ಲಿಫ್ಟ್ ಯೋಜನೆಗೆ ಸಂಕಷ್ಟ

ರಾಮನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ರೇವಣಸಿದ್ದೇಶ್ವರ ದೇವಾಲಯಕ್ಕೆ ಲಿಫ್ಟ್ ನಿರ್ವಿುಸುವ ಕಾಮಗಾರಿ ಸ್ಥಗಿತಕೊಂಡಿದ್ದು, ಯೋಜನೆ ನನೆಗುದಿಗೆ ಬಿದ್ದಿದೆ. ಸ್ವಂತ ಖರ್ಚಿನಿಂದ ಲಿಫ್ಟ್ ನಿರ್ವಿುಸಿಕೊಡಲು ಪರವಾನಗಿ ಪಡೆದಿದ್ದ ದಾನಿ ಹಿಂದೆ ಸರಿದಿರುವುದು ಇದಕ್ಕೆ ಕಾರಣ.

ತಾಲೂಕಿನ ಅವ್ವೇರಹಳ್ಳಿಯಲ್ಲಿರುವ ರೇವಣಸಿದ್ದೇಶ್ವರ ದೇವಾಲಯ ಮತ್ತು ಅದರ ಪಕ್ಕದಲ್ಲಿರುವ ಬೆಟ್ಟದ ಸುಂದರ ಪರಿಸರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. 156 ಅಡಿ ಎತ್ತರದ ಗುಡ್ಡದ ಮೇಲೆ ನೆಲೆಸಿರುವ ರೇವಣಸಿದ್ದೇಶ್ವರನ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ವೃದ್ಧರು, ಮಹಿಳೆಯರು, ಮಕ್ಕಳು ಗುಡ್ಡದ ಮೇಲ್ಭಾಗಕ್ಕೆ ತೆರಳಲು ನೂರಾರು ಮೆಟ್ಟಿಲೇರಲು ಸಾಧ್ಯವಾಗದೆ ಗುಡ್ಡದ ಕೆಳಭಾಗದಲ್ಲಿರುವ ಭೀಮೇಶ್ವರ ದೇವಸ್ಥಾನದಲ್ಲೇ ಪೂಜೆ ಸಲ್ಲಿಸಿ ತೆರಳುತ್ತಾರೆ.

ರಜಾ ದಿನಗಳಲ್ಲಿ ಕ್ಷೇತ್ರಕ್ಕೆ 2ರಿಂದ 3 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಕಾರ್ತಿಕ ಮಾಸದ ಒಂದು ತಿಂಗಳು ನಿತ್ಯ 5-6 ಸಾವಿರ ಭಕ್ತರು ಕ್ಷೇತ್ರದಲ್ಲಿ ವಿವಿಧ ಸೇವೆ ಅರ್ಪಿಸುತ್ತಾರೆ. ಲಕ್ಷ ದೀಪೋತ್ಸವದ ದಿನ 25 ಸಾವಿರಕ್ಕೂ ಅಧಿಕ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಗುಡ್ಡ ಏರಲು ಲಿಫ್ಟ್ ವ್ಯವಸ್ಥೆ ಮಾಡಿದರೆ ಖಂಡಿತ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಹಾಗಾಗಿ ಈ ತಾಣದ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಮುಜರಾಯಿ ಇಲಾಖೆ ರೇವಣಸಿದ್ದೇಶ್ವರ ದೇವಾಲಯಕ್ಕೆ ಲಿಫ್ಟ್ ನಿರ್ವಿುಸುವ ಚಿಂತನೆ ನಡೆಸಿತ್ತು. ಅಷ್ಟರಲ್ಲಿ ಬೆಂಗಳೂರಿನ ಕೆ.ಎಸ್.ವಿಶ್ವನಾಥ ಎಂಬುವರು ಸ್ವಂತ ಖರ್ಚಿನಲ್ಲಿ ಲಿಫ್ಟ್ ನಿರ್ವಿುಸಿ, 5 ವರ್ಷಗಳ ನಿರ್ವಹಣೆ ಮಾಡುವುದಾಗಿ ಸರ್ಕಾರದಿಂದ ಪರವಾನಗಿಯನ್ನೂ ಪಡೆದಿದ್ದರು. 1.95 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಿ 2 ವರ್ಷದ ಹಿಂದೆ ಕಾಮಗಾರಿ ಆರಂಭಿಸಿದ್ದರು. ಆ ಸಂದರ್ಭದಲ್ಲಿ ನೋಟ್ ಬ್ಯಾನ್ ಆಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಈ ನಡುವೆ ಸ್ವಂತ ಖರ್ಚಿನಲ್ಲಿ ಲಿಫ್ಟ್ ನಿರ್ವಿುಸುವುದಾಗಿ ಹೇಳಿದ್ದ ವ್ಯಕ್ತಿ ಪ್ರವಾಸಿಗರಿಂದ ಹಣ ಪಡೆಯುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು. ಇದನ್ನು ಪ್ರಶ್ನಿಸಿದ ಮುಜರಾಯಿ ಅಧಿಕಾರಿಗಳು, ನಿಮ್ಮದೇ ಖರ್ಚಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕೆ ಹೊರತು ಪ್ರವಾಸಿಗರಿಂದ ಹಣ ವಸೂಲಿ ಮಾಡಬಾರದೆಂದು ಎಚ್ಚರಿ ಸಿದ್ದರು. ನಂತರ ಲಿಫ್ಟ್ ಕಾಮಗಾರಿ ಸ್ಥಗಿತಗೊಂಡು 2 ವರ್ಷ ಗತಿಸಿವೆ. ಇದರಿಂದಾಗಿ ಲಿಫ್ಟ್ ನಿರ್ಮಾಣ ಯೋಜನೆ ನೆನೆಗುದಿಗೆ ಬೀಳುವಂತಾಗಿದೆ.

