ಪ್ಯಾರಿಸ್: ಕಳೆದ ವರ್ಷ ಕತಾರ್‌ನಲ್ಲಿ ನಡೆದ ಫಿಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವನ್ನು ಚಾಂಪಿಯನ್ ಪಟ್ಟದತ್ತ ಮುನ್ನಡೆಸುವ ಮೂಲಕ ವೃತ್ತಿಜೀವನದ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಂಡಿದ್ದ ಲಿಯೋನೆಲ್ ಮೆಸ್ಸಿ ಸೋಮವಾರ ದಾಖಲೆಯ ಎಂಟನೇ ಬಾರಿಗೆ ಬ್ಯಾಲನ್ ಡಿಓರ್ (ಚಿನ್ನದ ಚೆಂಡು) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ್ರಾನ್ಸ್‌ನ ಕೈಲಿಯಾನ್ ಎಂಬಪೆ, ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಎರ್ಲಿಂಗ್ ಹಾಲೆಂಡ್ ಅವರನ್ನು ಹಿಂದಿಕ್ಕಿ ಮೆಸ್ಸಿ ಪ್ರಶಸ್ತಿ ಒಲಿಸಿಕೊಂಡರು. ‘ಇಂದು ನಾನು ನನ್ನನ್ನು ಆನಂದಿಸುತ್ತಿದ್ದೇನೆ. ಇದು ನನ್ನನ್ನು ಎಂದಿಗೂ ಬಿಟ್ಟು ಹೋಗದ ಸಂತೋಷವಾಗಿದೆ ಮತ್ತು ಮುಂಬರುವ ಹಲವು ವರ್ಷಗಳವರೆಗೆ ಇದನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ’ ಎಂದ ಮೆಸ್ಸಿ, ಗೆಲುವನ್ನು ಸಾಧ್ಯವಾಗಿಸಿದ ಅರ್ಜೆಂಟೀನಾ ಕೋಚ್, ತಂಡದ ಸಹ ಆಟಗಾರರಿಗೆ ಧನ್ಯವಾದ ತಿಳಿಸಿದರು. ಮಹಿಳೆಯರ ವಿಭಾಗದಲ್ಲಿ ಸ್ಪೇನ್‌ನ ಐತಾನಾ ಬೋನ್ಮಾತಿಗೆ ಪ್ರಶಸ್ತಿ ಒಲಿದಿದೆ. ಇದಕ್ಕೂ ಮುನ್ನ ಲಿಯೋನೆಲ್ ಮೆಸ್ಸಿ 2009, 2010,2011, 2012, 2015, 2019 ಹಾಗೂ 2021ರಲ್ಲಿ ಬ್ಯಾಲನ್ ಡಿಓರ್ ಪ್ರಶಸ್ತಿ ಜಯಿಸಿದ್ದರು. ಕ್ರಿಶ್ಚಿಯಾನೊ ರೊನಾಲ್ಡೊ ಐದು ಬಾರಿ ಈ ಪ್ರಶಸ್ತಿ ಜಯಿಸಿದ್ದಾರೆ.
ಲಿಯೋನೆಲ್ ಮೆಸ್ಸಿಗೆ ದಾಖಲೆಯ 8ನೇ ಬಾರಿ ಬ್ಯಾಲನ್ ಡಿಓರ್ ಪ್ರಶಸ್ತಿ ಮುಕುಟ

You Might Also Like
ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips
ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…
ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…
ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes
grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…