪತ್ತೆ ಹಚ್ಚಬೇಕು. ನಿರ್ಲಕ್ಷ್ಯದಿಂದ ವರ್ತಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳನ್ನು ವಜಾಗೊಳಿಸಬೇಕು. ಎಲ್ಲ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕಳ ನಿಯಂತ್ರಣ ಸಮಿತಿ ರಚಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ನಾಗರಾಜ, ಬಾಲಾಜಿ, ಹುಸೇನಪ್ಪ, ಮಂಜುನಾಥ, ಬಾಳಪ್ಪ ಹುಲಿಹೈದರ್, ಶರ್ೀ, ರಮೇಶ, ಶರಣಬಸವ, ಮಾರುತಿ, ಮಹೇಶ, ಅಜಯ್ ಸೇರಿ ಸಿಪಿಐ(ಎಂ), ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಸಿಐಟಿಯು ತಾಲೂಕು ಘಟಕದ ಪದಾಧಿಕಾರಿಗಳಿದ್ದರು.