ಕಾಮಗಾರಿಗೆ ಮರುಜೀವ: ಲಿಫ್ಟ್ ನಿರ್ವಿುಸುವ ಯೋಜನೆಗೆ ಮರುಜೀವ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಈ ಸಂಬಂಧ ಸಿದ್ಧಪಡಿಸಿರುವ ಯೋಜನೆ ಮಾಹಿತಿ ಜತೆಗೆ ಕಾಮಗಾರಿಯ ನೀಲಿನಕ್ಷೆಯನ್ನು ಕೇಂದ್ರ ಕಚೇರಿಗೆ ರವಾನಿಸಿ, ಮಂಜೂರಾತಿ ನೀಡುವಂತೆ ಕೋರಲಾಗಿದೆ. ಕಾಮಗಾರಿಗೆ ತಗುಲುವ 1.95 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆಯೂ ಪತ್ರದಲ್ಲಿ ವಿನಂತಿಸಲಾಗಿದೆ. ಇದರಿಂದ ರೇವಣಸಿದ್ದೇಶ್ವರ ದೇವಾಲಯಕ್ಕೆ ಲಿಫ್ಟ್​ನಲ್ಲಿ ತೆರಳುವ ಪ್ರವಾಸಿಗರ ಆಸೆ ಚಿಗುರೊಡೆಯುವಂತಾಗಿದೆ.

ಲಿಫ್ಟ್ ಕಾಮಗಾರಿ ಸ್ಥಗಿತಗೊಂಡ ಬಳಿಕ ವಿಶ್ವನಾಥ ಅವರಿಗೆ ಕಾರಣ ಕೇಳಿ ಪತ್ರ ಬರೆದಿದ್ದೇನೆ. ಆದರೆ, ಕಾಮಗಾರಿ ಮುಂದುವರಿಸಿಲ್ಲ. ಅವರಿಗೆ ಸರ್ಕಾರ ನೀಡಿದ ಪರವಾನಗಿಯನ್ನು ರದ್ದುಪಡಿಸಿ, ಪ್ರವಾಸೋದ್ಯಮ ಇಲಾಖೆಯ ನೆರವಿನಿಂದ ಲಿಫ್ಟ್ ನಿರ್ವಿುಸಲು ಮೇಲಧಿಕಾರಿಗಳ ಜತೆಗೆ ರ್ಚಚಿಸಿ, ಕ್ರಮ ಕೈಗೊಳ್ಳುತ್ತೇನೆ.

| ಮಂಗಲ ಇಒ, ಮುಜರಾಯಿ ಇಲಾಖೆ, ರಾಮನಗರ

 

ರೇವಣಸಿದ್ದೇಶ್ವರ ಬೆಟ್ಟಕ್ಕೆ ಲಿಫ್ಟ್ ನಿರ್ವಿುಸುವುದರಿಂದ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತದೆ. ಹಾಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಲಿಫ್ಟ್ ನಿರ್ವಿುಸಲು ಯೋಜನೆ ರೂಪಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ, ಅಗತ್ಯ ಕ್ರಮ ಕೈಗೊಳ್ಳುತ್ತೇವೆ.

| ಎಸ್.ಶಂಕರಪ್ಪ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ, ರಾಮನಗರ

Leave a Reply

Your email address will not be published. Required fields are marked *